ಉನ್ನತ ಶಿಕ್ಷಣ, ಜಾನಪದ ಕಲೆಯಿಂದ ಜೀವನ ಪಾವನ: ಡಾ: ಬಸವರಾಜು ಸಿ .ಜೆಟ್ಟಿಹುಂಡಿ

ನಂದಿನಿ ಮನುಪ್ರಸಾದ್ ನಾಯಕ್

ಬಡಗಲಹುಂಡಿಯಲ್ಲಿ ಕಲಾವಿದರು, ವಿದ್ಯಾರ್ಥಿಗಳಿಗೆ ಸನ್ಮಾನ
ಕಂಸಾಳೆ ಮಹದೇವಯ್ಯ ಅಭಿಮಾನಿ ಬಳಗದ 2ನೇ ವಾರ್ಷಿಕೋತ್ಸವ
ಉನ್ನತ ಶಿಕ್ಷಣ, ಜಾನಪದ ಕಲೆಯಿಂದ ಜೀವನ ಪಾವನ: ಡಾ: ಬಸವರಾಜು ಸಿ .ಜೆಟ್ಟಿಹುಂಡಿ
————————-
ಮೈಸೂರು: ಉನ್ನತ ಶಿಕ್ಷಣ ಹಾಗೂ ಜನಪದ ಕಲೆಗಳ ಅಧ್ಯಯನ ಹಾಗೂ ಜೀವನದಲ್ಲಿ ಅಳವಡಿಕೆಯಿಂದ ಸಂಸ್ಕಾರದ ಅನುಭವ ದೊರೆತು ಮನುಷ್ಯನ ಜೀವನವು ಪಾವನವಾಗುತ್ತದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ನಿಕಟಪೂರ್ವ ಸೆನೆಟ್ ಸದಸ್ಯರಾದ ಡಾ. ಬಸವರಾಜ್. ಸಿ.ಜೆಟ್ಟಿಹುಂಡಿ ಅವರು ಹೇಳಿದರು.
ಮೈಸೂರಿನ ಬನ್ನೂರು ರಸ್ತೆಯಲ್ಲಿರುವ ವರಕೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಗಲಹುಂಡಿ ಗ್ರಾಮದಲ್ಲಿನ ಮಹಾಕಾಳೇಶ್ವರಿ ಹಾಗೂ ಬೀರೇಶ್ವರ ದೇವಸ್ಥಾನ ಆವರಣದಲ್ಲಿ ಕಂಸಾಳೆ ರತ್ನ ಮಹದೇವಯ್ಯ, ಕುಮಾರಸ್ವಾಮಿ ಹಾಗೂ ಚಿಕ್ಕಮರಿಯಪ್ಪ ಜನಪದ ಕಂಸಾಳೆ ಅಭಿಮಾನಿ ಬಳಗದ 2ನೆ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ವರಕೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಿರಿಯ ಕಂಸಾಳೆ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಡಾ.ಬಸವರಾಜು.ಸಿ.ಜೆಟ್ಟಿ ಹುಂಡಿ ಅವರು, ನಮ್ಮ ಪೋಷಕರು ತಮ್ಮ ಆರೋಗ್ಯ ಸುಖ ಎಲ್ಲವನ್ನು ಬದಿಗೊತ್ತಿ ಮಕ್ಕಳ ಶಿಕ್ಷಣಕ್ಕಾಗಿ ಹಣವಹಿಸುತ್ತಾರೆ. ಅದನ್ನು ಅರಿತು ಮಕ್ಕಳು ಏಕಾಗ್ರತೆಯಿಂದ ಓದಿ ಶೈಕ್ಷಣಿಕ ಪ್ರಗತಿ ಸಾಧಿಸಿ ಸುಂದರ ಜೀವನ ರೂಪಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಅಧ್ಯಾಪಕರಾದ ಕೆ. ಎಸ್. ಬೋರಪ್ಪ ಅವರು ಮಾತನಾಡಿ, ಹಿರಿಯರು ತಮ್ಮ ದೈನಂದಿನ ಜೀವನ, ವ್ಯವಸಾಯ ಹಾಗೂ ಬದುಕಿನ ಜಂಜಾಟದ ನಡುವೆ ಪೌರಾಣಿಕ ನಾಟಕ ಹಾಗೂ ಜನಪದ ಕಂಸಾಳೆ ನೃತ್ಯ ಕಲೆಯನ್ನು ಶಿಸ್ತು ಬದ್ಧವಾಗಿ ಕಲಿತು ದೇಶ ,ವಿದೇಶಗಳಲ್ಲಿ ಪ್ರದರ್ಶಿಸಿ ಹೆಸರು ಮಾಡಿ ತಮ್ಮ ದೇಹ ಹಾಗೂ ಆರೋಗ್ಯವನ್ನು ಕಾಪಾಡಿಕೊಂಡಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಬಡಗಲಹುಂಡಿ ಗ್ರಾಮ ಹಾಗೂ ವರಕೋದು ವ್ಯಾಪ್ತಿ ಗ್ರಾಮಗಳ 10ನೇ ಹಾಗೂ 12ನೇ ತರಗತಿಯ ಸುಮಾರು ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹಾಗೂ ವರಕೋಡು ಗ್ರಾಮ ಗಡಿ ವ್ಯಾಪ್ತಿಯ ಕಂಸಾಳೆ ಕಲಾವಿದರಾದ ಮಾದಪ್ಪ, ದೊಡ್ಡಬಸಪ್ಪ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.
ವೇದಿಕೆ ಕಾರ್ಯಕ್ರಮದಲ್ಲಿ ರಮ್ಯ ತಂಡ ಪ್ರಾರ್ಥಿನೆ ,ಸಿದ್ದೇಶ್ ಸ್ವಾಗತ, ಡಾ. ಕುಮಾರ ನಿರೂಪಿಸಿ ಪ್ರೇಮ್ ಕುಮಾರ್ ವಂದಿಸಿದರು.
ಕಾರ್ಯಕ್ರಮದಲ್ಲಿ ಕಂಸಾಳೆ ರತ್ನ ಮಹದೇವಯ್ಯ ಅಭಿಮಾನಿ ಬಳಗದ ಅಧ್ಯಕ್ಷ ಶಿವನಂಜೇಗೌಡ, ಗೌರವಾಧ್ಯಕ್ಷ ಪ್ರೇಮ್ ಕುಮಾರ್, ಉಪಾಧ್ಯಕ್ಷೆ ಜಯಲಕ್ಷ್ಮಿ ,ಬಳಗದ ಸದಸ್ಯೆ ಸ್ಪೂರ್ತಿ , ಹಿರಿಯ ಕಲಾವಿದರಾದ ಕಂಸಾಳೆ ಮರಿಯಪ್ಪ , ವರಕೋಡು ಗ್ರಾಮ ಪಂಚಾಯತಿ ಅಧ್ಯಕ್ಷ ಶಿವಣ್ಣ , ಮಾಜಿ ಅಧ್ಯಕ್ಷ ಬೀರಪ್ಪ , ಸದಸ್ಯ ಪ್ರಭಾಕರ್, ವರಕೋಡು ಸಹಕಾರ ಸಂಘದ ನಿರ್ದೇಶಕ ಮೂಡಲಹುಂಡಿ ಪ್ರಭಾಕರ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಮರಿಗೌಡ, ಆದಾಯ ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ ಜವರೇಗೌಡ, ಗ್ರಾಮ ಮುಖಂಡ ದೇವರಾಜ್, ದೇವಾಲಯದ ಅರ್ಚಕರಾದ ಗುಡ್ಡಪ್ಪ ಶಿವು, ಗುಡ್ಡಪ್ಪ ಚಿಕ್ಕಣ್ಣ, ಬಡಗಲಹುಂಡಿ ಗ್ರಾಮಸ್ಥರು ಹಾಗೂ ವರಕೋಡು ಗಡಿಯ ಯಜಮಾನರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *