ಮಳವಳ್ಳಿ: ನಮ್ಮ ಸಂಘವು ಲಾಭದಾಯಕವಾಗಿ 15 ಲಕ್ಷ ಉಳಿತಾಯ ಮಾಡುವುದರ ಜೊತೆಗೆ 62 ಕೋಟಿ 25 ಲಕ್ಷದ 92.698 ರೂ ವಹಿವಾಟು ನಡೆಸಿದೆ ಎಂದು ಪಿಎಸಿಎಸ್ ನಿರ್ದೇಶಕ ಡಿ.ಪಿ.ಸೋಮಶೇಖರ್ ಹೇಳಿದರು.
ಮಳವಳ್ಳಿ ತಾಲ್ಲೂಕಿನ ಸುಜ್ಜಲೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುಜ್ಜಲೂರು ವಿವಿದ್ದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2024 – 25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾಹಿತಿ ನೀಡಿದ ಅವರು ನಮ್ಮ ಸಂಘವು ಲಾಭದಾಯಕವಾಗಿ ಹದಿನೈದು ಲಕ್ಷ ರೂ ಉಳಿತಾಯ ಮಾಡಿದ್ದು, ಹೊಸದಾಗಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಶವ ಸಂಸ್ಕಾರ ರಥಯಾತ್ರೆ ವಾಹನದ ಘೋಷಣೆ ಮಾಡಲಾಗಿದೆ ಎಂದರು. ಈ ವೇಳೆ ಕಳೆದ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಈ ಸಂದರ್ಭದಲ್ಲಿ ಸುಜ್ದಲೂರು ಪಿಎಸಿಎಸ್ ಅಧ್ಯಕ್ಷ ಚಂದ್ರಪ್ಪ, ಉಪಾಧ್ಯಕ್ಷ ದೊಡ್ಡಯ್ಯ, ನಿರ್ದೇಶಕರಾದ ರಾಜೇಂದ್ರ, ಹೆಚ್.ಪಿ.ಚಂದ್ರು, ಮಹದೇವು, ಮಹದೇವಸ್ವಾಮಿ, ರೇವಣ್ಣ, ಮಹದೇವಪ್ಪ, ನಾಗಲಾಂಭಿಕ, ಶಿವಲಿಂಗಮ್ಮ ಸಿಇಒ ಟಿ.ಆರ್.ಅಶೋಕ ಸೇರಿದಂತೆ ಇತರರಿದ್ದರು.