ನಂದಿನಿ ಮೈಸೂರು
ಕಂಕಣ ಸಿಲ್ಕ್’ ಶೋರೂಂ ಪ್ರಾರಂಭ
ಮೈಸೂರು: ವಿಜಯನಗರ 1ನೇ ಹಂತದ ಜಯ ಚಾಮರಾಜೇಂದ್ರ ರಸ್ತೆಯಲ್ಲಿ ನೂತನವಾಗಿ ಪ್ರಾರಂ ಭಿಸಲಾಗಿರುವ ‘ಕಂಕಣ ಸಿಲ್ಕ್’ ರೇಷ್ಮೆ ಸೀರೆಗಳ ಶೋರೂಂ ಅನ್ನು ಮೈಸೂರು ನಗರದ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಉದ್ಘಾಟಿಸಿದರು.
ಶುಕ್ರವಾರ ಬೆಳಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ದೀಪ ಬೆಳಗಿಸುವ ಮೂಲಕ ನೂತನ ಶೋರೂಂಗೆ ಚಾಲನೆ ನೀಡಿ, ಮಾತನಾಡಿ, ಪಾರಂಪರಿಕ ನಗರಿ ಎಂದೇ ಖ್ಯಾತವಾಗಿರುವ ಮೈಸೂರಿನಲ್ಲಿ ಅತ್ಯುತ್ತಮ ರೇಷ್ಮೆ ಸೀರೆಗಳ ಮಾರಾಟ ಕೇಂದ್ರವನ್ನು ಸ್ಥಾಪಿಸಿರುವ ಶೋಭಾ ಪ್ರಕಾಶ್ ಮತ್ತು ಸೌಮ್ಯ ಅಮರ್ ಅವರಿಗೆ ಶುಭವಾಗಲಿ ಎಂದರು. ಮೈಸೂರು ವಿವಿ ರಿಜಿಸ್ಟ್ರಾರ್ ಎಂ.ಕೆ.ಸವಿತ ಅವರು ಮಾತನಾಡಿ, ಸಾಂಸ್ಕೃತಿಕ ನಗರಿ ಮೈಸೂ ರಿನಲ್ಲಿ ಇಂತಹದೊಂದು ಉತ್ತಮ ರೇಷ್ಮೆ ಸೀರೆಗಳ ಶೋರೂಂ ಪ್ರಾರಂಭವಾಗಿರುವುದು ಸಂತಸ ತಂದಿದೆ. ಇಲ್ಲಿ ಕಂಚಿಪುರಂ ಸೇರಿದಂತೆ ಹಲವು ಮಾದರಿಯ ಉತ್ತಮ ಸೀರೆಗಳನ್ನು ನೋಡಬ ಹುದು. ಮಹಿಳೆಯರು ಉದ್ಯಮ ಪ್ರಾರಂಭಿಸಿ ರುವುದೂ ಕೂಡ ಸಂತಸ ತಂದಿದೆ. ನಾನೂ ಕೂಡ ಸೀರೆಯನ್ನು ಖರೀದಿಸಿದ್ದೇನೆ. ಸೀರೆಯಲ್ಲಿ ಮಹಿಳೆಯರು ಸುಂದರವಾಗಿ ಕಾಣುತ್ತಾರೆ. ನೂತನ ಉದ್ಯಮಿಗಳಿಗೆ ಶುಭವಾಗಲಿ ಎಂದರು. ಈ ಸಂದರ್ಭದಲ್ಲಿ ಹಲವು ಗಣ್ಯ ಮಹಿಳೆಯರು ಉಪಸ್ಥಿತರಿದ್ದರು.