ನಂದಿನಿ ಮೈಸೂರು
ಹಬ್ಬದ ಋತುವಿಗಾಗಿ ಫೆಸ್ಟಿವ್ ಕಲೆಕ್ಷನ್ 2023ಕ್ಕೆ
ಜೀವನಶೈಲಿ ಬ್ರ್ಯಾಂಡ್ ಮ್ಯಾಕ್ಸ್ ಫ್ಯಾಷನ್ ಚಾಲನೆ
ದುಬೈ ಮೂಲದ ರಿಟೇಲ್ ಸರಪಳಿಯು ಕರ್ನಾಟಕದಲ್ಲಿ ರಿಟೇಲ್ ವ್ಯಾಪಾರವನ್ನು ವಿಸ್ತರಿಸಲು ಯೋಜಿಸಿದೆ, 4 ಹೊಸ ಮಳಿಗೆಗಳನ್ನು ಸ್ಥಾಪಿಸುವ ಮೂಲಕ ರಾಜ್ಯದಲ್ಲಿ ತನ್ನ ಮಳಿಗೆಗಳ ಸಂಖ್ಯೆಯನ್ನು 70ಕ್ಕೆ ಏರಿಸಿದೆ.
ಕೈಗೆಟುಕುವ ದರದಲ್ಲಿ ಫ್ಯಾಶನ್ ಉಡುಪುಗಳಿಗೆ ಪ್ರಸಿದ್ಧ ಹೆಸರಾದ ಮ್ಯಾಕ್ಸ್ ಫ್ಯಾಷನ್ ಸ್ಟೋರ್, ದೇಶಾದ್ಯಂತ ಫ್ಯಾಷನ್ ಆಸಕ್ತರಿಗೆ ಶಾಪಿಂಗ್ ಅನುಭವವನ್ನು ಉತ್ತೇಜಿಸುವ ಗುರಿಯೊಂದಿಗೆ ಅತ್ಯಾಕರ್ಷಕ ವಿಸ್ತರಣಾ ಯೋಜನೆಯನ್ನು ಘೋಷಿಸಲು ಪುಳಕಗೊಂಡಿದೆ.
ಉತ್ತಮ-ಗುಣಮಟ್ಟದ ಫ್ಯಾಷನ್ ಸರಕುಗಳನ್ನು ಎಲ್ಲರಿಗೂ ತಲುಪಿಸುವ ಉದ್ದೇಶದಿಂದ, ಮ್ಯಾಕ್ಸ್ ಫ್ಯಾಷನ್ ಸ್ಟೋರ್ ಈ ಹಣಕಾಸು ವರ್ಷದ ವೇಳೆಗೆ ಕರ್ನಾಟಕದ ಪ್ರಮುಖ ಪಟ್ಟಣಗಳಲ್ಲಿ 70 ಹೊಸ ಮಳಿಗೆಗಳನ್ನು ತೆರೆಯಲು ಸಜ್ಜಾಗಿದೆ. ಮೈಸೂರು ಕಾಳಿದಾಸ ಸ್ಟೋರ್‌ನಲ್ಲಿ ದಸರಾ ಹಬ್ಬವನ್ನು ಆಚರಿಸುತ್ತಿರುವ ಮ್ಯಾಕ್ಸ್ ಫ್ಯಾಷನ್ ತನ್ನ ಇತ್ತೀಚಿನ ರೋಮಾಂಚಕ ಮತ್ತು ವೈವಿಧ್ಯಮಯ ಹಬ್ಬದ ಸಂಗ್ರಹವನ್ನು ಅತ್ಯಂತ ಅಭಿಮಾನದಿಂದ ಅನಾವರಣಗೊಳಿಸಿದೆ. ಸಂಗ್ರಹವು ‘ಕನಿಷ್ಠ ಬೆಲೆಯಲ್ಲಿ ಗರಿಷ್ಠ ಸ್ಟೈಲ್’ ಅನ್ನು ನೀಡಲು ಶ್ರಮಿಸುತ್ತಿದೆ; ಬ್ರ್ಯಾಂಡ್‌ನ ಉತ್ಸಾಹ ಮತ್ತು ವ್ಯಾಪಕ ಶ್ರೇಣಿಯ ಟ್ರೆಂಡಿ ಮತ್ತು ಸಾಂಪ್ರದಾಯಿಕ ಉಡುಪುಗಳೊಂದಿಗೆ, ಆಧುನಿಕ ಗ್ರಾಹಕರ ವೈವಿಧ್ಯಮಯ ಫ್ಯಾಷನ್ ಆದ್ಯತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ಸಂಪ್ರದಾಯವನ್ನು ಗೌರವಿಸುವ ಮತ್ತು ಮೈಸೂರಿನಲ್ಲಿ ದಸರಾ ಆಚರಣೆಯನ್ನು ಸಂಭ್ರಮಿಸುವ ಉದ್ದೇಶದಿಂದ ಒಂದು NGO ಜೊತೆಗೆ ಸಹಭಾಗಿತ್ವವನ್ನು ಹೊಂದಿರುವ ಮ್ಯಾಕ್ಸ್, ಈ ಋತುವಿನಲ್ಲಿ ಉಡುಗೊರೆಗಳ ವಿನಿಮಯವನ್ನು ಪ್ರಾರಂಭಿಸಲು ಮಕ್ಕಳನ್ನು ವೇದಿಕೆಗೆ ಆಹ್ವಾನಿಸಿತು.
ಮ್ಯಾಕ್ಸ್ ಫ್ಯಾಷನ್ ಸಂಸ್ಥೆಯ ಉಪಾಧ್ಯಕ್ಷರು ಮತ್ತು ಕರ್ನಾಟಕ ಮತ್ತು ಗೋವಾ ರೀಜನಲ್ ಬ್ಯುಸಿನೆಸ್ ಹೆಡ್ ಆಗಿರುವ ಪ್ರಶಾಂತ್ ಪಾಲ್ ಅವರು ಈ ವಿಸ್ತರಣೆಯ ಬಗ್ಗೆ ಉತ್ಸುಕತೆಯನ್ನು ವ್ಯಕ್ತಪಡಿಸಿ, “ಫ್ಯಾಷನ್ ಅನ್ನು ಎಲ್ಲರಿಗೂ ಅಂತರ್ಗತ ಮತ್ತು ಆನಂದದಾಯಕ ಅನುಭವವನ್ನಾಗಿ ಮಾಡಲು ನಾವು ಬಹಳ ಶ್ರದ್ಧೆ ಮತ್ತು ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತಿದ್ದೇವೆ. ನಮ್ಮ ವಿಸ್ತರಣಾ ಯೋಜನೆಯು ಇನ್ನಷ್ಟು ಸಮುದಾಯಗಳಿಗೆ ಕೈಗೆಟುಕುವ ದರದಲ್ಲಿ ಶೈಲಿಯನ್ನು ತರುವ ಮತ್ತು ನಮ್ಮ ಗ್ರಾಹಕರೊಂದಿಗೆ ವೈಯಕ್ತಿಕ ಮಟ್ಟದಲ್ಲಿ ಸಂಪರ್ಕ ಸಾಧಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ” ಎಂದು ವಿವರಿಸಿದರು.
ಕನ್ನಡ ಚಿತ್ರನಟಿ ನಿಶ್ವಿಕಾ ನಾಯ್ಡು ಅವರ ಉಪಸ್ಥಿತಿಯು ಹಬ್ಬದ ಸಂಗ್ರಹದ ಭವ್ಯವಾದ ಅನಾವರಣದ ಸಂಭ್ರಮವನ್ನು ಉತ್ತುಂಗಕ್ಕೇರಿಸಿತು. ಸೆಲೆಸ್ಟಿಯಲ್ ಪಾಪ್‌ನ ಇತ್ತೀಚಿನ ಸಂಗ್ರಹ ಮತ್ತು ಫೆಸ್ಟಿವ್ ಗ್ಲಾಮ್ ಸಂಗ್ರಹದೊಂದಿಗೆ ಅಲಂಕರಿಸಿದ ಸೊಗಸಾದ ಮಾದರಿಗಳನ್ನು ಅವರು ಅನಾವರಣಗೊಳಿಸಿದರು. ಉತ್ಸವಗಳಿಗೆ ಹಬ್ಬದ ಗ್ಲಾಮರ್ ಅಂಶವನ್ನು ಸೇರಿಸುವ ಮೂಲಕ, ಪ್ರೀತಿಯ ನಟಿ ನಿಶ್ವಿಕಾ ಅವರು ಈ ಸಂಭ್ರಮದ ಋತುವಿನ ಸಾರವನ್ನು ಸೆರೆಹಿಡಿದಿರುವ ಮ್ಯಾಕ್ಸ್ ಫ್ಯಾಷನ್‌ನ ಇತ್ತೀಚಿನ ಲುಕ್ ಬುಕ್ ಅನ್ನು ಅನಾವರಣಗೊಳಿಸಿದರು. ನಿಶ್ವಿಕಾ ಅವರ ಉಪಸ್ಥಿತಿಯು ಸಂಭ್ರಮಾಚರಣೆಗೆ ಒಂದು ಮಾಂತ್ರಿಕ ಸ್ಪರ್ಶವನ್ನು ನೀಡಿತು.
ಲ್ಯಾಂಡ್ ಮಾರ್ಕ್ ಗ್ರೂಪ್ – ಮ್ಯಾಕ್ಸ್ ಫ್ಯಾಷನ್‌ನ ಭಾರತೀಯ ಉಪಾಧ್ಯಕ್ಷರು ಮತ್ತು ಮಾರ್ಕೆಟಿಂಗ್ ಮುಖ್ಯಸ್ಥರಾದ ಪಲ್ಲವಿ ಪಾಂಡೆ ಅವರು ಮಾತನಾಡಿ, “ಈ ದಸರಾ ಸಂದರ್ಭದಲ್ಲಿ, ನಮ್ಮ ಆತ್ಮೀಯ ಗ್ರಾಹಕರೊಂದಿಗೆ ಹಬ್ಬದ ಉತ್ಸಾಹವನ್ನು ಇನ್ನಷ್ಟು ಪ್ರಕಾಶಮಾನಗೊಳಿಸಲು ನಾವು ರೋಮಾಂಚನಗೊಂಡಿದ್ದೇವೆ. ದಸರಾ ಶಾಪಿಂಗ್‌ನಲ್ಲಿ ಮ್ಯಾಕ್ಸ್ ಸದಾ ಮುಂಚೂಣಿಯಲ್ಲಿರುತ್ತದೆ. ಈ ವರ್ಷ, ನಮ್ಮ ಇತ್ತೀಚಿನ ಸಂಗ್ರಹಗಳಾದ ‘ಸೆಲೆಸ್ಟಿಯಲ್ ಪಾಪ್’ ಮತ್ತು ‘ಫೆಸ್ಟಿವ್ ಗ್ಲಾಮ್’ ಅನ್ನು ಆಚರಣೆಯ ಕೇಂದ್ರಬಿಂದುವಾಗಿ ಅನಾವರಣಗೊಳಿಸಲು ನಾವು ಸಂತೋಷಪಡುತ್ತೇವೆ. ಅತ್ಯಾಕರ್ಷಕ ನಗರವಾದ ಮೈಸೂರಿನಲ್ಲಿ ಈ ಸಂಗ್ರಹವನ್ನು ನಾವು ಹೆಮ್ಮೆಯಿಂದ ಆರಂಭಿಸಿದ್ದು, ಇದು ನಮ್ಮನ್ನು ಉತ್ಸಾಹಿತರಾಗಿಯೂ ಉತ್ತೇಜಿತರಾಗಿಯೂ ಮಾಡಿದೆ. ಅಲ್ಲದೆ, ಕ್ರಿಯಾತ್ಮಕವಾಗಿರುವ ಕರ್ನಾಟಕದ ಮಾರುಕಟ್ಟೆಯಲ್ಲಿ ನಮ್ಮ ರಿಟೇಲ್ ಹೆಜ್ಜೆಗುರುತನ್ನು ಮತ್ತಷ್ಟು ವಿಸ್ತರಿಸಲು ನಾವು ಕಾತುರರಾಗಿದ್ದೇವೆ. ಫ್ಯಾಷನ್ ಮತ್ತು ಉತ್ಸವಗಳ ಸಂತೋಷವನ್ನು ಇನ್ನೂ ಹೆಚ್ಚಿನ ಶಾಪರ್‌ಗಳೊಂದಿಗೆ ಹಂಚಿಕೊಳ್ಳಲು ಉತ್ಸುಕರಾಗಿದ್ದೇವೆ “ಎಂದರು.
ಈ ವಿಸ್ತರಣೆಯು ಹೊಸ ಮಳಿಗೆಗಳನ್ನು ತೆರೆಯುವುದರ ಬಗ್ಗೆ ಮಾತ್ರವಲ್ಲದೆ ನಾವು ಸೇವೆ ಸಲ್ಲಿಸುವ ಸಮುದಾಯಗಳಲ್ಲಿ ನಾವೂ ಸೇರಿದ್ದೇವೆ ಎಂಬ ಪ್ರಜ್ಞೆಯನ್ನು ಬೆಳೆಸುವುದಕ್ಕೂ ಒತ್ತು ನೀಡಿದೆ. ನಮ್ಮ ಗಳಿಗೆಯ ಒಂದು ಭಾಗವನ್ನು ವಿವಿಧ ಸಮುದಾಯ ಉಪಕ್ರಮಗಳ ಮೂಲಕ ಸಮಾಜಕ್ಕೆ ಮರಳಿ ನೀಡಲು ಮತ್ತು ಆ ಮೂಲಕ ನಮ್ಮ ಅಮೂಲ್ಯ ಗ್ರಾಹಕರ ಜೊತೆಗಿನ ಬಾಂಧವ್ಯವನ್ನು ಬಲಪಡಿಸಲು ಮ್ಯಾಕ್ಸ್ ಫ್ಯಾಷನ್ ಸ್ಟೋರ್ ಬದ್ಧವಾಗಿದೆ. ಇಷ್ಟು ವರ್ಷಗಳಲ್ಲಿ, ಈ ಉದ್ಯಮದಲ್ಲಿ ವಿಶ್ವಾಸಾರ್ಹ ಜೀವನಶೈಲಿ ಬ್ರ್ಯಾಂಡ್ ಆಗಿ ಮ್ಯಾಕ್ಸ್ ಫ್ಯಾಶನ್ಸ್ ತನ್ನನ್ನು ತಾನು ಪ್ರತಿಷ್ಠಾಪಿಸಿಕೊಂಡಿದೆ. ಎಲ್ಲರಿಗೂ ಸೊಗಸಾದ, ಕೈಗೆಟುಕುವ, ಸುಸ್ಥಿರ ಉಡುಪುಗಳನ್ನು ತಲುಪಿಸುವ ಬದ್ಧತೆಯೊಂದಿಗೆ ಗ್ರಾಹಕರ ತೃಪ್ತಿಗಾಗಿ ಪ್ರಸಿದ್ಧವಾಗಿದೆ. ದಕ್ಷಿಣದಲ್ಲಿ ವಿಸ್ತರಣಾ ಯೋಜನೆಗಳು ಮತ್ತು ಹೆಚ್ಚಿದ ಕಾರ್ಯಾಚರಣೆಗಳತ್ತ ಈ ಬ್ರ್ಯಾಂಡ್ ಗಮನಹರಿಸಿದ್ದು, ಅತ್ಯುತ್ತಮ ಪರಿಕರಗಳ ಮೂಲಕ ಗ್ರಾಹಕರಿಗೆ ಸಂತೃಪ್ತಿಯನ್ನು ಪರಿಣಾಮಕಾರಿಯಾಗಿ ಒದಗಿಸಲು ಉತ್ಸುಕವಾಗಿದೆ.