ಕುರುಬ ಸಮುದಾಯ ಮತ್ತು ಸಿಎಂ ವಿರುದ್ಧ ಅವಹೇಳನ, ಕಿಡಿಗೇಡಿಗಳನ್ನು ಬಂಧಿಸದಿದ್ದರೆ ಕರ್ನಾಟಕ ಬಂದ್- ಎಚ್ಚರಿಕೆ ನೀಡಿದ ಸುಬ್ರಮಣ್ಯ ಬಿ

ನಂದಿನಿ ಮನುಪ್ರಸಾದ್ ನಾಯಕ್

ಕುರುಬ ಸಮುದಾಯ ಮತ್ತು ಸಿಎಂ ವಿರುದ್ಧ ಅವಹೇಳನ, ಕಿಡಿಗೇಡಿಗಳನ್ನು ಬಂಧಿಸದಿದ್ದರೆ ಕರ್ನಾಟಕ ಬಂದ್- ಎಚ್ಚರಿಕೆ ನೀಡಿದ ಸುಬ್ರಮಣ್ಯ ಬಿ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನ ಮಾಡಿದ ಮಂಡ್ಯದ ವ್ಯಕ್ತಿಗಳ ವಿರುದ್ಧ ಮೈಸೂರಿನಲ್ಲೂ ಕುರುಬರ ರಾಜ್ಯ ಸಂಘದಿಂದ ದೂರು ನೀಡಲಾಯಿತು.
ಮೈಸೂರಿನ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಮತ್ತು ಅಹಿಂದ ಒಕ್ಕೂಟಗಳ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ನೇತೃತ್ವದಲ್ಲಿ ಸಿದ್ಧಾರ್ಥನಗರದ ಕನಕಭವನದಲ್ಲಿ ಕುರುಬರ ಸಮುದಾಯದ ಸಭೆ ನಡೆಸಿದರು.

ಈ ವೇಳೆ ಮಂಡ್ಯದಲ್ಲಿ ಹಾಲುಮತಸ್ಥ ಸಮುದಾಯದ ವಿರುದ್ಧ ಮಾತನಾಡಿರುವುದನ್ನು ಖಂಡಿಸಿದರು. ಸಭೆ ಬಳಿಕ ನಿಯೋಗವೊಂದು ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ಅವಹೇನಕಾರಿ ಮಾತುಗಳನ್ನಾಡಿದವರ ವಿರುದ್ಧ ದೂರು ದಾಖಲಿಸಿದರು. ಬಳಿಕ ಮಾತನಾಡಿದ ಕರ್ನಾಟಕ ರಾಜ್ಯ ಕುರುಬರ ಸಂಘದ ಮಾಜಿ ರಾಜ್ಯಾಧ್ಯಕ್ಷ ಬಿ.ಸುಬ್ರಹ್ಮಣ್ಯ ಮಾತನಾಡಿ, ಯಾವುದೇ ಸಮುದಾಯದ ವಿರುದ್ಧ ಯಾರೇ ಮಾತನಾಡಿದರು ಅದು ತಪ್ಪೇಯಾಗಿದೆ. ಅದರಲ್ಲೂ ಹಾಲು ಮತಸ್ಥ ಸಮುದಾಯದ ಬಗ್ಗೆ ಮಾತನಾಡುವುದು ಅಕ್ಷಮ್ಯ ಅಪರಾಧವಾಗಿದೆ. ಏ.8 ರಂದು ಮಾತನಾಡಿರುವ ದುಷ್ಕರ್ಮಿಗಳ ವಿರುದ್ಧ ಇದುವರೆವಿಗೂ ಯಾವುದೇ ಕಾನೂನು ಕ್ರಮ ಆಗಿಲ್ಲ‌ ಎಂದರು.
ಈ ಹಿನ್ನೆಲೆಯಲ್ಲಿ ಆ.12 ರಂದು ಮದ್ದೂರು ತಾಲ್ಲೂಕಿನ ಬಸರಾಳು ಗ್ರಾಮ ಬಂದ್ ಗೆ ಕರೆ ನೀಡಿದ್ದೇವೆ.

ಅದಾಗಿಯೂ ಅವಹೇಳನಕಾರಿ ಹೇಳಿಕೆ ನೀಡಿದವರನ್ನು ಬಂಧಿಸಿ, ಗಡಿಪಾರು ಮಾಡದಿದ್ದರೆ ಅವರ ವಿರುದ್ಧ ರಾಜ್ಯ ಬಂದ್ ಗೂ ಕರೆ ನೀಡಲು ತಯಾರಿ ಮಾಡುವುದಾಗಿ ಇದೇ ವೇಳೆ ಎಚ್ಚರಿಸಿದರು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನುದಾನ ತಾರತಮ್ಯದ ವಿರುದ್ಧ ಮುಕ್ತವಾಗಿ ಅಂಕಿ ಅಂಶಗಳ ಮೂಲಕ ಮಾತನಾಡುವ ಎಕೈಕ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ ಆಗಿದ್ದಾರೆ. ಹೀಗಾಗಿ ಅಂತಹ ಸಿದ್ದರಾಮಯ್ಯರನ್ನು ಗುರಿಯಾಗಿಸಿಕೊಂಡು ಮಾತನಾಡುವವರ ವಿರುದ್ಧ ಷಡ್ಯಂತ್ರ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ವೇಳೆ ಕುರುಬ ಸಮುದಾಯದ ಜಿಲ್ಲಾಧ್ಯಕ್ಷರುಗಳಾದ, ನಂಜೇಗೌಡ , ತಾಲೂಕು ಅಧ್ಯಕ್ಷರಾದ ಕೋಟೆ ಆನಂದ್, ಕೆಂಪಣ್ಣ, ಕುನ್ನೇಗೌಡ, ಬಸವರಾಜು, ನಗರ ಪಾಲಿಕೆ ಮಾಜಿ ಸದಸ್ಯ ಗೋಪಿ, ರವಿ, ಶೋಭಾ, ಛಾಯಾ, ಮುಖಂಡರುಗಳಾದ ವಕೀಲ ಪುಟ್ಟಸ್ವಾಮಿ, ಜಯಸ್ವಾಮಿ, ಬಿಬಿಎಂಪಿ ಮಾಜಿ ಸದಸ್ಯ ಗಡ್ಡ ಕೃಷ್ಣಮೂರ್ತಿ, ಅಭಿ, ರವಿ, ಅಪ್ಪುಗೌಡ, ಕೃಷ್ಣ, ಧರ್ಮೇಂದ್ರ, ಡಿ.ಹುಚ್ಚೇಗೌಡ,ಎಚ್.ಕೆ.ಗೋಪಾಲ್, ಹಿನಕಲ್ ಉದಯ್, ಮಹೇಶ್, ಕಾಡನಹಳ್ಳಿ ಸ್ವಾಮಿಗೌಡ, ಅಭಿ ಸೇರಿದಂತೆ ಮೈಸೂರು ಮಂಡ್ಯ ಚಾಮರಾಜನಗರ ಜಿಲ್ಲೆಯ ತಾಲೂಕು ಕುರುಬ ಸಂಘದ ಅಧ್ಯಕ್ಷರುಗಳು, ಪದಾಧಿಕಾರಿಗಳಾದ ಕುರಿಹುಂಡಿ ರಾಜು, ಜೈ ಸ್ವಾಮಿ , ಹಿನಕಲ್ ಉದಯ್, ಮೋಹನ್ , ಆನಂದ್, ಬಸವಣ್ಣ, ಪರಮೇಶ್, ಮಹೇಶ್, ರವಿ, ಅಪ್ಪುಗೌಡ , ಚಿಕ್ಕಣ್ಣ, ಸೇರಿದಂತೆ ಮೂರು ಜಿಲ್ಲೆಯ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *