ಮೈಸೂರು:24 ನವೆಂಬರ್ 2021
ನಂದಿನಿ ಮೈಸೂರು
ಡಿ 10 ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಮಂಜೇಗೌಡ ಸ್ಪರ್ಥಿಸುತ್ತಿದ್ದು ಚುನಾವಣೆಗೆ ನಾಮಪತ್ರ ಸಲ್ಲಿಸಿದರು.
ಮೈಸೂರಿನಲ್ಲಿರುವ ಶಾಸಕ ಸಾರಾ ಮಹೇಶ್ ರವರ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರಗೆ ಪಕ್ಷದ ನಾಯಕರು,ಮುಖಂಡರ ಜೊತೆ ಪಾದಯಾತ್ರೆ ನಡೆಸಿದ ಮಂಜೇಗೌಡ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ರವರಿಗೆ ನಾಮಪತ್ರ ಸಲ್ಲಿಸಿದರು.
ಶಾಸಕರಾದ ಸಾರಾ ಮಹೇಶ್,ಅಶ್ವೀನ್ ಕುಮಾರ್ ಸೇರಿದಂತೆ ಇತರರು ಮಂಜೇಗೌಡರ ನಾಮಪತ್ರಕ್ಕೆ ಸಾಥ್ ನೀಡಿದರು.