ನಂದಿನಿ ಮೈಸೂರು
ಪುಟದಿಂದ ತೆರೆಗೆ ಅಪ್ಪಳಿಸಿ ಯಶಸ್ವಿ ಪ್ರದರ್ಶನ ಕಾಣುತಿರುವ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಾತ್ರವಾಗಿದ್ದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನಟ ಡಾಲಿ ಧನಂಜಯ್ ರವರ ಜೊತೆ ಸಿನಿಮಾ ವೀಕ್ಷಿಸಿದರು.
ಮೈಸೂರಿನ ಜಯಲಕ್ಷ್ಮೀಪುರಂ ನಲ್ಲಿರುವ ಡಿ.ಆರ್.ಸಿ ಗೆ ಆಗಮಿಸಿದ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಡಾಲಿ ಧನಂಜಯ್ ಅವರು ಹೂಗುಚ್ಚ ನೀಡಿ ಸ್ವಾಗತಿಸಿದರು. ದರ್ಶನ್ ಪುಟ್ಟಣ್ಣಯ್ಯ ಅಲ್ಲದೇ ಪಾಂಡವಪುರದ ಸುತ್ತಾ ಮುತ್ತಾ ಇರುವ ಕ್ಯಾತನಹಳ್ಳಿ, ಅರಳುಕುಪ್ಪೆ,ಎಣ್ಣೆಹೊಳೆಕೊಪ್ಪಲು,ಶಣಬ ಹಳ್ಳಿಗಳಿಂದ ರೈತರು ಹಾಗೂ ಮಂಡ್ಯ ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಎಲ್.ಕೆಂಪುಗೌಡ ,ಕೆಟಿ ಗೋವಿಂದೇಗೌಡರು,ರಘು,ಮಂಜುನಾಥ್,ಶ್ರೀನಿವಾಸ್,ಉಗ್ರ ನರಸಿಂಹಗೌಡ,ಮೂರ್ತಿ ರವರು ಕೂಡ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾ ನೋಡಿದರು.
ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ
ಸಿನಿಮಾ ನೋಡಿ ಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕ ನಾನು ಓದುತ್ತಿರುತ್ತೇನೆ.ಅವರು ಬರೆದ ಒಂದು ಕಥೆಯ ಪುಟವನ್ನ ಚಿತ್ರದ ಮೂಲಕ ತೆರೆಗೆ ತಂದಿದ್ದಾರೆ.ಒಂದು ಅದ್ಬುತ ಸಂದೇಶ ಸಾರುವ ಚಿತ್ರ ಇದಾಗಿದೆ. ಕುಟುಂಬ ಸಮೇತ ಎಲ್ಲರೂ ಚಿತ್ರಮಂದಿರಕ್ಕೆ ಆಗಮಿಸಿ ಚಿತ್ರ ವೀಕ್ಷೀಸಿ ಎಂದರಲ್ಲದೇ ಚಿತ್ರತಂಡಕ್ಕೆ ಶುಭ ಹಾರೈಸಿದರು.