ನಂದಿನಿ ಮೈಸೂರು
ಮೈಸೂರಿನ ಗೋಕುಲಂ ಪಾರ್ಕ್ ರೋಡ್‌ನ ಮನೆ ನಂ.೩೦೪೬ರ ವೈಷ್ಣವಿ ನಿಲಯದಲ್ಲಿ ಪ್ರತಿಷ್ಠಾಪಿಸಲಾಗಿರುವ ವಿವಿಧ ಬಗೆಯ ಸಾವಿರಾರು ಬೊಂಬೆಗಳ ಪ್ರದರ್ಶನ ಬೊಂಬೆ ಪ್ರಿಯರ ಮನಸೆಳೆಯುತ್ತಿದೆ.
ನೋಡು ಬಾರಯ್ಯ…
ಚೆಂದದ ಬೊಂಬೆ ಮನೆಯಾ..
ಕಣ್ಮನ ಸೆಳೆದ ಆಕರ್ಷಕ ಬೊಂಬೆ ದಸರಾ
ಮೈಸೂರು: ಆ ಮನೆಯಲ್ಲಿದೆ ದಸರಾ ಅಂಬಾರಿ, ಪೊಲೀಸ್ ಬ್ಯಾಂಡ್ ತಂಡ, ಸುಮಾರು ೧೪೦ ವರ್ಷಗಳಷ್ಟು ಹಳೆಯದಾದ `ನೀಲಿ ಬಣ್ಣದ ಕೃಷ್ಣ’ ಸೇರಿದಂತೆ ವಿವಿಧ ತರಾವರಿಯ ಪುಟ್ಟ ಹಾಗೂ ದೊಡ್ಡದಾದ ಆಕರ್ಷಕ ಬೊಂಬೆಗಳು.
ಹೌದು ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಒಳಗೊಂಡಂತೆ ರಾಜ ಮಹಾರಾಜರುಗಳು, ಶ್ರೀ ವಿಷ್ಣು, ಶ್ರೀಕೃಷ್ಣಲೀಲೆ, ಲಕ್ಷ್ಮಿ ವೆಂಕಟೇಶ್ವರ, ಶಿವಲಿಂಗ, ಸಾಯಿಬಾಬಾ, ರಾಘವೇಂದ್ರ ಸ್ವಾಮಿ, ಮದುವೆ ಮನೆಯ ಚಿತ್ರಣ, ಹಲವು ಮಾದರಿಯ ಬಗೆ ಬಗೆಯ ಖಾದ್ಯಗಳು, ಹಣ್ಣು-ಹಂಪಲುಗಳು ಮತ್ತು ಸಾವಿರಾರು ಬೊಂಬೆಗಳು, ಬೊಂಬೆ ಪ್ರಿಯರ ಮನ ಸೆಳೆಯುತ್ತಿದೆ.
ಗೋಕುಲಂ ಪಾರ್ಕ್ ರೋಡ್‌ನ ಮನೆ ನಂ.೩೦೪೬ರ ವೈಷ್ಣವಿ ನಿಲಯದಲ್ಲಿ ಈ ಬೊಂಬೆಗಳ ಜೋಡಣೆ ಮಾಡಲಾಗಿದ್ದು, ಅಷ್ಟೂ ಬೊಂಬೆಗಳನ್ನು ಅಚ್ಚುಕಟ್ಟಾಗಿ ಜೋಡಿಸಲು ಸುಮಾರು ೧೦ ದಿನಗಳು ಬೇಕಾಯಿತು. ಆದರೆ ಮತ್ತೆ ಅದನ್ನು ಹಾಗೆಯೇ ಸಂಪೂರ್ಣವಾಗಿ ತೆರವುಗೊಳಿಸಿ ಜೋಪಾನವಾಗಿ ಪ್ಯಾಕ್ ಮಾಡಿ ಇಡಲೂ ಕೂಡಾ ಅಷ್ಟೇ ದಿನಗಳು ಬೇಕಾಗುತ್ತದೆ ಎನ್ನುತ್ತಾರೆ ಮನೆ ಮಾಲೀಕರಾದ ವೈದ್ಯನಾಥನ್.
ಸಿಎ (ಚಾರ್ಟರ್ಡ್ ಅಕೌಂಟೆಂಟ್) ಆಗಿರುವ ವೈದ್ಯನಾಥನ್ ಅವರು