ಮೈಸೂರು ಪತ್ರಿಕೋದ್ಯಮದ ಬೃಹತ್ ಕೊಂಡಿ ಕಳಚಿದೆ – ಕೆಬಿ ಗಣಪತಿ ನಿಧನಕ್ಕೆ – ಬಿ ಸುಬ್ರಹ್ಮಣ್ಯ ಸಂತಾಪ
ʻಮೈಸೂರು ಮಿತ್ರʼ ಮತ್ತು ʻಸ್ಟಾರ್ ಆಫ್ ಮೈಸೂರುʼ ಪತ್ರಿಕೆಗಳ ಸಂಸ್ಥಾಪಕರು, ಹಿರಿಯ ಪತ್ರಕರ್ತರು, ಲೇಖಕರೂ ಆದ ಡಾ.ಕೆ.ಬಿ ಗಣಪತಿ ಅವರ ನಿಧನಕ್ಕೆ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ಸಂತಾಪ ಸೂಚಿಸಿದ್ದಾರೆ.
ಕೊಡಗಿನವರಾದ ಡಾ.ಗಣಪತಿ ಅವರು ಕರ್ನಾಟಕದ ಮಾಧ್ಯಮ ಕ್ಷೇತ್ರದಲ್ಲಿ ಅತ್ಯುನ್ನತ ವ್ಯಕ್ತಿಯಾಗಿ ನಿಂತವರು. 5 ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ ಅವಿರತ ದುಡಿದ ಗಣಪತಿ ಅವರು ವಸ್ತುನಿಷ್ಠ ಹಾಗೂ ವೃತ್ತಿಪರ ಬರಹಗಳಿಗೆ ಹೆಸರುವಾಸಿಯಾಗಿದ್ದವರು. ತಮ್ಮ ಪತ್ರಿಕೆಗಳ ಮೂಲಕ ಹಳೇ ಮೈಸೂರು ಪ್ರಾಂತ್ಯದಲ್ಲಿ ದೊಡ್ಡ ಓದುಗ ವರ್ಗವನ್ನೇ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದರು.
ಇದರ ಜೊತೆಗೆ ನೂರಾರು ಪತ್ರಕರ್ತರನ್ನು ಈ ನಾಡಿಗೆ ಕೊಡುಗೆ ನೀಡಿದ ಹಿರಿಮೆ ಗಣಪತಿ ಅವರಿಗೆ ಸಲ್ಲುತ್ತದೆ. ಪತ್ರಿಕೋದ್ಯಮದಲ್ಲಿ ಅವರು ಮೂಡಿಸಿರುವ ಹೆಜ್ಜೆಗುರುತುಗಳು ಯುವ ಪತ್ರಕರ್ತರಿಗೆ ಸ್ಪೂರ್ತಿ ಮತ್ತು ಮಾದರಿಯಾಗಲಿ. ಅವರ ಕುಟುಂಬ, ಸಹೋದ್ಯೋಗಿಗಳು ಮತ್ತು ಅವರ ಮಾತುಗಳಲ್ಲಿ ಸ್ಪಷ್ಟತೆ ಮತ್ತು ಧೈರ್ಯವನ್ನು ಕಂಡುಕೊಂಡ ಅಸಂಖ್ಯಾತ ಓದುಗರಿಗೆ ನನ್ನ ತೀವ್ರ ಸಂತಾಪಗಳನ್ನು ಸೂಚಿಸುತ್ತೇನೆ.
ಬಿ ಸುಬ್ರಹ್ಮಣ್ಯ
ಮಾಜಿ ಅಧ್ಯಕ್ಷರು ಕರ್ನಾಟಕ ಪ್ರದೇಶ ಕುರುಬರ ಸಂಘ
9845394933