ನಂದಿನಿ ಮೈಸೂರು
ಜಿ ಸ್ಕ್ವಯರ್ ತನ್ನ ಜಿ ಸ್ಕ್ವಯರ್ ಆಲ್ಕೆಮಿಯೊಂದಿಗೆ ಮೈಸೂರಿಗೆ ವಿಸ್ತರಣೆ- ಪ್ಲಾಟ್ ಗಳು, ವಿಲ್ಲಾಗಳು ಮತ್ತು ಅಪಾರ್ಟ್ಮೆಂಟ್ ಗಳನ್ನು ಒದಗಿಸುವ ಪ್ರಮುಖ ಟೌನ್ ಶಿಪ್
ಫೆಬ್ರವರಿ 25, 2025, ಮೈಸೂರು: ಭಾರತದ ಅತ್ಯಂತ ದೊಡ್ಡ ರಿಯಲ್ ಎಸ್ಟೇಟ್ ಡೆವಲಪರ್ ಜಿ ಸ್ಕ್ವಯರ್ ತನ್ನ ವ್ಯಾಪ್ತಿಯನ್ನು ಪ್ಲಾಟ್ ಗಳು, ವಿಲ್ಲಾಗಳು ಮತ್ತು ಅಪಾರ್ಟ್ ಮೆಂಟ್ ಗಳನ್ನು ಒದಗಿಸುವ ಪ್ರೀಮಿಯಂ ಟೌನ್ ಶಿಪ್ ಜಿ ಸ್ಕ್ವಯರ್ ಆಲ್ಕೆಮಿ ಮೂಲಕ ಮೈಸೂರಿಗೆ ವಿಸ್ತರಿಸಿದೆ. ಈ ಕಾರ್ಯತಂತ್ರೀಯ ಕ್ರಮವು ಪ್ರಮುಖ ತಾಣಗಳಲ್ಲಿ ಉನ್ನತ ಗುಣಮಟ್ಟದ, ಕೈಗೆಟುಕುವ ಗೃಹ ಪರಿಹಾರಗಳನ್ನು ಒದಗಿಸುವ ಕಂಪನಿಯ ಧ್ಯೇಯೋದ್ದೇಶಕ್ಕೆ ಪೂರಕವಾಗಿದೆ. ಈ ವಿಸ್ತರಣೆಗೆ ಅನುಕೂಲ ಕಲ್ಪಿಸಲು ಜಿ ಸ್ಕ್ವಯರ್ ಬಿಲ್ಡರ್ ಗಳೊಂದಿಗೆ ಸಹಯೋಗಗಳನ್ನು ನಿರೀಕ್ಷಿಸುತ್ತಿದ್ದು ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ತನ್ನ ಉಪಸ್ಥಿತಿಯನ್ನು ಸದೃಢಗೊಳಿಸುವ ಗುರಿ ಹೊಂದಿದೆ.
ಜಿ ಸ್ಕ್ವಯರ್ ಆಲ್ಕೆಮಿ: ಪ್ರೀಮಿಯಂ ರೆಸಿಡೆನ್ಷಿಯಲ್ ಕಮ್ಯುನಿಟಿ
ರಾಜರಾಜೇಶ್ವರಿ ನಗರದ ಹೃದಯಭಾಗದಲ್ಲಿರುವ ಜಿ ಸ್ಕ್ವಯರ್ ಆಲ್ಕೆಮಿ 39.8 ಎಕರೆಗಳ ವಿಸ್ತೀರ್ಣ ಹೊಂದಿದೆ ಮತ್ತು 478 ಅತಿ ಸೂಕ್ಷ್ಮವಾಗಿ ಯೋಜಿಸಿದ ರೆಸಿಡೆನ್ಷಿಯಲ್ ಪ್ಲಾಟ್ ಗಳು 822ರಿಂದ 3,800 ಚದರ ಅಡಿಯವರೆಗೆ ವಿಸ್ತರಿಸಿವೆ. ಈ ನಿರ್ಮಾಣಕ್ಕೆ ಸಿದ್ಧವಿರುವ ಕಮ್ಯುನಿಟಿ ಮತ್ತು ಎಲ್ಲವನ್ನೂ ಒಳಗೊಂಡ ರೆಸಿಡೆನ್ಷಿಯಲ್ ಟೌನ್ ಶಿಪ್ 35 ವಿಶ್ವಮಟ್ಟದ ಸೌಲಭ್ಯಗಳನ್ನು ಒಳಗೊಂಡಿದ್ದು ಅದರಲ್ಲಿ ಉತ್ತಮವಾಗಿ ರೂಪಿಸಿದ ಬೀದಿದೀಪಗಳನ್ನು ಒಳಗೊಂಡ ಆಂತರಿಕ ರಸ್ತೆಗಳು, 24×7 ಸಿಸಿಟಿವಿ ಮೇಲ್ವಿಚಾರಣೆ ಮತ್ತು ಪರಿಪೂರ್ಣ ಕಾನೂನು ದಾಖಲೀಕರಣ ಹೊಂದಿದ್ದು ಸುರಕ್ಷಿತ ಮತ್ತು ಐಷಾರಾಮಿ ಜೀವನಶೈಲಿ ದೃಢೀಕರಿಸುತ್ತದೆ.
ಜಿ ಸ್ಕ್ವಯರ್ ಆಲ್ಕೆಮಿ ಪ್ರಮುಖ ಟ್ರಾನ್ಸಿಟ್ ಹಬ್ ಗಳು, ಶೈಕ್ಷಣಿಕ ಸಂಸ್ಥೆಗಳು, ಆರೋಗ್ಯಸೇವಾ ಸೌಲಭ್ಯಗಳು ಮತ್ತು ಪ್ರಮುಖ ರಸ್ತೆಗಳಿಗೆ ಸಂಪರ್ಕ ನೀಡುತ್ತದೆ. ಹತ್ತಿರದಲ್ಲಿರುವ ಸೌಲಭ್ಯಗಳು:
ತಕ್ಷಣದ ನೆರೆಹೊರೆ: ರಾಜರಾಜೇಶ್ವರಿ ನಗರದಲ್ಲಿದೆ ಮತ್ತು ಮೈಸೂರು ರಸ್ತೆಯ 80 ಅಡಿ ರಸ್ತೆಯಲ್ಲಿ ಬರಲಿದೆ.
ಶೈಕ್ಷಣಿಕ ಸಂಸ್ಥೆಗಳು: ಕ್ರೈಸ್ಟ್ ಪಬ್ಲಿಕ್ ಸ್ಕೂಲ್ ಮತ್ತು ಪಿಯು ಕಾಲೇಜಿನಿಂದ 1 ನಿಮಿಷದ ದಾರಿ; ಮೈಸೂರಿನ ಕ್ರೈಸ್ಟ್ ಕಾಲೇಜಿನಿಂದ 10 ನಿಮಿಷಗಳ ದಾರಿ
ಸಾರಿಗೆ ಕೇಂದ್ರಗಳು: ಹೊರ ವರ್ತುಲ ರಸ್ತೆಯಿಂದ 2 ನಿಮಿಷಗಳು; ಮೈಸೂರು ಜಂಕ್ಷನ್ ನಿಂದ 20 ನಿಮಿಷಗಳು; ಮೈಸೂರು ಬಸ್ ನಿಲ್ದಾಣಕ್ಕೆ ಹತ್ತಿರದಲ್ಲಿದೆ; ಮೈಸೂರು ವಿಮಾನ ನಿಲ್ದಾಣಕ್ಕೆ ಸುಲಭದಲ್ಲಿ ತಲುಪಬಹುದು.
ಆರೋಗ್ಯಸೇವಾ ಸೌಲಭ್ಯಗಳು: ಅಪೋಲೋ ಬಿಜಿಎಸ್ ಆಸ್ಪತ್ರೆಯಿಂದ 15 ನಿಮಿಷಗಳು
ಜಿ ಸ್ಕ್ವಯರ್ ಆಲ್ಕೆಮಿ ಪ್ರತಿ ಚದರ ಅಡಿಗೆ ಸ್ಪರ್ಧಾತ್ಮಕ ಬೆಲೆ ₹4,551 ಹೊಂದಿದ್ದು ಹೆಚ್ಚು ಕೈಗೆಟುಕುವ ಆಯ್ಕೆಯನ್ನು ಹತ್ತಿರದ ಪ್ರದೇಶಗಳಾದ ನಿವೇದಿತ ನಗರ (ಪ್ರತಿ ಚದರ ಅಡಿಗೆ ₹9,000 ರಿಂದ ₹10,000) ಮತ್ತು ಶಾರದಾದೇವಿ ನಗರ (ಪ್ರತಿ ಚದರ ಅಡಿಗೆ ₹8,000 ರಿಂದ ₹9,000)ದಂತಹ ಪ್ರದೇಶಗಳಿಗೆ ಹೋಲಿಸಿದರೆ ಹೆಚ್ಚು ಕೈಗೆಟುಕುವ ಆಯ್ಕೆ ನೀಡುತ್ತದೆ. ಈ ಬೆಲೆಯ ಕಾರ್ಯತಂತ್ರವು ಕೈಗೆಟುಕುವ ಬೆಲೆಗಳಲ್ಲಿ ಪ್ರೀಮಿಯಂ ಪ್ರಾಜೆಕ್ಟ್ ಗಳನ್ನ ಪೂರೈಸುವ ಜಿ ಸ್ಕ್ವಯರ್ ಬದ್ಧತೆಯನ್ನು ಎತ್ತಿ ತೋರುತ್ತದೆ.
ತೀವ್ರವಾಗಿ ಏರಿಕೆಯಾಗುತ್ತಿರುವ ಸ್ಥಿರಾಸ್ತಿ ಬೆಲೆಗಳು, ತೀವ್ರವಾದ ಟ್ರಾಫಿಕ್ ಮತ್ತು ನಗರದ ಜನಸಂದಣಿಯಿಂದ ಬೆಂಗಳೂರು ಬಿಕ್ಕಟ್ಟಿನಲ್ಲಿದೆ. ಮೈಸೂರು ಗೃಹ ಖರೀದಿದಾರರಿಗೆ ಜಾಣ್ಮೆಯ ಆಯ್ಕೆಯಾಗಿ ಹೊರಹೊಮ್ಮುತ್ತಿದೆ. ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಮತ್ತು ನೈಸ್ ರಸ್ತೆಗಳು ಪ್ರಯಾಣದ ಅವಧಿಯನ್ನು ಕೇವಲ ಎರಡು ಗಂಟೆಗಳಿಗೆ ಇಳಿಸಿದೆ. ಮೈಸೂರು ಕೈಗೆಟುಕಬಲ್ಲತೆ, ಲಭ್ಯತೆ ಮತ್ತು ಉನ್ನತ ಜೀವನದ ಗುಣಮಟ್ಟದ ಅಪರೂಪದ ಮಿಶ್ರಣ ನೀಡುತ್ತದೆ. ಕರ್ನಾಟಕದ ಎರಡನೆಯ ಐಟಿ ಹಬ್ ಆಗಿದ್ದು ಇನ್ಫೋಸಿಸ್, ವಿಪ್ರೋ ಮತ್ತಿತರೆ ಉದ್ಯಮಗಳನ್ನು ಹೊಂದಿರುವ ಮೈಸೂರು, ವೃತ್ತಿಪರರು ಮತ್ತು ಕುಟುಂಬಗಳಿಗೆ ಬೆಂಗಳೂರಿನ ಅಸ್ತವ್ಯಸ್ಥತೆಗೆ ಹೋಲಿಸಿದರೆ ವೆಚ್ಚ ಉಳಿಸುವ, ಕಡಿಮೆ ಒತ್ತಡದ ಪರ್ಯಾಯವಾಗಿದೆ. ಟ್ರಾಫಿಕ್ ಒತ್ತಡದಿಂದ ಬೆಂಗಳೂರು ವಾರ್ಷಿಕವಾಗಿ ₹19,725 ಕೋಟಿ ನಷ್ಟ ಅನುಭವಿಸುತ್ತದೆ, ಮೈಸೂರಿನ ಯೋಜಿತ ಮೂಲಸೌಕರ್ಯವು ಸರಾಗ ಕನೆಕ್ಟಿವಿಟಿ ಮತ್ತು ಸಂಚಾರ ಸಮಯವನ್ನು ಬೆಂಗಳೂರಿನ ಒಳಗಡೆ ಸಂಚರಿಸುವುದಕ್ಕಿಂತ ಕಡಿಮೆ ಮಾಡುತ್ತದೆ.ನಗರದ ರಿಯಲ್ ಎಸ್ಟೇಟ್ ಮಾರುಕಟ್ಟೆಯು ಕೂಡಾ ಮತ್ತಷ್ಟು ಆಕರ್ಷಕವಾಗಿದ್ದು ಚದರ ಅಡಿಗೆ ₹4,750/ ಬೆಲೆ ಇದ್ದು ಬೆಂಗಳೂರಿನ ಪ್ರಮುಖ ತಾಣಗಳಲ್ಲಿ ₹9,000+ ಹೊಂದಿದೆ. ಸ್ಥಿರಾಸ್ತಿ ಮೌಲ್ಯಗಳು ಶೇ.53ರಷ್ಟು ವೃದ್ಧಿಸುತ್ತಿದ್ದು ಏರುಗತಿಯ ಐಟಿ ಅವಕಾಶಗಳು ಮತ್ತು ಶಾಂತಿಯುತ ನಗರದ ಹಿನ್ನೆಲೆ ಹೊಂದಿರುವುದು ಮೈಸೂರು ಬರೀ ತಾತ್ಕಾಲಿಕ ಗೆಟ್ ಅವೇ ಅಲ್ಲ, ಅದು ಸ್ಮಾರ್ಟ್ ಅರ್ಬನ್ ಲಿವಿಂಗ್ ಭವಿಷ್ಯವಾಗಿದೆ.
ಜಿ ಸ್ಕ್ವಯರ್ ರಿಯಾಲ್ಟರ್ಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಶ್ರೀ ಬಾಲ ರಾಮಜೆಯಂ, “ಜಿ ಸ್ಕ್ವಯರ್ ಆಲ್ಕೆಮಿಯೊಂದಿಗೆ ನಾವು ಮೈಸೂರಿನಲ್ಲಿ ಆಧುನಿಕ ನಗರದ ಜೀವನವನ್ನು ಮರು ವ್ಯಾಖ್ಯಾನಿಸುವ ಏಕೀಕೃತ ಟೌನ್ ಶಿಪ್ ಪರಿಚಯಿಸುತ್ತಿದ್ದೇವೆ. ಪ್ರಮುಖ ಸ್ಥಿರಾಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವ ನಮ್ಮ ಸಾಮರ್ಥ್ಯವು ನಮಗೆ ಸಂಪರ್ಕ, ಕೈಗೆಟುಕಬಲ್ಲತೆ ಮತ್ತು ಅಪಾರ ಬೆಲೆ ಹೆಚ್ಚುವ ಸಾಮರ್ಥ್ಯ ಹೊಂದಿದೆ. ಈ ಯೋಜನೆಯು ಸುರಕ್ಷಿತ, ಉತ್ತಮ ಯೋಜಿತ ಸಮುದಾಯಗಳನ್ನು ಕಾರ್ಯತಂತ್ರೀಯ ತಾಣಗಳನ್ನು ಪೂರೈಸಲು ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ” ಎಂದರು.
ಭೂ ಕ್ರೋಢೀಕರಣದಲ್ಲಿ 12ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿರುವ ಜಿ ಸ್ಕ್ವಯರ್ ಯಶಸ್ವಿಯಾಗಿ 14 ನಗರಗಳಲ್ಲಿ 15,000ಕ್ಕೂ ಹೆಚ್ಚು ಸಂತೃಪ್ತ ಗ್ರಾಹಕರನ್ನು ಹೊಂದಿದ್ದು ಅದು ಸುಮಾರು 4,000 ಎಕರೆಗಳ ಭೂಮಿಯನ್ನು ಹೊಂದಿದೆ. ಕೈಗೆಟುಕುವ ಬೆಲೆಗಳಲ್ಲಿ ಗುಣಮಟ್ಟದ ಅಭಿವೃದ್ಧಿಗಳನ್ನು ಪೂರೈಸುವ ಕಂಪನಿಯ ಬದ್ಧತೆಯನ್ನು ನೀಡುವ ಶೂನ್ಯ ಕಾನೂನು ಸಮಸ್ಯೆಗಳು ಮತ್ತು ಗ್ರಾಹಕರ ವಿಶ್ವಾಸ ಹೊಂದಿದ್ದು ನಗರದ ಪ್ರದೇಶಗಳನ್ನು ಪರಿವರ್ತಿಸುವಲ್ಲಿ ಮಾರುಕಟ್ಟೆ ನಾಯಕನಾಗಿ ತನ್ನ ಸ್ಥಾನವನ್ನು ಸದೃಢಗೊಳಿಸಿಕೊಂಡಿದೆ.
ಜಿ ಸ್ಕ್ವಯರ್ ಮೈಸೂರಿನಲ್ಲಿ ಜಿ ಸ್ಕ್ವಯರ್ ಆಲ್ಕೆಮಿ ವಿಸ್ತರಣೆಯು ಅಸಾಧಾರಣ ವಸತಿ ಪರಿಹಾರಗಳನ್ನು ಒದಗಿಸುವಲ್ಲಿ, ಆಧುನಿಕ ಮನೆಯ ಮಾಲೀಕರು ಮತ್ತು ಹೂಡಿಕೆದಾರರ ವಿಸ್ತರಿಸುತ್ತಿರುವ ಅಗತ್ಯಗಳನ್ನು ಪೂರೈಸುತ್ತದೆ.