ನಂದಿನಿ ಮೈಸೂರು
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ 2023 ಮಹೋತ್ಸವಕ್ಕೆ ಆಗಮಿಸಿರುವ ಅಭಿಮನ್ಯು ನೇತೃತ್ವದ ಮಹೇಂದ್ರ ಆನೆ ಶ್ರೀರಂಗಪಟ್ಟಣ ದಸರಾದಲ್ಲಿ ಅಂಬಾರಿ ಹೊರಲಿದ್ದಾನೆ.
ಅ.16 ರಂದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ದಸರಾ ನಡೆಯಲಿದ್ದು ಮೂರು ಆನೆಗಳನ್ನು ಕಳುಹಿಸುವಂತೆ ಮಂಡ್ಯ ಜಿಲ್ಲಾಡಳಿತ ಪತ್ರ ಬರೆದಿತ್ತು.ಡಿಸಿಎಫ್ ಸೌರಭ್ ಕುಮಾರ್ ರವರು ಮೂರು ಆನೆಗಳನ್ನು ಕಳುಹಿಸಲು ಅನುಮತಿ ನೀಡುವಂತೆ ಪಿಸಿಸಿಎಫ್ ಅವರಿಗೆ ಪತ್ರ ಬರೆದಿದ್ದಾರೆ.
ಮೈಸೂರು ಸಾಮ್ರಾಜ್ಯಕ್ಕೂ ಮುನ್ನ ಶ್ರೀರಂಗಪಟ್ಟಣದಲ್ಲಿ ದಸರಾ ಉತ್ಸವ ಆಚರಣೆ ಮಾಡಲಾಗುತ್ತಿತ್ತು.ಈ ಐತಿಹಾಸಿಕ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದ್ದು ಮೈಸೂರು ದಸರಾ ಮಾದರಿಯಲ್ಲೇ ಶ್ರೀರಂಗಪಟ್ಟಣದಲ್ಲೂ ದಸರಾ ಆಚರಣೆ ಮಾಡಲಾಗುತ್ತದೆ.
ಮತ್ತಿಗೂಡು ಶಿಬಿರದ ಮಲ್ಲಿಕಾರ್ಜುನ ರಾಜಣ್ಣ ಕಾವಾಡಿಗಳು ಆರೈಕೆಯಲ್ಲಿ ಬೆಳೆಯುತ್ತಿರುವ ಮಹೇಂದ್ರ ಆನೆ ಎರಡನೇ ಬಾರಿ ಶ್ರೀರಂಗಪಟ್ಟಣ ದಸರಾದಲ್ಲಿ ಅಂಬಾರಿ ಹೊರಲಿದೆ.ಕುಮ್ಕಿ ಆನೆ ವಿಜಯಾ ಮತ್ತು ವರಲಕ್ಷ್ಮಿ ಮಹೇಂದ್ರ ಆನೆಗೆ ಸಾಥ್ ನೀಡಲಿದ್ದಾರೆ.
ಆನೆಗಳ ತೂಕ ವಿವರ ಇಂತಿದೆ:
ಆನೆಗಳ ತೂಕ ವಿವರ ಇಂತಿದೆ:
ಮಹೇಂದ್ರ 4660 ಕೆಜಿ ( ಮತ್ತಿಗೂಡು ಶಿಬಿರದ ಮಲ್ಲಿಕಾರ್ಜುನ ರಾಜಣ್ಣ)ವಿಜಯ 2885 ಕೆಜಿ (ವಿಜಯ ಆನೆ ಮಾವುತ ಭೋಜ ಕಾವಡಿ ಮಂಜು)
ವರಲಕ್ಷ್ಮೀ 3170 ಕೆಜಿ ( ವರಲಕ್ಷ್ಮಿ ಆನೆ ಮಾವುತ ರವಿ ಕಾವಡಿ ಲವ)