ಮಹದೇವ / ನಂದಿನಿ ಮೈಸೂರು
ತಿ.ನರಸೀಪುರ ವಿಧಾನಸಭಾ ಕ್ಷೇತ್ರ ಬಿಜೆಪಿ ಯುವ ಘಟಕದ ವತಿಯಿಂದ ಹಮ್ಮಿಕೊಂಡಿರುವ ಮೋದಿ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಮೈಸೂರು ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ಮಂಗಳ ಸೋಮಶೇಖರ್ ಉದ್ಘಾಟಿಸಿದರು.
ತಿ.ನರಸೀಪುರ ತಾಲೂಕಿನ ಹೆಳವರಹುಂಡಿ ಗ್ರಾಮದ ಕಾಡು ಬಸವೇಶ್ವರ ದೇವಸ್ಥಾನದ ಸಮೀಪದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ಪಂದ್ಯಾವಳಿಯನ್ನು
ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡೆಯು ದೈಹಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ.ಪಂದ್ಯಾವಳಿಗಳು ಜನರ ನಡುವೆ ನಡೆಯುವ ಸೇತುವಾಗಿದೆ.ಹಾಗಾಗಿ ಕ್ರೀಡಾಪಟುಗಳು ಕ್ರೀಡಾಸ್ಫೂರ್ತಿ ಮೆರೆದು ಆಟವನ್ನು ಆಡಬೇಕು ಎಂದರು.ಕ್ರೀಡೆಗಳು ಮನರಂಜನೆ ಜೊತೆಗೆ ದೈಹಿಕವಾಗಿಯೂ ಮನುಷ್ಯನನ್ನು ಶಕ್ತಿಶಾಲಿಯಾಗಲು ಸಹಕರಿಸುವುದರಿಂದ ಯುವಕರು ಹೆಚ್ಚಾಗಿ ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕೆಂದು ಸಲಹೆ ನೀಡಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಸಿ.ಲೋಕೇಶ್ ನಾಯಕ್ ಮಾತನಾಡಿ,ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ.ಪಂದ್ಯಾವಳಿಯು ಸ್ಪರ್ಧಾತ್ಮಕವಾಗಿರುವುದರಿಂದ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು, ಪಂದ್ಯಾವಳಿಯಲ್ಲಿ ಯಾವುದೇ ಗೊಂದಲ,ಗಲಾಟೆಗೆ ಅವಕಾಶ ಮಾಡಿಕೊಡದೇ ಕ್ರೀಡಾ ಸ್ಪೂರ್ತಿ ಮೆರೆಯಬೇಕು.ಸೋಲು ಗೆಲುವು ಇಲ್ಲಿ ಮುಖ್ಯವಾಗಬಾರದು.ಕ್ರೀಡಾ ಮನೋಭಾವನೆ ಒತ್ತು ನೀಡಿ ಆಟ ಆಡಬೇಕು ಎಂದರು.
ಬಿಜೆಪಿ ಯುವ ಘಟಕದ ಅಧ್ಯಕ್ಷ ಕುರುಬೂರು ಶಿವು ಮಾತನಾಡಿ ಪಂದ್ಯಾವಳಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿದ್ದು,ಗೆದ್ದ ತಂಡಗಳಿಗೆ ಪ್ರಥಮ ಬಹುಮಾನವಾಗಿ 25000/- ಮತ್ತು ದ್ವೀತಿಯ
ಬಹುಮಾನವಾಗಿ
15000/- ರೂಗಳ ಜೊತೆ ಟ್ರೋಫಿ ನೀಡಲಾಗುತ್ತದೆ ಎಂದು ತಿಳಿಸಿದರು.
ಉದ್ಘಾಟನಾ ಪಂದ್ಯದಲ್ಲಿ ಕಮರವಾಡಿ ಮತ್ತು ಯಡದೊರೆ ತಂಡಗಳು ಮುಖಾಮುಖಿಯಾದವು.
ವರುಣಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಶರತ್ ಪುಟ್ಟಬುದ್ಧಿ,ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಿವಶಂಕರ್,ವರುಣಾ ಯುವ ಮೋರ್ಚಾದ ಅಧ್ಯಕ್ಷ ಮೋಹನ್ ಕುಮಾರ್ ,ಕರೋಹಟ್ಟಿ ಬಸವರಾಜು,ಹರೀಶ್ ,ಶ್ಯಾಮ್,ರಾಜೇಶ್,ಲಿಂಗರಾಜ್,ಮಹೇಂದ್ರ,ರವೀಂದ್ರ ,ಸತೀಶ್,ಮರಡಿಪುರ ನಾಗರಾಜು,ಮನೋಜ್,ಕರೋಹಟ್ಟಿ ಮಹದೇವ,ಚೌಹಳ್ಳಿ ಸಿದ್ದರಾಜು,ಗೂಳಿ ಮಹೇಶ್,ಚಾಮನಾಯಕ ಹಾಜರಿದ್ದರು.