ಮೈಸೂರು:11 ಜೂನ್ 2022
ನಂದಿನಿ ಮೈಸೂರು
ದಕ್ಷಿಣ ಪದವೀಧರರ ಚುನಾವಣೆ -2022 ರ ಜನತಾದಳ ( ಜಾತ್ಯಾತೀತ ) ಅಭ್ಯರ್ಥಿ ಹೆಚ್.ಕೆ. ರಾಮುರವರಿಗೆ ಪ್ರಥಮ ಪ್ರಾಶಸ್ತ್ರದ ಮತವನ್ನು ನೀಡಿ ಜಯಶೀಲರನ್ನಾಗಿ ಮಾಡುವಂತೆ ಮೈಸೂರು ಜಿಲ್ಲಾ ಯುವ ಜನತಾದಳ ( ಜಾ ) ಮನವಿ ಮಾಡಿದೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಅಧ್ಯಕ್ಷ ಗಂಗಾಧರ ಗೌಡ
ಮಾತನಾಡಿ ಜೆಡಿಎಸ್ ಪಕ್ಷ ಹೆಚ್.ಕೆ.ರಾಮುರವರಿಗೆ ಟಿಕೇಟ್ ನೀಡಿ ಸ್ಪರ್ದೇಗಳಿಸಿದೆ.ಹೆಚ್.ಕೆ.ರಾಮುರವರು ಕಳೆದ 20 ವರ್ಷಗಳಿಂದ ಜನರ ಸೇವೆ ಮಾಡಿದ್ದಾರೆ.ಪ್ರಸ್ತುತ ದಿನಗಳಲ್ಲಿ ರಾಜ್ಯಕ್ಕೆ ಪ್ರಾದೇಶಿಕ ಪಕ್ಷದ ಸೇವೆಯು ಅತ್ಯಗತ್ಯವಾಗಿದ್ದು ಈ ನಿಟ್ಟಿನಲ್ಲಿ ಪದವೀಧರರು ತಮ್ಮ ಮೊದಲ ಪ್ರಾಶಸ್ತ್ಯ ಮತವನ್ನ ಜೆಡಿಎಸ್ ಅಭ್ಯರ್ಥಿ ಹೆಚ್.ಕೆ ರಾಮುರವರಿಗೆ ನೀಡುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ವಿನೋದ್ ನಾಗವಾಲ
ಯೋಗೇಶ್ ಪ್ರಸಾದ್,ರಮ್ಮನಹಳ್ಳಿ ಸೋಮಣ್ಣ,ಶಿವು ರಮ್ಮನಹಳ್ಳಿ ಭಾಗಿಯಾಗಿದ್ದರು.