ನಂದಿನಿ ಮೈಸೂರು
ಇತ್ತೀಚೆಗೆ ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ,ಪದಾಧಿಕಾರಿಗಳೊಂದಿಗೆ ಮೈಸೂರಿನ ಕುವೆಂಪು ನಗರ ಬಡಾವಣೆಯ ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಗುರುಭವನದ ಅಭಿವೃದ್ಧಿಯ ವಿಚಾರವಾಗಿ ಚರ್ಚಿಸಿದ್ದರು .
ಇಂದು ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಕೆ ವಿವೇಕಾನಂದರವರು ಮೈಸೂರು ಮಹಾನಗರ ಪಾಲಿಕೆಯ ಉಪ ಆಯುಕ್ತರಾದ (ಅಭಿವೃದ್ಧಿ ) ಸಿಂಧು ರವರೊಂದಿಗೆ ಭೇಟಿ ಮಾಡಿ ಗುರುಭವನದ ಅಭಿವೃದ್ಧಿ ವಿಚಾರವಾಗಿ ಹಾಜರಿದ್ದ ನಗರಪಾಲಿಕೆಯ ಅಭಿಯಂತರದೊಂದಿಗೆ ಚರ್ಚಿಸಿ ಸದರಿ ಗುರುಭವನದ ನವೀಕರಣಕ್ಕೆ ಸಂಬಂಧಿಸಿದಂತೆ ಅಂದಾಜು ಪಟ್ಟಿ ತಯಾರು ಮಾಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ವಲಯ ಆಯುಕ್ತರು ಹಾಗೂ ಅಭಿವೃದ್ಧಿ ಅಧಿಕಾರಿಗಳಾದ ಸತ್ಯಮೂರ್ತಿ, ಸಹಾಯಕ ಅಭಿಯಂತರಾದ ಮಣಿ ಹಾಗೂ ಇತರ ಅಭಿಯಂತರರು ಹಾಜರಿದ್ದರು.