ನಂದಿನಿ ಮನುಪ್ರಸಾದ್ ನಾಯಕ್
ಅಂಬೇಡ್ಕರ್ ದೇಶದ ಬಡಜನರ ಆಸ್ತಿ ಶಾಸಕ ದರ್ಶನ್ ಧ್ರುವನಾರಾಯಣ್
ಮಲ್ಕುಂಡಿ:- ಡಾ.ಬಿ ಆರ್ ಅಂಬೇಡ್ಕರ್ ಅವರು ದೇಶದ ಬಡಜನರ ಆಸ್ತಿಯಾಗಿದ್ದಾರೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.
ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಅಯೋಜಿಸಿದ ಡಾ.ಅಂಬೇಡ್ಕರ್ ಅವರ 134 ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ದೇಶದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನದಲ್ಲಿರುವ ಕಾನೂನು ಅರಿವು ಅತ್ಯಗತ್ಯವಾಗಿದೆ ಅದನ್ನು ಅರಿವು ಮೂಡಿಸುವ ಜವಾಬ್ದಾರಿ ದೇಶದ ಯುವ ಪೀಳಿಗೆಯ ಜವಾಬ್ದಾರಿಯಾಗಿದೆ ದಲಿತರ ಹಿಂದೂಳಿದ ವರ್ಗಗಳು ಸೇರಿದಂತೆ ಪ್ರತಿಯೊಂದು ವಿವಿಧ ಧರ್ಮಗಳ ವ್ಯಕ್ತಿಗಳಿಗೆ ರಕ್ಷಣೆ ನೀಡುವಂತಹ ಕಾನೂನನ್ನು ಸಂವಿಧಾನದಲ್ಲಿ ಅಳವಡಿಸುವುದ್ದರಿಂದ ದೇಶದ ಎಲ್ಲಾ ಜನತೆಯು ಉತ್ತಮ ನಡೆಸಲು ಅನುಕೂಲವಾಗಿದೆ ಸಮಾನತೆಯ ಸಮಾ ಸಮಾಜ ನಿರ್ಮಾಣ ಮಾಡಲು ಹಾಗೂ ದೇಶದಲ್ಲಿರುವ ಅಸ್ಪೃಶ್ಯತೆ ಹೋಗಲಾಡಿಸಲು ಹೋರಾಟ ಮಾಡಿದ ಮಹಾನ್ ವ್ಯಕ್ತಿ ಅಂಬೇಡ್ಕರ್ ಅವರು ಎಂದು ತಿಳಿಸಿದರು. ಮಾಜಿ ಮೇಯರ್ ಪೋರೂಷತ್ತಮ್ ಮಾತನಾಡಿ ಡಾ.ಅಂಬೇಡ್ಕರ್ ಅವರು ದೇಶದಲ್ಲಿ ಸಂವಿಧಾನ ರಚನೆ ಮಾಡದಿದ್ದರೆ ನಾವು ಈ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ ಡಾ.ಅಂಬೇಡ್ಕರ್ ಅವರು.ಅವರ ಜಯಂತಿಯನ್ನು ಪ್ರತಿ ದಿನ ಆಚರಣೆ ಮಾಡಿ ಪ್ರತಿದಿನ ಡಾ. ಅಂಬೇಡ್ಕರ್ ಅವರ ಸಂವಿಧಾನವನ್ನು ನೆನೆಪಿಸುವಂತಾಗಬೇಕು.ಅವರ ಸಂವಿಧಾನದಲ್ಲಿ ನೀಡಿರುವ ಸಿದ್ದಾಂತಗಳನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅದ್ಯಕ್ಷ ಕೆ ದೀಪಕ್ ಮಾತನಾಡಿದರು.
ಈ ವೇಳೆ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕಾಂಗ್ರೆಸ್ ಮುಖಂಡ ವಿ ರಾಮಸ್ವಾಮಿ,ನಗರ ಸಭಾಧ್ಯಕ್ಷ ಸ್ವಾಮಿ,ವಕೀಲ ಉಮೇಶ್, ಗ್ರಾ ಪಂ ಅದ್ಯಕ್ಷೆ ದೇವಮ್ಮ,ಉಪಾಧ್ಯಕ್ಷ ಲೋಕೇಶ್,ಹುಲ್ಲಹಳ್ಳಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶ್ರೀಕಂಠನಾಯಕ, ವಕೀಲ ನಾಗರಾಜಯ್ಯ,ಬಸವಣ್ಣ,ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಬಸವರಾಜ್, ದೇಬೂರ್ ಆಶೋಕ್,ದಸಂಸ ಮುಖಂಡ ಶಂಕರಪುರ ಮಂಜು,ಭೀಮ ಬಳಗದ ಅದ್ಯಕ್ಷ ಚಂದ್ರು,ಉಪಾಧ್ಯಕ್ಷ ಪ್ರಸಾದ್ ಸೇರಿದಂತೆ ಡಾ ಅಂಬೇಡ್ಕರ್ ಯುವಕ ಸಂಘದವರು ಹಾಜರಿದ್ದರು