ಮೈಸೂರು:25 ಮೇ 2022
ನಂದಿನಿ ಮೈಸೂರು
ಮಣಿಪಾಲ್ ಆಸ್ಪತ್ರೆಯಲ್ಲಿ ಅರ್ಯೋಟಿಕ್ ಸರ್ಜರಿ ಯಶಸ್ವಿಯಾಗಿದೆ ಎಂದು
ಮಣಿಪಾಲ್ ಆಸ್ಪತ್ರೆಯ ಕಾರ್ಡಿಯೋಥೊರಾಸಿಕ್ ವ್ಯಾಸ್ಕ್ಯುಲರ್ ಸರ್ಜನ್ ಡಾ.ಉಪೇಂದ್ರ ಶಣೈ ತಿಳಿಸಿದರು.
ಮೈಸೂರಿನ ಮಣಿಪಾಲ್ ಆಸ್ಪತ್ರೆಯ ಹೃದ್ರೋಗ ಮತ್ತು ವ್ಯಾಸ್ಕ್ಯುಲರ್ ತಜ್ಞರ ತಂಡವು ಕಳೆದ 36 ತಿಂಗಳುಗಳಲ್ಲಿ 12 ಅರ್ಯೋಟಿಕ್ ಸರ್ಜರಿಗಳನ್ನು ಯಶಸ್ವಿಯಾಗಿ ನಡೆಸಿದೆ. 25 ವರ್ಷಗಳಿಗೂ ಮೀರಿದ ಅನುಭವವುಳ್ಳ ಇಡೀ ತಂಡದ ಪ್ರಯತ್ನದಿಂದ ರೋಗಿಗಳಿಗೆ ಯಶಸ್ವಿ ಚಿಕಿತ್ಸೆ ನೀಡಲಾಗಿದೆ.
ಅರ್ಯೋಟಿಕ್ ಸರ್ಜರಿಯಲ್ಲಿ ಯಾವೆಲ್ಲಾ ಕ್ಲಿಷ್ಟಕರ ಅಂಶಗಳಿರುತ್ತವೆ, ಅದನ್ನು ಮಣಿಪಾಲ್ ಆಸ್ಪತ್ರೆಯಲ್ಲಿ ಎಷ್ಟು ಯಶಸ್ವಿಯಾಗಿ ನಿರ್ವಹಿಸಲಾಗುತ್ತದೆ, ಮಣಿಪಾಲ್ ಆಸ್ಪತ್ರೆಯಲ್ಲಿ ಈ ಚಿಕಿತ್ಸೆಗೆ ಯಾವೆಲ್ಲಾ ಅತ್ಯಾಧುನಿಕ ಹಾಗೂ ಸುರಕ್ಷಿತ ಸೌಲಭ್ಯಗಳಿವೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಕನ್ಸಲ್ಟೆಂಟ್ ಇಂಟರ್‌ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ.ಸಿ.ಬಿ.ಕೇಶವಮೂರ್ತಿ ,
ಪ್ರಮೋದ್ ಭಾಗಿಯಾಗಿದ್ದರು.