ನಂದಿನಿ ಮನುಪ್ರಸಾದ್ ನಾಯಕ್
*ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ವತಿಯಿಂದ ಕೆ.ಎನ್.ರಾಜಣ್ಣ ರವರನ್ನು ಸಂಪುಟದಿಂದ ವಜಾ ಮಾಡಿರುವುದನ್ನು ಖಂಡಿಸಿ ಹೋರಾಟ ನಡೆಸುವುದಾಗಿ ಎಚ್ಚರಿಕೆ*
ಕೆ.ಎನ್.ರಾಜಣ್ಣ ರವರನ್ನು ಸಂಪುಟದಿಂದ ವಜಾ ಮಾಡಿರುವುದನ್ನು ಖಂಡಿಸಿ ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ನಾಯಕ ಜನಾಂಗದಿಂದ ಹೋರಾಟ ನಡೆಸುತ್ತೇವೆ ಎಂದು ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಎಚ್ಚರಿಕೆ ನೀಡಿತು
ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ದ್ಯಾವಪ್ಪ ನಾಯಕ ನಮ್ಮ ಸಮುದಾಯದ ಹಿರಿಯ ಹಾಗೂ ಪ್ರಭಾವಿ, ನೇರ-ನಡೆ-ನುಡಿ, ಸಹಕಾರಿ ಧುರಿಣ, ಶೋಷಿತ ಸಮುದಾಯದ ನಾಯಕರಾದ ಕೆ.ಎನ್.ರಾಜಣ್ಣ ರವರನ್ನು ಯಾವುದೇ ನೋಟಿಸ್ ನೀಡದೆ, ಕಾರಣ ಕೇಳದೆ, ಏಕಾಏಕಿ ಸಂಪುಟದಿಂದ ವಜಾ ಮಾಡಿರುವುದು ಬಹಳ ಖಂಡನೀಯ. ಇದು ಕೇವಲ ರಾಜಣ್ಣನವರಿಗೆ ಮಾಡಿದ ಅಪಮಾನವಲ್ಲ, ರಾಜ್ಯದ ಶೋಷಿತ ಸಮುದಾಯ ಮತ್ತು ನಾಯಕ ಸಮುದಾಯಕ್ಕೆ ಮಾಡಿದ ಅಪಮಾನ ಎಂದರೇ ತಪ್ಪಾಗಲಾರದು. ಇದೇ ರೀತಿ ರಾಜ್ಯದಲ್ಲಿ ನಾಯಕ ಸಮುದಾಯದ ಹಿರಿಯ ರಾಜಕಾರಣಿಗಳನ್ನು ರಾಜಕೀಯವಾಗಿ ಮುಗಿಸಬೇಕು ಎಂದು ಹುನ್ನಾರ ಮಾಡುತ್ತಾ, ಈ ಹಿಂದೆ ರಮೇಶ್ ಜಾರಕಿಹೊಳಿ ರವರು ಹಾಗೂ ಬಿ.ನಾಗೇಂದ್ರ ರವರನ್ನು ಕೂಡ ಸಂಪುಟದಿಂದ ತೆಗೆದು ನಾಯಕ ಸಮುದಾಯದ ರಾಜಕಾರಣಿಗಳಿಗೆ ಪದೇ-ಪದೇ ಘೋರ ಅನ್ಯಾಯವೆಸಗಿರುತ್ತಾರೆ. ಈಗಲಾದರೂ ವಾಲ್ಮೀಕಿ ನಾಯಕ ಸಮುದಾಯದವರು ಎಚ್ಚೆತ್ತುಕೊಂಡು ಪಕ್ಷತೀತವಾಗಿ ರಾಜಕೀಯವಾಗಿ, ಸಂಘಟಿತರಾಗದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ನಮ್ಮ ಸಮುದಾಯದ ರಾಜಕಾರಣಿಗಳನ್ನು ಬಲಿ ತೆಗೆದುಕೊಳ್ಳಬಹುದೆಂದು ಅನುಮಾನ ವ್ಯಕ್ತವಾಗುತ್ತದೆ.
ಆದ್ದರಿಂದ ವಾಲ್ಮೀಕಿ ಸಮುದಾಯ ಬಂಧುಗಳು, ಇಡೀ ರಾಜ್ಯದ, ಎಲ್ಲಾ ಜಿಲ್ಲೆ-ತಾಲ್ಲೂಕು ಕೇಂದ್ರಗಳಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳುವುದರ ಮೂಲಕ ನಮ್ಮ ಸಮುದಾಯದ ರಾಜಕೀಯ ಮುಖಂಡರುಗಳಿಗೆ ನೈತಿಕ ಶಕ್ತಿ ಮತ್ತು ಬೆಂಬಲವನ್ನು ನೀಡಬೇಕೆಂದು ಮನವಿ ಮಾಡಿದರು
ಸುದ್ದಿಗೋಷ್ಟಿಯಲ್ಲಿ ಸುರೇಶ್ ಕುಮಾರಬೀಡು
ಮಣಿನಾಯಕ ಇದ್ದರು.
ಪ್ರಭಾಕರ್ ಹುಣಸೂರು
ಕೆಂಪನಾಯಕ, ವಿನೋದ್ ನಾಗವಾಲ ಸೇರಿದಂತೆ ಹಲವರು ಉಪಸ್ಥಿತರಿದ್ದರು