ಮೈಕ್ರೋ ಪೈನಾನ್ಸ್ ಕಿರುಕುಳಕ್ಕೆ ಬಲಿಯಾದ ಕುಟುಂಬಕ್ಕೆ ಸಾಂತ್ವನ ಹೇಳದ ಸಚಿವ
ನಂಜನಗೂಡು :- ತಾಲ್ಲೂಕಿನಲ್ಲಿವ ಮೈಕ್ರೋ ಫೈನಾನ್ಸ್ ಗಳಿಂದ 50 ಫಲಾನುಭವಿಗಳು ಗ್ರಾಮ ಬಿಟ್ಟು ಹೋಗಿದ್ದಾರೆ. ಕೆಲವು ಗ್ರಾಮಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಘಟನೆಗಳು ನಡೆದಿದ್ದರೂ ಗ್ರಾಮಗಳಿಗೆ ಹೋಗಿ ಸಾಂತ್ವನ ಹೇಳಿದ್ದಾರಾ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಸಿ.ಮಹದೇವಪ್ಪ ಅವರ ವಿರುದ್ಧ ಮಾಜಿ ಕಾಂಪೋಸ್ಟ್ ನಿಗಮ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಎಸ್.ಮಹದೇವಯ್ಯ ಕಿಡಿಕಾರಿದರು.
ಪಟ್ಟಣದ ತಾಲ್ಲೂಕು ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು
ಎರಡು ವರ್ಷ ಆಗಿದೆ. ಕ್ಷೇತ್ರದಲ್ಲಿ ಯಾವುದೇ ಕೆಲಸವಾಗಿಲ್ಲ ಆಗಲು ಒಂದು ಸಭೆಯನ್ನಾದರೂ ಕರೆದಿಲ್ಲ.
ಮೈಸೂರು ಜಿಲ್ಲಾ ಕಚೇರಿಗೆ ಮಾತ್ರ ಬಂದು ಹೋಗುತ್ತಾರೆ, ಇದುವರೆಗೂ ತಾಲೂಕುಗಳಲ್ಲಿ ಕೆಡಿಪಿ ಸಭೆ ಏನಾದರೂ ಮಾಡಿಲ್ಲ ಎಂದು ಆಪಾದಿಸಿದರು.
ತಾಲೂಕು ಕಚೇರಿಗಳಲ್ಲಿ ರೈತರ ಹಾಗೂ ಸಾರ್ವಜನಿಕರು ಕೆಲಸಗಳು ಆಗುತ್ತಿಲ್ಲ ಸಬೂಬು ಹೇಳುತ್ತಾರೆ,ಯಾವುದೇ ಕೆಲಸಗಳು ಆಗುತ್ತಿಲ್ಲ.
ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ರೈತರ ಕೆಲಸಗಳು ಮಾಡಿಕೊಡದೆ, ಸರ್ವರ್ ಇಲ್ಲ ಸರ್ವರ್ ಬಂದಿಲ್ಲ ಎಂದು ರೈತರಿಗೆ ನರಕ ಯಾತ್ರೆ ಮಾಡುತ್ತಾರೆ ಎಂದು ಅಲೆದಾಡಿಸುತ್ತಾರೆ ಎಂದು ಬಿಜೆಪಿ ಹಿರಿಯ ಮುಖಂಡ ಎಸ್. ಮಹದೇವಯ್ಯ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ವೃಷಬೇಂದ್ರಪ್ಪ, ಮಂಜು, ವೀರಶೈವ ತಾಲೂಕು ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ, ಕಪ್ಪಸೋಗೆ ರವಿ, ಉಮೇಶ್ ಮೋದಿ, ಸೇರಿದಂತೆ ಉಪಸ್ಥಿತರಿದ್ದರು.