ನಂದಿನಿ ಮೈಸೂರು
ಕೆಆರ್ ಕ್ಷೇತ್ರದ ವಾರ್ಡ್ ನಂಬರ್ 51ರ ಕಾಂಗ್ರೆಸ್ ಯುವ ಮುಖಂಡ ಮಲ್ಲೇಶ ಅವರ ಹುಟ್ಟುಹಬ್ಬ ಅಂಗವಾಗಿ
ಮಲ್ಲೇಶ್ ಸ್ನೇಹ ಬಳಗದಿಂದ ವಾರ್ಡಿನ ಜನರ ಆರೋಗ್ಯದ ದೃಷ್ಟಿಯಿಂದ ಗೆಳೆಯರು ಒಟ್ಟುಗೂಡಿ ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
ಮೈಸೂರಿನ ಅಗ್ರಹಾರ ರಾಮಾನುಜ ರಸ್ತೆಯಲ್ಲಿರುವ ಉದ್ಯಾನವನದಲ್ಲಿ ಜೀವಧಾರೆ ರಕ್ತದಾನ ,ಸ್ಪಂದನಾ ಆಸ್ಪತ್ರೆ, ಬೃಂದಾವನ ಆಸ್ಪತ್ರೆ ಸಹಯೋಗದಲ್ಲಿ
ಉಚಿತ ಬೃಹತ್ ಆರೋಗ್ಯ ಕಣ್ಣಿನ ತಪಾಸಣೆ, ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಲ್ಲೇಶ್ ಇಂದು ನನ್ನ ಹುಟ್ಟು ಹಬ್ಬವನ್ನು ಸ್ನೇಹಿತರು ಆರೋಗ್ಯ ತಪಾಸಣೆ,ರಕ್ತದಾನ ಶಿಬಿರದ ಮೂಲಕ ನನಗೆ ಉಡುಗೊರೆ ನೀಡಿದ್ದಾರೆ ಅವರಿಗೆಲ್ಲ ಧನ್ಯವಾದ ತಿಳಿಸುತ್ತೇನೆ ಎಂದರು.ಮುಂದುವರೆದು ಮಾತನಾಡಿದ ಅವರು ಕಳೆದ 4 ವರ್ಷದಿಂದ 51ನೇ ವಾರ್ಡ್ ನಲ್ಲಿ ಸಮಾಜ ಸೇವೆಯಲ್ಲಿ ತೊಡಗಿದ್ದೇನೆ.ಜನರು ನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹೇಳುತ್ತಿದ್ದಾರೆ.ನಾನು ಕೂಡ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದರು.
ನೂರಾರು ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರೇ 35 ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದ್ದಾರೆ.ಅದರ ಜೊತೆಗೆ ಉಚಿತವಾಗಿ ಸೀನಿಯರ್ ಸಿಟಿಜನ್ ಕಾರ್ಡ್ ಹಾಗೂ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡನ್ನು ಸಾರ್ವಜನಿಕರಿಗೆ ಮಾಡಿಸಿಕೊಡಲಾಗಿದೆ. ಒಟ್ಟು ಈ ಶಿಬಿರದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ಸುಮಾರು 350ಕ್ಕೂ ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು.
ಇದೇ
ಸಂದರ್ಭದಲ್ಲಿ ಅಂಬಿಕಾ ಮಲ್ಲೇಶ್, ಶಿವಶಂಕರ್, ಚಂದ್ರಶೇಖರ್, ಶ್ರೇಯಸ್, ಚೇತನ್, ಮಧು. ಸಿ, ಸ್ನೇಹ, ಮಣಿ, ಯಶ್ವಂತ್, ಉಪಸ್ಥಿತರಿದ್ದರು.