ನಂದಿನಿ ಮೈಸೂರು
ಮಹಾಜನ ಪ್ರೌಢಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ನಡೆಸಲಾಯಿತು .ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ಮಹಾಜನ ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಡಾಕ್ಟರ್ ವಿಜಯಲಕ್ಷ್ಮಿ, ಮುರಳಿದ್ದಾರ್ ಭಾಗವತ್ ಇವರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಮಹಾಜನ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳಾದ ಎಸ್ ನಾರಾಯಣ್ ನಿವೃತ್ತ ಪ್ರಾಧ್ಯಾಪಕರು ಇವರು ವಹಿಸಿದ್ದರು ವಿಶೇಷ ಆಹ್ವಾನಿತರಾಗಿ ಎಸ್ ಆರ್ ರವಿ ಕೋ ಆಪರೇಟಿವ್ ಸೊಸೈಟಿ ಗಾಂಧಿ ಚೌಕ ಇವರು ವಹಿಸಿದ್ದರು.
ಈ ಸಂದರ್ಭದಲ್ಲಿ ಗೌರವ ಕಾರ್ಯದರ್ಶಿಗಳಾದ ಡಾಕ್ಟರ್ ವಿಜಯಲಕ್ಷ್ಮಿ ಮುರಳಿದ ಭಾಗವತ್ ಇವರು ಮಾತನಾಡಿ ಮಕ್ಕಳಿಗೆ ಶಾಲೆಯ ವಾರ್ಷಿಕೋತ್ಸವ ಎಂದರೆ ಅದು ಹಬ್ಬ ಇದ್ದಂತೆ ಎಂದು ಮಕ್ಕಳಿಗೆ ಪ್ರೋತ್ಸಾಹ ನೀಡಿದರು.
ಎಸ್ ಆರ್ ರವಿ ಅವರು ಮಾತನಾಡಿ ಪ್ರತಿ ಶಾಲೆಗಳಲ್ಲೂ ವಾರ್ಷಿಕೋತ್ಸವ ನಡೆಯುತ್ತದೆ ಆದರೆ ಮಹಾಜನ ಪ್ರೌಢಶಾಲೆಯಲ್ಲಿ ವಿಶೇಷವಾಗಿ ನಡೆಯುತ್ತದೆ ಅವರು ಪ್ರತಿ ವರ್ಷವೂ ವಿಶೇಷವಾಗಿ ಶಾಲಾ ವಾರ್ಷಿಕೋತ್ಸವವನ್ನು ಹಬ್ಬವಾಗಿ ಆಚರಿಸುತ್ತಾರೆ ಇದು ಮಕ್ಕಳಲ್ಲಿ ತುಂಬಾ ಉತ್ಸಾಹ ಮೂಡಿಸುತ್ತದೆ ಎಂದು ತಿಳಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಸುಜಾತ ಅವರು ಮಾತನಾಡಿ ಶಾಲೆಯ ಮಕ್ಕಳು ಹಾಗೂ ಪೋಷಕರು ಮಹಾಜನ ವಿದ್ಯಾ ಸಮಸ್ತೆಯವರು ನಮಗೆ ಸಹಕಾರ ನೀಡುವುದರಿಂದ ನಾವು ಇಷ್ಟು ಚೆನ್ನಾಗಿ ಕಾರ್ಯಕ್ರಮ ಮಾಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು