ನಂದಿನಿ ಮೈಸೂರು
ಸಮಾಜ ಸೇವಕರು ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ಸಿವಿಲ್ ಇಂಜಿನಿಯರ್ ಆದ ಕಾರ್ತಿಕ್ ಆರ್ ರವರು ತಿಲಕ್ ನಗರದಲ್ಲಿರುವ ಅಂಧ ಮಕ್ಕಳ ಶಾಲೆಯಲ್ಲಿ ಮಕ್ಕಳಿಗೆ ಹಣ್ಣು ಹಂಪಲು ಕೊಡುವ ಮೂಲಕ ಅರ್ಥಪೂರ್ಣವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಗಾಂಧಿನಗರದಲ್ಲಿರುವ ವೃದ್ಧಾಶ್ರಮದಲ್ಲಿ ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಮಾಡಿಸಲಾಯಿತು.ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಅವಕಾಶ ಸಿಕ್ಕಿದ್ದಲ್ಲಿ ಮತ್ತಷ್ಟು ಸಮಾಜಸೇವೆ ಮಾಡುವುದಾಗಿ ಕಾರ್ತಿಕ್ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಸುರೇಶ್ ಕ್ಯಾಟ್, ಅರ್ಫಾದ್, ಮಂಜುನಾಥ್, ವಿಶಾಲ್, ಮಹದೇವ್, ಮನೋಜ್, ಚಿನ್ಮಯ್, ಮೋಹನ್ ಸಿಂಧುವಳ್ಳಿ, ನದೀಮ್ ಸೇರಿದಂತೆ ಅಭಿಮಾನಿಗಳು ಭಾಗಿಯಾಗಿದ್ದರು