ಮೈಸೂರು:11 ಫೆಬ್ರವರಿ 2022
ನಂದಿನಿ ಮೈಸೂರು
ಕೆಎಎಸ್ ಹುದ್ದೆಗಳ ನೇಮಕಾತಿಗೆ ಸಂಭಂದಿಸಿದ ಸುಪ್ರೀಂ ಕೋರ್ಟ್ ಆದೇಶದ ಯಥಾವತ್ ಜಾರಿಗೆ ಒತ್ತಾಯಿಸಿ ಫೆ.21 ರಂದು ಬೆಂಗಳೂರಿಗೆ ವಾಹನ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ ಎಸ್ ಶಿವರಾಮು ತಿಳಿಸಿದರು.
ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ 2011 ನೇ ಸಾಲಿನ ಕೆ ಎ ಎಸ್ ಹುದ್ದೆಗಳ ಆಯ್ಕೆಯನ್ನು ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಅವ್ಯವಹಾರದ ಕಾರಣಕ್ಕಾಗಿ ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು.ಸಿಐಡಿ ತನಿಖೆಯ ವರದಿಯ ಆಧಾರದ ಮೇಲೆ ಸರ್ಕಾರ 2011 ರ ನೇಮಕಾತಿಯನ್ನು ಹಿಂಪಡೆದಿತ್ತು.ನಂತರ ಕೆಎಟಿ ಉಚ್ಚನ್ಯಾಯಾಲಯ,ಸರ್ವೋಚ್ಚ ನ್ಯಾಯಾಲಯಗಳಲ್ಲೂ ಕೂಡ 2011ರ ನೇಮಕಾತಿ ಬಗ್ಗೆ ವಿಚಾರಣೆ ನಡೆದು ಅಕ್ರಮ ಆಗಿರುವುದು ಸಾಬೀತಾಗಿರುವುದರಿಂದ ಸರ್ಕಾರದ ನಡೆಯನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿದು ನೇಮಕಾತಿಯನ್ನು ರದ್ದುಗೊಳಿಸಿತ್ತು.1998,99,2004 ರ ಸಾಲಿನ ಕೆಎಎಸ್ ಹುದ್ದೆಗಳ ಸಂಬಂಧಿಸಿದ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಇಲ್ಲಿಯವರೆಗೆ ಸರ್ಕಾರ ಜಾರಿಗೊಳಿಸದೇ ಇರುವುದು ಖಂಡನೀಯ.ಸರ್ಕಾರ ಎಚ್ಚೆತ್ತು ನ್ಯಾಯಾಲಯದ ಆದೇಶಗಳನ್ನು ಜಾರಿಗೊಳಿಸಬೇಕು.ಇಲ್ಲವಾದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಬಿಜೆಪಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ.
ಜಾತಿ ನೋಡಿ, ಹಣ ನೋಡಿ,ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ ಇದು ಖಂಡನೀಯ ಎಂದು
ಮಹೇಶ್ ಚಂದ್ರ ಗುರು ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಸುದ್ದಿಗೋಷ್ಠಿಯಲ್ಲಿ ರೇವಣ್ಣ,ಜಯರಾಜ್ ಹೆಗಡೆ,ನಾಗೇಶ್,ಲೋಕೇಶ್,ಮೈಸೂರು ಬಸವಣ್ಣ,ಸತ್ಯನಾರಾಯಣ್ ಹಾಜರಿದ್ದರು.