ನಂದಿನಿ ಮೈಸೂರು
ಕರ್ನಾಟಕ ರಾಜ್ಯ ಮಡಿವಾಳ ಸಂಘದಲ್ಲ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದು ಹೇಳಿರುವ ಗೌರವಾಧ್ಯಕ್ಷ ರವಿಕುಮಾರ್ ಆರೋಪ ಸತ್ಯಕ್ಕೆ ದೂರವಾದದ್ದು ಮಹಿಳೆಯರಿಗೆ ಸಂಘದಿಂದ ಯಾವುದೇ ತೊಂದರೆ ಆಗಿಲ್ಲ ಎಂದು ಪದ್ಮ,ಭವ್ಯ ಹಾಗೂ ಇತರೇ ಮಹಿಳೆಯರು ಸ್ಪಷ್ಟಪಡಿಸಿದ್ದಾರೆ.
ಮೈಸೂರಿನ ಜಲದರ್ಶಿನಿಯಲ್ಲಿ ಮಾತನಾಡಿದ ಮಹಿಳೆಯದು ಅಧ್ಯಕ್ಷರಾದ ನಂಜಪ್ಪನವರು ಸಂಘದಲ್ಲಿರುವ ಮಹಿಳೆಯರನ್ನು ಗೌರವದಿಂದ ನಡೆಸಿಕೊಳ್ಳುತ್ತಾರೆ.ಸಂಘದಿಂದ ಮಹಿಳೆಯರಿಗೆ ರಕ್ಷಣೆ ಇದೆ.ನಾವೆಲ್ಲಾ ಮಹಿಳೆಯರು ಸುರಕ್ಷಿತವಾಗಿದ್ದೇವೆ.ಗೌರವಾಧ್ಯಕ್ಷರಾದ ರವಿಕುಮಾರ್ ರವರು ಮಹಿಳೆಯರ ಬಗ್ಗೆ ಮಾತಾಡಿದ್ದು ನಮ್ಮ ಮನಸ್ಸಿಗೆ ನೋವು ಉಂಟಾಗಿದೆ.ಇಂದು ರಾಜ್ಯಾಧ್ಯಕ್ಷರ ಜೊತೆ ಸಭೆಯಲ್ಲಿ ಭಾಗವಹಿಸುವಂತೆ ರವಿಕುಮಾರ್ ಹಾಗೂ ಕೇಶವ್ ಅವರಿಗೆ ಆಹ್ವಾನ ನೀಡಲಾಗಿತ್ತು.ಆದರೂ ಅವರು ಸಭೆಗೆ ಗೈರಾಗಿದ್ದಾರೆ.ಮುಂದಿನ ದಿನಗಳಲ್ಲಿ
ಅವರು ಪದೇ ಪದೇ ನಮ್ಮ ಹೆಸರನ್ನ ಬಳಸಿ ಸುದ್ದಿಗೋಷ್ಠಿ ಮಾಡಿದ್ದೇ ಆದಲ್ಲಿ ರವಿಕುಮಾರ್ ರವರ ಮನೆ ಮುಂದೆ ಮಹಿಳೆಯರು ಕುಳಿತುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ನಂಜಪ್ಪ ಮಾತನಾಡಿ ನಾನು ಅಧ್ಯಕ್ಷರಾಗಿ ಇಡೀ ರಾಜ್ಯ ಸುತ್ತಿದ್ದೇನೆ.ಮಡಿವಾಳರ ಯೋಗಕ್ಷೇಮ,ಕುಂದುಕೊರತೆ ಸಮಾಜದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇನೆ.ಗೌರವಾಧ್ಯಕ್ಷರಾದ ರವಿಕುಮಾರ್ ರವರು ಸಂಘದ ಬಗ್ಗೆ,ಮಹಿಳೆಯರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿರೋದು ಸರಿಯಲ್ಲ.ರವಿಕುಮಾರ್ ಸುದ್ದಿ ಗೋಷ್ಠಿಯಲ್ಲಿ ಒಂದು ಮಾತು ಹೇಳಿದ್ದಾರೆ ನಾನು ಹಣ ಕೊಡುವುದನ್ನು ನಿಲ್ಲಿಸಿದಾಕ್ಷಣದಿಂದ ಸಂಘದ ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಅಂತ ಅದಕ್ಕೆ ನಾನು ಉತ್ತರ ಕೊಡುತ್ತಿದ್ದೇನೆ ಸಂಘದ ಅಭಿವೃದ್ಧಿಗೆ ನಾನು ಕೂಡ ನನ್ನ ವೈಯಕ್ತಿಕ ಹಣ ತಂದು ಹಾಕಿದ್ದೇನೆ.
ರವಿಕುಮಾರ್ ಆರೋಪಗಳು ಸತ್ಯ ಎನ್ನುವುದಾದರೇ ಈ ಕೂಡಲೇ ದೇವರನ್ನ ಮುಟ್ಟಿ ಪ್ರಮಾಣ ಮಾಡಲಿ ಎಂದು ನಂಜಪ್ಪ ರವಿಕುಮಾರ್ ರವರಿಗೆ ಬಹಿರಂಗ ಸವಾಲು ಹಾಕಿದರು.
ಮೈಸೂರಿನ ಜಿಲ್ಲಾಧ್ಯಕ್ಷ ರವಿನಂದನ್ ಮಾತನಾಡಿ ಮಡಿವಾಳರು ಹಾಗೂ ಮಡಿವಾಳರ ಸಂಘ ಅದರಲ್ಲಿರುವ ಮಹಿಳೆಯರು ಎಲ್ಲರೂ ಸುರಕ್ಷಿತವಾಗಿದ್ದಾರೆ.ಗೌರವಾಧ್ಯಕ್ಷ ಹಾಗೂ ಕೇಶವ್ ಅವರು ನಡೆಸಿದ ಸುದ್ದಿಗೋಷ್ಠಿ ಸರಿಯಲ್ಲ.ಮಡಿವಾಳರ ಸಂಘ ಒಡೆಯಲು ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ ಎಂದರು.