ಮೈಸೂರು:26 ಏಪ್ರಿಲ್ 2022
ನಂದಿನಿ ಮೈಸೂರು
ಡಾ.ಈ.ಸಿ.ನಿಂಗರಾಜ್ ಗೌಡ ಸ್ನೇಹ ಬಳಗದಿಂದ ದಕ್ಷಿಣ ಪದವೀಧರ ಕ್ಷೇತ್ರದ ಮತದಾರರ ನೋಂದಣಿ ಕಾರ್ಯಕ್ರಮದ ಕೃತಜ್ಞತಾ ಸಭೆ ಏರ್ಪಡಿಸಲಾಗಿತ್ತು.
ಮೈಸೂರಿನ ವಿಜಯನಗರದ 3 ನೇ ಹಂತದಲ್ಲಿರುವ ಖಾಸಗೀ ಹೋಟೆಲ್ ನಲ್ಲಿ ಆಯೋಜಿಸಿದ್ದ ಕೃತಜ್ಞತಾ ಸಭೆಗೆ ತುಮಕೂರು ವಿ.ವಿ ವಿಶ್ರಾಂತ ಕುಲಪತಿ ಪ್ರೊ ವೈ ಎಸ್ ಸಿದ್ದೆಗೌಡ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ಡಾ.ಈ.ಸಿ.ನಿಂಗರಾಜ್ ಗೌಡ ಮಾತನಾಡಿ ಈ ಬಾರೀ ನಡೆಯುತ್ತಿರುವ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಯ ಆಕಾಂಕ್ಷಿಯಾಗಿದ್ದೇ.ಮೈವಿ ರವಿಶಂಕರ್ ಅವರಿಗೆ ಪಕ್ಷ ಟಿಕೇಟ್ ನೀಡಿದೆ.ನನ್ನ ಎಲ್ಲಾ ಮತದಾರರು ಮೈವಿ ರವಿಶಂಕರ್ ರವರಿಗೆ ಮತ ಹಾಕುವಂತೆ ಮನವಿ ಮಾಡುತ್ತೇನೆ ಎಂದರು.
ಟಿಕೇಟ್ ಕೈತಪ್ಪಿದ್ದಕ್ಕೆ ಏನು ಹೇಳ್ತೀರಾ ಅಂತ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಟಿಕೇಟ್ ಸಿಗದಿದ್ದಕ್ಕೆ ಬೇಸರವಾಗಿದೆ.ಪಕ್ಷ ಕ್ಕಾಗಿ ಹತ್ತಾರು ವರ್ಷ ದುಡಿದಿದ್ದೇನೆ.ಪಕ್ಷದಿಂದ ಮೂರು ಬಾರಿ ಟಿಕೇಟ್ ಕೈ ತಪ್ಪದೆ.ಕಳೆದ ವರ್ಷ ಬೇರೆ ಪಕ್ಷದಿಂದ ಟಿಕೇಟ್ ಕೊಡುವುದಾಗಿ ಹೇಳಿದ್ದರು.ಆದರೇ ನಾನು ಪಕ್ಷ ಬಿಟ್ಟು ಹೋಗಿಲ್ಲ.ಮುಂದಿನ ದಿನಗಳಲ್ಲಿಯೂ ಪಕ್ಷಕ್ಕಾಗಿಯೇ ದುಡಿಯುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ನಗಾಧ್ಯಕ್ಷ ಶ್ರೀವತ್ಸ , ಬಿಜೆಪಿ ಪ್ರಭಾರಿ ಮೈಸೂರು ವಿಭಾಗದ
ಹಿರೇಂದ್ರ ಷಾ ,ಬಿಜೆಪಿ ಹಿರಿಯ ಮುಖಂಡ ಗೋಪಾಲ್ ರಾವ್ ,ಕೆಎಸ್ ಓ ಯು ಮಾಜಿ ಕುಲಸಚಿವ ಪ್ರೊ ರಾಮಾರಥನ್ ,ಮೈಸೂರು ವಿವಿ
ಪ್ರಾಧ್ಯಾಪಕ ಮೃತ್ಯುಂಜಯ ,ಉದ್ಯಮಿ ನಂದೀಶ್ ಸೇರಿದಂತೆ ಡಾ.ಈ.ಸಿ.ನಿಂಗರಾಜ್ ಗೌಡ ಸ್ನೇಹ ಬಳಗದವರು ಭಾಗಿಯಾಗಿದ್ದರು.