ನಂದಿನಿ ಮೈಸೂರು
ಮಹಾರಾಣಿ ಸ್ಯೂಟ್ ರೂಮ್ ಆರಂಭಿಸಿದ ಮೈಸೂರಿನ ಮದರ್ಹುಡ್ ಹಾಸ್ಪಿಟಲ್
ಹೆರಿಗೆ ಆರೈಕೆಯಲ್ಲಿ ಉತ್ಕೃಷ್ಟತೆಯ ಪುನರ್ ವ್ಯಾಖ್ಯಾನ
ಮೈಸೂರು, ಮೇ 22, 2025 : ಮಹಿಳೆಯರಿಗಾಗಿ ನೂತನವಾಗಿ ವಿನ್ಯಾಸಗೊಳಿಸಲಾದ ಮಹಾರಾಣಿ ಸ್ಯೂಟ್ ರೂಮ್ ಅನ್ನು ಮೈಸೂರಿನ ಮದರ್ಹುಡ್ ಹಾಸ್ಪಿಟಲ್ ಹೆಮ್ಮೆಯಿಂದ ಉದ್ಘಾಟಿಸಿದೆ. ತಾಯಂದಿರಾಗುವ ನಿರೀಕ್ಷೆಯಲ್ಲಿರುವ ಗರ್ಭಿಣಿ ಮಹಿಳೆಯರಿಗೆ ವೈಯಕ್ತೀಕರಿಸಲಾದ ಹಾಗೂ ಗೌರವಾತ್ಮಕ ಹೆರಿಗೆಯ ಅನುಭವವನ್ನು ಈ ಐಷಾರಾಮಿ ಮತ್ತು ಅತ್ಯಾಧುನಿಕ ಸೌಲಭ್ಯ ಸಾದರಪಡಿಸುತ್ತದೆ. ಮೈಸೂರಿನ ಮಹಾರಾಣಿಯವರಾದ ಟ್ರಿಷಿಕ ಕುಮಾರಿ ಒಡೆಯರ್ ಅವರಿಗೆ ಗೌರವವಾಗಿ ಈ ಸೌಲಭ್ಯಕ್ಕೆ ಹೆಸರಿಸಲಾಗಿದೆ. ಅವರ ವಿಶೇಷ ಬೆಡಗು, ಪರಂಪರೆ ಮತ್ತು ಸಮಾಜಕ್ಕೆ ಅವರ ಕೊಡುಗೆಗಳಿಗೆ ಗೌರವವಾಗಿ ಈ ಸ್ಯೂಟ್ ಆರಂಭಿಸಲಾಗಿದೆ.
ಈ ಸೌಲಭ್ಯದ ಉದ್ಘಾಟನಾ ಸಮಾರಂಭದಲ್ಲಿ ಶ್ರೀಮತಿ ತ್ರಿಷಿಕಾ ಕುಮಾರಿ ಒಡೆಯರ್ ಮತ್ತು ಮೈಸೂರಿನ ಮದರ್ಹುಡ್ ಹಾಸ್ಪಿಟಲ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯರತ್ನ ವೆಂಕಟರಮಣ್ ಅವರು ಭಾಗವಹಿಸಿದ್ದರು.
ಮಹಾರಾಣಿ ಸ್ಯೂಟ್ ಅನ್ನು ವಿಶೇಷ ಚಿಂತನೆಯೊAದಿಗೆ ವಿನ್ಯಾಸಗೊಳಿಸಲಾಗಿದೆ. ಅತ್ಯುತ್ತಮವಾದ ಗ್ರಾಹಕ ಅನುಭವವನ್ನು ನೀಡುವ ಈ ಸೌಲಭ್ಯ ವಿಸ್ತಾರವಾದ ಖಾಸಗಿ ಕೋಣೆ ಸೊಬಗಿನ ಒಳಾಂಗಣ ವಿನ್ಯಾಸ, ಕುಟುಂಬಕ್ಕಾಗಿ ಸಮರ್ಪಿತ ಸ್ಥಳಾವಕಾಶಗಳನ್ನು ಒಳಗೊಂಡಿರುತ್ತದೆ. ಜೊತೆಗೆ ವೈಯಕ್ತೀಕರಿಸಲಾದ ದಾದಿಯ ಆರೈಕೆ ಮತ್ತು ಉನ್ನತ ವೈದ್ಯಕೀಯ ಬೆಂಬಲವನ್ನು ಒಳಗೊಂಡಿರುತ್ತದೆ. ವೈದ್ಯಕೀಯ ಉತ್ಕೃಷ್ಟತೆ ಮತ್ತು ಭಾವನಾತ್ಮಕ ಬೆಂಬಲವನ್ನು ತಾಯಂದಿರಿಗೆ ಪೂರೈಸುವಂತೆ ಇವೆಲ್ಲವನ್ನು ವಿನ್ಯಾಸಗೊಳಿಸಲಾಗಿದೆ.
ಆಸ್ಪತ್ರೆಯೊಂದಿಗೆ ವೈಯಕ್ತಿಕ ಮತ್ತು ಹೃತ್ಪೂರ್ವಕ ಸಂಪರ್ಕ ಹೊಂದಿರುವ ಮಹಾರಾಣಿ ತ್ರಿಷಿಕ ಕುಮಾರಿ ಒಡೆಯರ್ ಅವರು ಮೈಸೂರಿನ ಮದರ್ಹುಡ್ ಆಸ್ಪತ್ರೆಯಲ್ಲಿ ಅವರು ತಮ್ಮ ಶಿಶುವಿಗೆ ಅಕ್ಟೋಬರ್ 11, 2024ರಂದು ಜನ್ಮ ನೀಡಿದ್ದರು. ಇದರೊಂದಿಗೆ ಈ ಸಮರ್ಪಣೆ ಮತ್ತಷ್ಟು ಹೆಚ್ಚು ಅರ್ಥಪೂರ್ಣವಾಗಿರುತ್ತದೆ.
“ನಮ್ಮ ಮೈಸೂರಿನಂತಹ ಎರಡನೇ ಹಂತದ ನಗರದಲ್ಲಿ, ಉತ್ತಮ ಗುಣಮಟ್ಟದ ಅಲ್ಲದೇ ವಿಶೇಷತೆಯಿಂದ ಕೂಡಿದ ತಾಯಿ ಮತ್ತು ನವಜಾತ ಶಿಶು ಆರೈಕೆಯ ಲಭ್ಯತೆ ಅತ್ಯಂತ ಮಹತ್ವವಾದ ವಿಷಯ ಎಂದು ನಮಗೆ ತಿಳಿದಿದೆ. ನವಜಾತ ಶಿಶುವಿನ ಆರೈಕೆ ಅತ್ಯಂತ ಮಹತ್ವದ್ದಾಗಿದೆ. ನವಜಾತ ಶಿಶುಗಳಿಗೆ ಅತ್ಯಾಧುನಿಕ ತೀವ್ರ ನಿಗಾ ಘಟಕಗಳು, ಜನನ ಮತ್ತು ಹೆರಿಗೆಯ ಆಧುನಿಕ ಕೊಠಡಿಗಳು, ಭ್ರೂಣದ ಮೇಲ್ವಿಚಾರಣೆಯ ಸುಧಾರಿತ ವ್ಯವಸ್ಥೆಗಳು ಅಲ್ಲದೇ ಸ್ತ್ರೀರೋಗ ತಜ್ಞರು, ಮಕ್ಕಳ ರೋಗಶಾಸ್ತç ತಜ್ಞರು, ದಾದಿಯರು ಮತ್ತು ಸಹಾಯಕ ಸಿಬ್ಬಂದಿಯ ಪ್ರತಿಭಾನ್ವಿತ ತಂಡದೊAದಿಗೆ ಮೈಸೂರಿನ ಮದರ್ಹುಡ್ ಹಾಸ್ಪಿಟಲ್ ಸಜ್ಜಾಗಿದೆ ಎನ್ನುವುದು ನನಗೆ ಸಂತೋಷದ ವಿಷಯವಾಗಿದೆ.. ನನ್ನ ಎರಡನೇ ಮಗ, ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್ ಅವರು ಈ ಆಸ್ಪತ್ರೆಯಲ್ಲಿ ಜನಿಸಿದರು ಮತ್ತು ನನಗೆ ದೊರೆತ ಗಮನ ನಿಜವಾಗಿಯೂ ಅಸಾಧಾರಣ ರೀತಿಯದ್ದಾಗಿತ್ತು” ಎಂದು ಮಹಾರಾಣಿ ತ್ರಿಷಿಕಾ ಕುಮಾರಿ ಒಡೆಯರ್ ಅವರು ಹೇಳಿದರು.
ಮದರ್ಹುಡ್ ಹಾಸ್ಪಿಟಲ್ಸ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯರತ್ನ ವೆಂಕಟರಮಣ್ ಅವರು ವೈಯಕ್ತಿಕ ಆರೈಕೆಯ ಜೊತೆಗೆ ವೈದ್ಯಕೀಯ ಉತ್ಕೃಷ್ಟತೆಯನ್ನು ಸಂಯೋಜಿಸುವ ಆಸ್ಪತ್ರೆಯ ಅಭಿಯಾನವನ್ನು ಕುರಿತು ಒತ್ತಿ ಹೇಳಿದರು. “ಮಹಾರಾಣಿ ಸ್ಯೂಟ್ ಕೇವಲ ಒಂದು ಸೌಲಭ್ಯಕ್ಕಿಂತ ಹೆಚ್ಚಿನದಾಗಿರುತ್ತದೆ. ನವೀನತೆ ಮತ್ತು ಉತ್ಕೃಷ್ಟತೆಗಳ ಮೂಲಕ ಮಹಿಳೆಯರ ಆರೋಗ್ಯ ಸೇವೆಯನ್ನು ಉತ್ತಮಪಡಿಸುವ ನಮ್ಮ ದೀರ್ಘಕಾಲೀನ ದೃಷ್ಟಿಕೋನದ ಪ್ರತಿಬಿಂಬವಾಗಿದೆ. ಮಹಿಳೆಗೆ ಅವರ ಗರ್ಭಾವಸ್ಥೆಯ ಉದ್ದಕ್ಕೂ ಸಂಪೂರ್ಣ ಬೆಂಬಲದ ಭಾವನೆ ಅಗತ್ಯವಿರುತ್ತದೆ ಎಂದು ನಾವು ನಂಬಿದ್ದೇವೆ. ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ಮೈಸೂರಿನ ಪರಂಪರೆಯನ್ನು ಆಧುನಿಕ ವೈದ್ಯಕೀಯ ಆರೈಕೆಯೊಂದಿಗೆ ಸಂಯೋಜಿಸುವುದನ್ನು ಈ ಸ್ಯೂಟ್ ಬಿಂಬಿಸುತ್ತದೆ’’ ಎಂದರು.
ಮಹಾರಾಣಿಯವರು ಆಗಮಿಸುವುದರೊಂದಿಗೆ ಸಂಭ್ರಮ ಆರಂಭವಾಗಿತ್ತು. ನಂತರ ಸೌಲಭ್ಯವನ್ನು ಅನಾವರಣಗೊಳಿಸಲು ಉದ್ಘಾಟನಾ ಸಮಾರಂಭ ನಡೆಯಿತು. ಹಿರಿಯ ಸಲಹಾತಜ್ಞರೊಂದಿಗೆ ಹಲವು ಗಣ್ಯರು ಭಾಗವಹಿಸಿದ್ದರು. ಇವರಲ್ಲಿ ಡ. ಮಧುರ ಪಾಠಕ್, ಡಾ. ಶ್ವೇತಾ ನಾಯಕ್, ಡಾ. ಸೋನಿಯ ಮಂದಪ್ಪ, ಡಾ. ಅನಿತಾ ಆದರ್ಶ್, ಡಾ. ನೂರ್ಫಾತಿಮ ಅಕ್ರಮ್, ಡಾ. ಶೃತಿ ಬಿ.ಎಸ್. ಡಾ. ಇಸ್ಮೆöÊಲ್ ಖಾನ್, ಡಾ. ಚೇತನ್ ಬಿ., ಡಾ. ಸುಹೇಮ್ ಅಫ್ಸರ್, ಡಾ. ರಘುವೀರ್ ಸುಹಾಸ್, ಡಾ. ಅವೀನ್ ಯು ಮುಂತಾದವರು ಸೇರಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆ ಸಮಗ್ರ ಡಿಜಿಟಲ್ ವೇದಿಕೆಯಾದ ಮದರ್ಹುಡ್ ಒನ್ ಕೇರ್ ಆ್ಯಪ್ ಆರಂಭಿಸಿದೆ. ಹೆರಿಗೆ ಮತ್ತು ಮಕ್ಕಳ ಆರೈಕೆಗಳನ್ನು ಸರಳವಾಗಿಸಿ ರೋಗಿಯೊಂದಿಗಿನ ಸಂಪರ್ಕವನ್ನು ವಿಸ್ತರಿಸುವಂತೆ ಈ ಪ್ಲಾಟ್ಫಾರಂ ಅನ್ನು ವಿನ್ಯಾಸಗೊಳಿಸಲಾಗಿದೆ.
ಮೈಸೂರಿನ ಮದರ್ಹುಡ್ ಹಾಸ್ಪಿಟಲ್ನ ಸೌಲಭ್ಯ ನಿರ್ದೇಶಕರಾದ ಸಂದೀಪ್ ಪಟೇಲ್ ಬಿ. ಜೆ. ಅವರು ಮಾತನಾಡಿ, “ಮದರ್ಹುಡ್ ಸ್ಯೂಟ್ ಎಂಬುದು ಕೇವಲ ಒಂದು ಸ್ಥಳ ಮಾತ್ರವಲ್ಲ, ತಾಯಂದಿರಿಗೆ ನಮ್ಮ ಅಳವಾದ ಗೌರವದ ಚಿಹ್ನೆಯಾಗಿರುತ್ತದೆ. ಈ ಸೇರ್ಪಡೆಯೊಂದಿಗೆ ವೈದ್ಯಕೀಯವಾಗಿ ಉನ್ನತವಾದ ಭಾವನಾತ್ಮಕವಾಗಿ ಸಮೃದ್ಧಗೊಳಿಸುವ ಮತ್ತು ನಿಜಕ್ಕೂ ನೆನಪಿನಲ್ಲಿಳಿಯುವ ಅನುಭವವನ್ನು ಸಾದರಪಡಿಸುವ ಗುರಿಯನ್ನು ನಾವು ಹೊಂದಿರುತ್ತೇವೆ’’ ಎಂದರು.
ಈ ಸಂದರ್ಭದಲ್ಲಿ ಸಸಿ ನೆಡುವುದಲ್ಲದೆ, ಬಲೂನ್ಗಳನ್ನು ಹಾರಿ ಬಿಡಲಾಯಿತು. ಬೆಳವಣಿಗೆ, ಜೀವನ ಮತ್ತು ಹೆರಿಗೆಯ ಆರೈಕೆಯಲ್ಲಿ ನೂತನ ಅಧ್ಯಾಯದ ವಿಶೇಷ ಆಚರಣೆ ಇದಾಗಿತ್ತು.
ಮದರ್ಹುಡ್ ಹಾಸ್ಪಿಟಲ್ಸ್ ಕುರಿತು : 12 ನಗರಗಳಲ್ಲಿ 25 ಆಸ್ಪತ್ರೆಗಳೊಂದಿಗೆ ಏಕ ವಿಷಯದ ವಿಶೇಷತೆಯೊಂದಿಗೆ ಭಾರತದಲ್ಲಿ ಕ್ಷಿಪ್ರಗತಿಯಲ್ಲ ಬೆಳೆಯುತ್ತಿರುವ ಆಸ್ಪತ್ರೆಗಳ ಸರಣಿ ಈ ಮದರ್ಹುಡ್ ಮಹಿಳೆಯರು ಮತ್ತು ಮಕ್ಕಳ ಆಸ್ಪತ್ರೆಗಳ ಜಾಲವಾಗಿದೆ. ಈ ಆಸ್ಪತ್ರೆಯ ಶ್ರೇಣಿ ತನ್ನ ವೈದ್ಯಕೀಯ ಉತ್ಕೃಷ್ಟತೆ ಮತ್ತು ಉನ್ನತ ಅಪಾಯದ ಗರ್ಭಾವಸ್ಥೆಗಳನ್ನು ನಿಭಾಯಿಸುವುದಕ್ಕೆ ಖ್ಯಾತಿ ಗಳಿಸಿದೆ. ಜೊತೆಗೆ ಉನ್ನತ ಮಹಿಳಾ ರೋಗಶಾಸ್ತç, ಫರ್ಟಿಲಿಟಿ ಆರೈಕೆ ಮತ್ತು ನವಜಾತ ಶಿಶುಗಳ ಸೇವೆಗಳಲ್ಲಿ ಖ್ಯಾತಿ ಗಳಿಸಿದೆ. ಈ ಅಸ್ಪತ್ರೆಗಳ ಜಾಲದಲ್ಲಿ 1200ಕ್ಕೂ ಹೆಚ್ಚಿನ ವಿಶೇಷ ತಜ್ಞರಿದ್ದು, ರಾಷ್ಟçವ್ಯಾಪಿಯಾಗಿ 200ಕ್ಕೂ ಹೆಚ್ಚಿನ ನವಜಾತ ಶಿಶುಗಳ ತೀವ್ರ ನಿಗಾ ಅರೈಕೆಯ ಆಸ್ಪತ್ರೆಗಳು ಸೇರಿರುತ್ತವೆ.