ಚಾಮುಂಡಿಪುರಂನಲ್ಲಿ ಮನೆ ಮನೆ ದಸರಾಗೆ ಶಾಸಕ ಶ್ರೀವತ್ಸ ಹಸಿರು ನಿಶಾನೆ

ನಂದಿನಿ ಮೈಸೂರು

ಚಾಮುಂಡಿಪುರಂನಲ್ಲಿ ಮನೆ ಮನೆ ದಸರಾ ಉದ್ಘಾಟನೆ

ಸಂಸ್ಕೃತಿ ಬಿಂಬಿಸುವ ಹಬ್ಬಗಳು’ :ಟಿ ಎಸ್ ಶ್ರೀವತ್ಸ

ಜನಮನ ವೇದಿಕೆ ಹಾಗೂ ಮಾಜಿನಗರ ಪಾಲಿಕಾ ಸದಸ್ಯರಾದ ಮಾ ವಿ ರಾಮ್ ಪ್ರಸಾದ್ ನೇತೃತ್ವದಲ್ಲಿ
ವಾರ್ಡ್ ನಂಬರ್ 55ರ ಚಾಮುಂಡಿಪುರಂ ವೃತ್ತದಲ್ಲಿರುವ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ನಾಡಹಬ್ಬ ದಸರಾ ವೈಭವವನ್ನು ಮನೆಮನೆಯಲ್ಲೂ ಆಚರಿಸುವಂತೆ ಹಾಗೂ ಎಲ್ಲರೂ ಈ ನಾಡ ಹಬ್ಬವನ್ನು ಆಚರಿಸಿ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ದೃಷ್ಟಿಯಿಂದ ಅಕ್ಟೋಬರ್ 5 ಮತ್ತು 6 ನೇ ತಾರೀಕು ಚಿತ್ರ ಬಿಡಿಸುವ ಸ್ಪರ್ಧೆ, ಪೌರಕಾರ್ಮಿಕರಿಗೆ ಆಟೋಟ ಸ್ಪರ್ಧೆ, ವಿಶೇಷ ಮಕ್ಕಳಿಗೆ ಆಟೋಟ ಸ್ಪರ್ಧೆ, ಹಾಗೂ ಮಹಿಳೆಯರು ಹಾಗೂ ಮಕ್ಕಳಿಗೆ ಮತ್ತು ಪುರುಷರಿಗೂ ಆಟೋಟ ಸ್ಪರ್ಧೆ ಹಾಗೂ ಮನೆಮನೆ ಗೊಂಬೆ ಕುರಿಸುವ ಸ್ಪರ್ಧೆ ಮೂಲಕ ಮನೆ ಮನೆ ದಸರಾ ವನ್ನು ಆಯೋಜಿಸಿದ್ದು ಅದರ ಉದ್ಘಾಟನೆಯನ್ನು ಶಾಸಕರಾದ ಟಿ ಎಸ್‌ ಶ್ರೀವತ್ಸ ಆಟೋಟ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು
ರಾಜ್ಯದ ಅತಿದೊಡ್ಡ ಹಬ್ಬ ನವರಾತ್ರಿ. ಇದು ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ನಮ್ಮದು ಸಾಂಸ್ಕೃತಿಕ ಶ್ರೀಮಂತ ದೇಶವಾಗಿರುವುದರಿಂದ ಇಡೀ ವಿಶ್ವವೇ ಭಾರತವನ್ನು ಅನುಕರಿಸುತ್ತಿದೆ,

ದುಷ್ಟ ಶಕ್ತಿಗಳ ಸಂಹಾರದ ಪ್ರತೀಕವಾಗಿ ಪ್ರತಿ ವರ್ಷ ದಸರಾ ಉತ್ಸವ ಆಚರಿಸಿಕೊಂಡು ಬರಲಾಗಿದೆ. ಹಬ್ಬ, ಉತ್ಸವಗಳು ಜನರಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದವನ್ನು ತರುತ್ತವೆ’ ಎಂದರು.

ಮನೆಮನೆ ದಸರಾದಲ್ಲಿ ನೂರಕ್ಕೂ ಹೆಚ್ಚು ಪುರುಷರು, ಮಹಿಳೆಯರು ,ಮಕ್ಕಳು
ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು

ಇದೇ ಸಂದರ್ಭದಲ್ಲಿ ಶಾಸಕರಾದ ಟಿ ಎಸ್ ಶ್ರೀವತ್ಸ, ಮಾಜಿನಗರ ಪಾಲಿಕಾ ಸದಸ್ಯರಾದ ಮಾ ವಿ ರಾಮ್ ಪ್ರಸಾದ್, ಬಿಜೆಪಿ ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷರಾದ ಗೋಪಾಲರಾಜ್ ಅರಸ್, ಬಿಜೆಪಿ ನಗರ ಉಪಾಧ್ಯಕ್ಷ ಜೋಗಿ ಮಂಜು, ಸೋಮೇಶ್, ಹರೀಶ್ , ಹಾಗೂ ಇನ್ನಿತರರು ಹಾಜರಿದ್ದರು

Leave a Reply

Your email address will not be published. Required fields are marked *