ಮೈಸೂರು:21 ಡಿಸೆಂಬರ್ 2021
ನಂದಿನಿ
ಬೆಳಗಾವಿಯಲ್ಲಿ ಎಂ ಇ ಎಸ್, ಶಿವಸೇನೆ ಕಾರ್ಯಕರ್ತರು ಪುಂಡಾಟ ನಡೆಸಿ, ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿ, ಉದ್ವಿಗ್ನ ವಾತಾವರಣ ಸೃಷ್ಟಿಸಿದ್ದಲ್ಲದೆ ಜತೆಗೆ ದೇಶಭಕ್ತ ಸಂಗೊಳ್ಳಿ ರಾಯಣ್ಣ ರ ಪ್ರತಿಮೆ ಭಗ್ನ ಮಾಡಿ, ಸರ್ಕಾರದ ವಾಹನಗಳನ್ನು ಹೊಡೆದುಹಾಕಿ – ಧ್ವಂಸಮಾಡಿ ಕರ್ನಾಟಕದ ಪ್ರವಾಸಿಗರ ಕಾರುಗಳನ್ನು ಅಡ್ಡಹಾಕಿ ಒಡೆದು ಹಾಕಿರುವುದನ್ನು ಹಾಗೂ ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡುತ್ತಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆಯಿಂದ ಪ್ರತಿಭಟನೆ ನಡೆಯಿತು.
ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರು ಮಾತನಾಡಿ ರಾಜ್ಯದಲ್ಲಿ ಸರ್ಕಾರದ, ಕಾನೂನು ಸುವ್ಯವಸ್ದೆ ಸತ್ತು ಹೋಗಿದೆ. ಜೀವಂತವಾಗಿದ್ದರೆ ಇಂತಹ ಕೃತ್ಯ ನಡೆಯಲು ಬಿಡುತ್ತಿರಲಿಲ್ಲ, ಅದೂ ಅಧಿವೇಶನ ನಡೆಯುತ್ತಿರುವ ವೇಳೆಯಲ್ಲಿಯೇ, ಎಂ ಇ ಎಸ್ ಪುಂಡಾಟ ಮಾಡುತ್ತಿದ್ರೂ ಸರಕಾರ ಏನು ಮಾಡುತ್ತಿದೆ. ಕೇವಲ ಮರಾಠಿಗರ ಮತಕ್ಕೋಸ್ಕರ ಸರ್ಕಾರ ಇಡೀ ರಾಜ್ಯವನ್ನೇ ಬಲಿ ಕೊಡುತ್ತಿದೆ.
ಬೆಳಗಾವಿ ಕರ್ನಾಟಕದ ಕಿರೀಟ, ಅವಿಭಾಜ್ಯ ಅಂಗ ಎಂದು ಗೊತ್ತಿದ್ದರೂ, ಎಂ ಇ ಎಸ್, ಶಿವಸೇನೆ ಕಾರ್ಯಕರ್ತರು ಪದೇಪದೇ ಕ್ಯಾತೆ ತೆಗೆದು ತೊಂದರೆ ಕೊಡುತ್ತಿರುವುದು ಹೇಯ ಕೃತ್ಯವಾಗಿದೆ ಹಾಗು ಸಾವಿರಾರು ಜನ ಪೊಲೀಸರು ಬೆಳಗಾವಿಯಲ್ಲಿ ಇದ್ದರೂ ಈ ಕೃತ್ಯ ನಡೆದಿರುವುದು ಸರಕಾರ ನಿಷ್ಕ್ರಿಯವಾಗಿದೆ ಅದನ್ನು ತೋರಿಸುತ್ತದೆ. ಇಷ್ಟೆಲ್ಲಾ ಪುಂಡಾಟಗಳನ್ನು ಎಂ ಇ ಎಸ್ ಮಾಡುತ್ತಿದ್ದರು ಬೆಳಗಾವಿ ಶಾಸಕರು ಜಿಲ್ಲಾ ಮಂತ್ರಿಗಳು ಏನು ಮಾಡುತ್ತಿದ್ದಾರೆ. ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಗಳು ಏನು ಮಾಡುತ್ತಿದೆ. ಕನ್ನಡಿಗರ ಸ್ವಾಭಿಮಾನವನ್ನು ಕೆಣಕುತ್ತಿದ್ದರೂ ಸಹಿಸಿಕೊಂಡಿರುವ ರಾಜ್ಯ ಸರ್ಕಾರವು ರಣಹೇಡಿ ಸರ್ಕಾರವಾಗಿದೆ
ಈ ಎರಡು ರಾಜ್ಯಗಳ ಮಧ್ಯೆ ಸಾಮರಸ್ಯವನ್ನು ಹಾಳುಮಾಡುತ್ತಿರುವ ಈ ಪುಂಡರಿಗೆ ಕಠಿಣ ಮರಣದಂಡಣೆ ಶಿಕ್ಷೆ ಆಗಬೇಕು.
ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳು ಈ ಕೂಡಲೇ ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಎಂ ಇ ಎಸ್ ಅನ್ನು ಶಾಶ್ವತವಾಗಿ ಬ್ಯಾನ್ ಮಾಡಬೇಕು, ನಮ್ಮ ರಾಜ್ಯದ ಜನರ ಭಾವನೆಯನ್ನು ಕೆರಳಿಸಿ ಅಪಾರ ಆಸ್ತಿ ಹಾನಿ ಮಾಡಿರುವವರನ್ನು ಕ್ಷಮಿಸಬಾರದು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಿ ಮತ್ತೆ ಈ ರೀತಿ ಪ್ರಕರಣಗಳು ಮರುಕಳಿಸಬಾರದೆಂದು, ಶಾಶ್ವತವಾಗಿ ಈ ಎಂ ಇ ಎಸ್ ಸಂಘಟನೆಯನ್ನು ಅಲ್ಲೇ ಈಗಲೇ ಬೆಳಗಾವಿ ಅಧಿವೇಶನದಲ್ಲೇ ನಿಷೇಧ ಮಾಡಬೇಕೆಂದು ಹಾಗೂ ಕನ್ನಡ ಹೋರಾಟಗಾರ ಮೇಲೆ ಹಾಕಿರುವ ಕೇಸನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ನೇತೃತ್ವ ವಹಿಸಿ, ಡಾ. ಶಾಂತರಾಜೇಅರಸ್ ಪಿ, ಮೊಗಣ್ಣಾಚಾರ್, ಕೃಷ್ಣಪ್ಪ, ವಿಜಯೇಂದ್ರ, ಪ್ರಭುಶಂಕರ್ ಎಂ ಬಿ, ಅಂಬಾ ಅರಸ್, ಉಮಾದೇವಿ, ದರ್ಶನ್ ಗೌಡ, ಎಳನೀರು ರಾಮಣ್ಣ, ಶಿವರಾಂ, ಸೋಮಶೇಖರ್, ಬಂಗಾರಪ್ಪ, ರವಿನಾಯಕ್, ಮಹದೇವ ಸ್ವಾಮಿ, ಶ್ರೀನಿವಾಸ, ಗಣೇಶ್ ಪ್ರಸಾದ್, ಉಪಸ್ಥಿತರಿದ್ದರು.