ನಂದಿನಿ ಮನುಪ್ರಸಾದ್ ನಾಯಕ್
ಕನ್ನಡಾಂಬೆ ರಕ್ಷಣಾ ವೇದಿಕೆಗೆ ಮೈಸೂರು
ಜಿಲ್ಲಾ ಪದಾಧಿಕಾರಿಗಳ ನೇಮಕ
ಮೈಸೂರು : ಕನ್ನಡಾಂಬೆ ರಕ್ಷಣಾ ವೇದಿಕೆಗೆ ಮೈಸೂರು ಜಿಲ್ಲಾ ಪದಾಧಿಕಾರಿಗಳ ನೇಮಕವು ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಬಿ.ಬಿ.ರಾಜಶೇಖರ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.
ನಗರದ ಜಲದರ್ಶಿನಿ ಅತಿಥಿ ಗೃಹದ ಸಭಾಂಗಣದಲ್ಲಿ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಸಂತೋಷ್ ಅವರನ್ನು ಮೈಸೂರು ಜಿಲ್ಲಾ ಅಧ್ಯಕ್ಷರನ್ನಾಗಿ ಘೋಷಿಸಲಾಯಿತು.
ಅಂತೆಯೇ ಗೌರವ ಅಧ್ಯಕ್ಷರಾಗಿ ಮನುಗೌಡ, ಕಾನೂನು ಸಲಹೆಗಾರರಾಗಿ ಬೀರೇಗೌಡ, ಗೌರವ ಸಲಹೆಗಾರರಾಗಿ ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಪ್ರತಾಪ್ ಜಿ., ಸಂಚಾಲಕರಾಗಿ ರಮೇಶ್, ಸಹ ಕಾರ್ಯದರ್ಶಿಯಾಗಿ ಶರತ್‌ಚಂದ್ರ, ಆಪ್ತ ಕಾರ್ಯದರ್ಶಿಯಾಗಿ ಅನುರಾಜ್ ಗೌಡ, ಕಾರ್ಯದರ್ಶಿಯಾಗಿ ಲೋಕೇಶ್, ಜಂಟಿ ಕಾರ್ಯದರ್ಶಿಯಾಗಿ ಹರೀಶ್, ಸಂಚಾಲಕರಾಗಿ ಕಿರಣ್ ಮತ್ತು ಗೌರವ ಕಾರ್ಯದರ್ಶಿಯಾಗಿ ಶಿವಕುಮಾರ್ ಅವರನ್ನು ನೇಮಿಸಿ ನೇಮಕಾತಿ ಪತ್ರವನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಮೈಸೂರು ಸಮಿತಿ ಸದಸ್ಯರಿಗೆ ಶುಭಕೋರಿದ ರಾಜ್ಯಾಧ್ಯಕ್ಷ ಬಿ.ಬಿ.ರಾಜಶೇಖರ್ ಅವರು, ಕನ್ನಡ ನಾಡು, ನುಡಿ, ಭಾಷೆಗೆ ಚ್ಯುತಿ ಬಂದಲ್ಲಿ ಹೋರಾಟಕ್ಕೆ ಸಿದ್ದರಾಗಬೇಕು. ನಮ್ಮ ನಾಡು ನುಡಿ ನಮ್ಮ ಜಲವನ್ನು ರಕ್ಷಣೆ ಮಾಡಬೇಕು. ಸದಾಕಾಲ ಪ್ರಾಮಾಣಿಕತೆಯಿಂದ ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕು ಮತ್ತು ಅಸಹಾಯಕರ ಪರ ದನಿಯಾಗಿ ನಿಲ್ಲಬೇಕೆಂದು ಕಿವಿಮಾತು ಹೇಳಿದರು.ಕನ್ನಡಾಂಬೆ ರಕ್ಷಣಾ ವೇದಿಕೆ ಕಳೆದ ಹಲವು ವರ್ಷಗಳಿಂದ ಅನ್ಯಾಯ, ಭ್ರಷ್ಟಾಚಾರದ ವಿರುದ್ಧ ಪ್ರಾಮಾಣಿಕ ಹೋರಾಟ ನಡೆಸಿದೆ. ಇತ್ತೀಚೆಗೆ ನಾವು ಮೈಸೂರು ಜಿಲ್ಲೆಯ ೩೨ ಗ್ರಾಮ ಪಂಚಾಯಿತಿಗಳಲ್ಲಿ ಅಮೃತ್ ಗ್ರಾಪಂ ಯೋಜನೆಯಲ್ಲಿ ನಡೆದಿದ್ದ ಭಾರಿ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರ ಫಲವಾಗಿ ಜಿಲ್ಲಾಡಳಿತ ಅದರ ತನಿಖೆಗೆ ಆದೇಶಿಸಿದೆ. ಚಾಮುಂಡಿಬೆಟ್ಟದ ಪ್ರಸಾದ ತಯಾರಿಸುವ ಅಡುಗೆ ಮನೆಯ ಅಶುಚಿತ್ವದ ಬಗ್ಗೆ ದನಿ ಎತ್ತಿದ್ದೆವು. ಜಿಲ್ಲಾಧಿಕಾರಿಗಳು ಲಾಡು ತಯಾರಿಕೆಗೆ ಬದಲಿ ವ್ಯವಸ್ಥೆ ಮಾಡಿದ್ದಾರೆ. ಹೀಗೆ ನಮ್ಮ ಹತ್ತು ಹಲವು ಪ್ರಾಮಾಣಿಕ ಮತ್ತು ಜನಪರ ಹೋರಾಟಗಳು ಯಶಸ್ಸು ಕಂಡಿವೆ. ಮುಂದೆಯೂ ನಾವು ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ನಡೆಸುತ್ತೇವೆ.
ಬಿ.ಬಿ.ರಾಜಶೇಖರ್, ಅಧ್ಯಕ್ಷರು. ಕನ್ನಡಾಂಬೆ ರಕ್ಷಣಾ ವೇದಿಕೆ