ಮೈಸೂರು:16 ಡಿಸೆಂಬರ್ 2021
ನಂದಿನಿ
ಜೆಎಸ್ ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ” ನನ್ನ ಕೈಮಗ್ಗ ನನ್ನ ಹೆಮ್ಮೆ” ವಿಶೇಷ ಕೈಮಗ್ಗ ಮೇಳ ಸಂಸ್ಕೃತಿ 2021 ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ ಎಂದು ಜೆ ಎಸ್ ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ಡಾ.ಎಚ್.ಆರ್.ಮಹದೇವಸ್ವಾಮಿ ತಿಳಿಸಿದರು.
ಡಿ 18 ರಿಂದ ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿರುವ ಅರ್ಬನ್ ಹಾತ್ ನಲ್ಲಿ ಆರಂಭವಾಗುವ ಮೇಳಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾಟಿಸಲಿದ್ದಾರೆ. ಸುಮಾರು 60ಕ್ಕೆ ಹೆಚ್ಚು ನೇಕಾರರು ಭಾರತದ ವಿವಿಧ ರಾಜ್ಯ ಹಾಗೂ ಜಿಲ್ಲೆಯ ಕೈಮಗ್ಗ ಉತ್ಪನ್ನಗಳು ಒಂದೇ ಸೂರಿನಲ್ಲಿ ಲಭ್ಯವಿದೆ.ಶೇ20% ರಿಯಾಯಿತಿ ನೀಡಲಾಗುತ್ತಿದೆ.ಸರ್ಕಾರದ ಆದೇಶದಂತೆ ಕೋವಿಡ್ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಗ್ರಾಹಕರು ಮೇಳಕ್ಕೆ ಆಗಮಿಸುವಂತೆ ಆಹ್ವಾನಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪ ನಿರ್ದೇಶಕ ಲಕ್ಷ್ಮಣ ತಳವಾರ ,ಶಿವನಂಜಸ್ವಾಮಿ ,ರಾಕೇಶ್ ರೈ ಇದ್ದರು.