ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ರವರು ಬೇಗ ಗುಣಮುಖರಾಗಲೆಂದು ಶ್ರೀ ಮಲೆ ಮಹದೇಶ್ವಸ್ವಾಮಿಗೆ ವಿಶೇಷ ಪೂಜೆ,ಹೋಮ,ಪ್ರಸಾದ ವಿನಿಯೋಗ

ನಂದಿನಿ ಮನುಪ್ರಸಾದ್ ನಾಯಕ್

ಗರಡಿಕೇರಿ ಲಷ್ಕರ್ ಮೊಹಲ್ಲಾದಲ್ಲಿರುವ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ರವರ ಅನಾರೋಗ್ಯ ಹಿನ್ನೆಲೆ ಆದಷ್ಟು ಬೇಗ ಗುಣಮುಖರಾಗಿ ಬರಲೆಂದು ಪ್ರಾರ್ಥಿಸಿ ವಿಶೇಷ ಪೂಜೆ ,ಹೋಮ ಹಮ್ಮಿಕೊಳ್ಳಲಾಗಿತ್ತು.


 

ಮೊದಲಿಗೆ ಮುಂಜಾನೆಯೇ ಶ್ರೀ ಮಲೆ ಮಹದೇಶ್ವರ ಸ್ವಾಮಿಗೆ ವೇದ ಬ್ರಹ್ಮರ್ಷಿ ವೇದ ಬ್ರಹ್ಮ ಶ್ರೀ ರೇಣುಕಾ ಸ್ವಾಮಿರವರ ನೇತೃತ್ವದಲ್ಲಿ ಅಮಾವಾಸ್ಯೆ ಪೂಜಾ ಕೈಂಕರ್ಯಗಳು,
ವಿಶೇಷ ಅಭಿಷೇಕ,ಅಲಂಕಾರ ಮಾಡಲಾಗಿತ್ತು.ನಂತರ ಹೋಮ ಮಾಡಲಾಯಿತು. ತದನಂತರ ಪೂರ್ಣಾವತಿ ಮಹಾ ಮಂಗಳಾರತಿ ಮಾಡಿ ದೇವರಲ್ಲಿ ಪ್ರಾರ್ಥಿಸಲಾಯಿತು.

ಇದೇ ವೇಳೆ ಟ್ರಸ್ಟ್ ನ ಗೌರವಾಧ್ಯಕ್ಷತು ಹಾಗೂ ಕಾಂಗ್ರೆಸ್ ಮುಖಂಡರಾದ ಶಿವಣ್ಣ ರವರು ಮಾತನಾಡಿ
ಶ್ರೀ ಮಲೆ ಮಾದೇಶ್ವರ ಸ್ವಾಮಿ ದೇವಸ್ಥಾನದ ಟ್ರಸ್ಟ್ವತಿಯಿಂದ ಗರಡಿಕೇರಿ ಲಸ್ಕರ್ ಮೊಹಲದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರ ಧರ್ಮಪತ್ನಿ ಪಾರ್ವತಿ ಸಿದ್ದರಾಮಯ್ಯರವರು ಕಳೆದ ಎರಡು ದಿನಗಳಿಂದ ಶ್ವಾಸಕೋಶದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ಶ್ರೀ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಪಾರ್ವತಿ ರವರ ಹೆಸರಿನಲ್ಲಿ ವಿಶೇಷ ಪೂಜೆ ಮತ್ತು ಹೋಮ, ಪ್ರಸಾದ ವಿನಿಯೋಗ ಮಾಡುವ ಮೂಲಕ ಅವರು ಆದಷ್ಟು ಬೇಗ ಗುಣಮುಖವಾಗಲಿ ಎಂದು ಪ್ರಾರ್ಥಿಸಿದ್ದೇವೆ.ಮಲೆ ಮಹದೇಶ್ವರ ಸ್ವಾಮಿ ನಂಬಿದವರ ಕೈ ಬಿಡುವುದಿಲ್ಲ ಎಂದರು.

ಇದೇ ಸಂದರ್ಭದಲ್ಲಿ ದೇವಸ್ಥಾನದ ಗುಡ್ಡಪ್ಪನವರಾದ ಶ್ವೇತಾ ರವಿಕುಮಾರ್ , ಮಹಾಪೋಷಕರಾದ ರಾಚಯ್ಯ ರಾಜೇಂದ್ರ ವೆಂಕಟದಾಸಾಚಾರ್ ಜಗನ್ನಾಥ್ ಸುರೇಶ್ ಬಾಬು ನಾಗೇಂದ್ರ ರವಿ ಮಹದೇವ ಹಾಗೂ ಪದಾಧಿಕಾರಿಗಳು ಭಕ್ತಾದಿಗಳು ಹಾಜರಿದ್ದರು.

Leave a Reply

Your email address will not be published. Required fields are marked *