ನಂದಿನಿ ಮೈಸೂರು
ಸಿದ್ದರಾಮಯ್ಯ ಕ್ಷೇತ್ರಗಳಲ್ಲಿ ಅಲೆದು ಅಲೆದು ಕೊನೆಗೆ ವರುಣಕ್ಕೆ ಬಂದಿದ್ದಾರೆ. ಚುನಾವಣೆಯಲ್ಲಿ ಗೆದ್ದು ತೋರಿಸಲಿ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಸವಾಲು ಹಾಕಿದರು.
ವರುಣ ವಿಧಾನಸಭಾ ಕ್ಷೇತ್ರದ ಮೈಸೂರಿನ ನಾಡನಹಳ್ಳಿ ಶ್ರೀ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಎಸ್.ಸಿ. ಮೋರ್ಚಾ ಬಹಿರಂಗ ಸಭೆಯನ್ನು ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ನನ್ನ ಐವತ್ತು ವರ್ಷ ರಾಜಕಾರಣದ ಜೀವನದಲ್ಲಿ ನಾನು ಹಂತ ಹಂತವಾಗಿ ಹೋರಾಟ ಮಾಡಿ ಬಂದಿದ್ದೇನೆ.ಯಾರಿಗೂ ನಾನು ತಲೆಬಾಗುವುದಿಲ್ಲ.ವರುಣಾ ಕ್ಷೇತ್ರದಲ್ಲಿ ವಿ.ಸೋಮಣ್ಣ ಸ್ಪರ್ಥಿಸುತ್ತಿದ್ದಾರೆ.ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಸ್ವಾತಂತ್ರ್ಯ ಬಂದ ಮೇಲೆ ದಲಿತರ ಸ್ಥಿತಿಗತಿಗಳು ಏನಿದೆ ಎಂಬುದನ್ನು ವಿಶೇಷವಾಗಿ ನರೇಂದ್ರ ಮೋದಿ ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದೇನೆ. ಕಾಂಗ್ರಸ್ ಸರ್ಕಾರದಿಂದ ದಲಿತರಿಗೆ ಏನು ಅನು ಕೊಲಗಳಾಗಿಲ್ಲ ಸಿದ್ದರಾಮಯ್ಯ ಸ್ವಾರ್ಥರಾಜಕಾರಿಣಿ ತಾವು ಮುಖ್ಯ ಮಂತ್ರಿಯಾಗಲು ತಮ್ಮಪಕ್ಷದ ಪರಮೆಶ್ವರವರನ್ನುಸೋಲಿಸಿದರು. ದಲಿತರನ್ನು ಬೆಳೆಯಲು ಬಿಡುತ್ತಿಲ್ಲ.ಮಲ್ಲಿಕಾರ್ಜುನ ಖರ್ಗೆ ಹೋರಾಟಗಾರರಲ್ಲ ಅವರು, ಅವಕಾಶವಾದಿ,ಮಲ್ಲಿಕಾರ್ಜುನ ಖರ್ಗೆ ಎಂದು ಹೋರಾಟ ಮಾಡಿ ಮೇಲೇ ಬಂದಿಲ್ಲ.ಖರ್ಗೆ ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದರು. ಆದರೆ ಅಧಿಕಾರ ಇಲ್ಲದೆ ಅವರು ಬದುಕಲಾರರು ಎಂದು ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಎಸ್.ಸಿ. ಮೋರ್ಚಾ ಅಧ್ಯಕ್ಷ ಸಿಎಂ ಮಹದೇವಯ್ಯ, ನಟ ಕೆ.ಶಿವರಾಂ, ವರುಣ ಮಂಡಲ ಅಧ್ಯಕ್ಷ ವಿಜಯಕುಮಾರ್ ಜಿಪಂ ಮಾಜಿ ಸದಸ್ಯ ಸದಾನಂದ, ಗುರುಸ್ವಾಮಿ,ಕಾಪು ಸಿದ್ದಲಿಂಗಸ್ವಾಮಿ,ಚುನಾವಣಾವೀಕ್ಷಕ ಚನ್ನೈ ರಾಜ್ಯ ದ ಪ್ರಕಾಶ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ರಾಜೇಂದ್ರ, ಅರಕಲವಾಢಿನಾಗೇಂದ್ರ ಬಿಜೆಪಿ ಮುಖಂಡರಾದ ನರಸಿಂಹ ಮೂರ್ತಿ, ವರಹಳ್ಳಿ ನಾಗೇಂದ್ರ, ಶ್ರೀಧರ ಶಿವಯ್ಯ,ಎಂ ಮಂಜು ಆನಂದರಾಜು, ಬಲರಾಜು ನರಸಿಂಹಮೂರ್ತಿ,ಸೇರಿದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.