ಪಿರಿಯಾಪಟ್ಟಣ:14 ಆಗಸ್ಟ್ 2022
ನಂದಿನಿ ಮೈಸೂರು
ಪಿರಿಯಾಪಟ್ಟಣದ ಮೇದರ್ ಬ್ಲಾಕ್ ನಲ್ಲಿರುವ ಜನ್ನತುಲ್ ಫಿರ್ದೋಸ್ ಮಸೀದಿ ಆಡಳಿತ ಮಂಡಳಿ ಮೇಲೆ ಹಣ ದುರುಪಯೋಗದ ದೂರು ನೀಡಿದ್ದ ಹಿನ್ನೆಲೆ ಆಡಿಟ್ ಅಧಿಕಾರಿಗಳು ಮಸೀದಿಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿದರು.
ಮಸೀದಿಯಲ್ಲಿ 25 ವರ್ಷಗಳಿಂದ ಕಾರ್ಯದರ್ಶಿಯಾಗಿರುವ ಅಕ್ಮಲ್ ಸದಸ್ಯರುಗಳಾದ ಸಾಧಿಕ್, ಜಾವೀದ್, ಎಕ್ಬಾಲ್ ಮತ್ತು ಗಫ್ಫಾರ್ ಅಹಮದ್ ಎಂಬುವವರು ಮಸೀದಿ ಕಟ್ಟಡ ನಿರ್ಮಾಣಕ್ಕಾಗಿ ಸಾರ್ವಜನಿಕರಿಂದ ಚಂದಾ ಸ್ವೀಕರಿಸಿ ರಸಿದಿ ನೀಡದೆ ಅಕ್ರಮವೆಸಗಿರುವ ವಿಚಾರವಾಗಿ ಸ್ಥಳೀಯರು ಹಾಗೂ ಆಡಳಿತ ಮಂಡಳಿಯವರ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ನಡೆದಿತ್ತು ಸ್ಥಳೀಕರು ದೂರು ನೀಡಿದ್ದರು ಈ ಹಿನ್ನೆಲೆ ಮಸೀದಿಗೆ ಆಡಿಟ್ ಅಧಿಕಾರಿಗಳು ಭೇಟಿ ನೀಡಿ ದಾಖಲೆಗಳನ್ನು ಪರೀಶಿಲಿಸಿ ಲೆಕ್ಕಪರಿಶೋಧನೆ ಮಾಡಿ ಅಕ್ರಮ ಎಸಗಿರುವುದು ಕಂಡುಬಂದಲ್ಲಿ ವಕ್ಫ್ ಬೋರ್ಡ್ ಬೆಂಗಳೂರು ಕಛೇರಿಗೆ ವರದಿ ಸಲ್ಲಿಸಿ ತಪ್ಪಿಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ತಿಳಿಸಿದರು.
ಪ್ರಸ್ತುತ ಮೂರು ವರ್ಷಗಳ ಲೆಕ್ಕ ಪರಿಶೋಧನೆ ಮಾಡಲಾಗುತ್ತಿದ್ದು ಉಳಿದ 22 ವರ್ಷಗಳ ಲೆಕ್ಕ ಪರಿಶೋಧನೆ ಬಾಕಿ ಇರುತ್ತದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಮೊಹಮ್ಮದ್, ಸರ್ದಾರ್ ಪಾಷಾ, ಮಹಮ್ಮದ್, ಮುಜಾಹಿದ್, ಜೈನುಲ್ಲಾಬ್ದಿನ್, ಶಮೀಲ್ ಅಹಮದ್, ಸೈಯದ್ ತಾಹೀರ್, ಮೊಹ್ಮದ್ ಜಾವೀದ್ ಮತ್ತಿತರಿದ್ದರು.