ಹುಣಸೂರು:19 ಜುಲೈ 2022
ನಂದಿನಿ ಮೈಸೂರು
ಕೊಲೆ ಪಾತಕಿಗಳ ಹೆಡೆಮುರಿ ಕಟ್ಟಿದ ಹುಣಸೂರು ಟೌನ್ ಪೊಲೀಸರು ”
ಕಳೆದ ಮಂಗಳವಾರ ದಿನಾಂಕಃ – 12-07-2022 ರಂದು ಹಾಡುಹಗಲೇ ನಡೆದಿದ್ದ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಹುಣಸೂರು ಟೌನ್ ಕೈಂಪೊಲೀಸರ ತಂಡ ಯಶಸ್ವಿಯಾಗಿದೆ .
ಇತ್ತೀಚೆಗೆ ಮದುವೆಯಾಗಿದ್ದ ತನ್ನ ಹೆಂಡತಿಯ ಬಗ್ಗೆ ಹುಣಸೂರು , ತಾ ಅಂಗಟಹಳ್ಳಿ ಗ್ರಾಮದ ಬೀರೇಶ ಎಂಬುವನು ತನ್ನ ಮೊಬೈಲ್ ಇನ್ಸಾಗ್ರಾಮ್ ನಲ್ಲಿ ಕೆಟ್ಟದಾಗಿ ಕಾಮೆಂಟ್ಸ್ ಮಾಡುತ್ತಿದ್ದನೆಂಬ ಕಾರಣಕ್ಕೆ ಈ ಹಿಂದೆ ಪಟ್ಟಣದ ಕುಟ್ಟಿ ಜಿಮ್ ನಲ್ಲಿ ಕೆಲಸ ಮಾಡುತ್ತಿದ್ದ ನಿತಿನ್ @ ವಠಾರ ಎಂಬುವನು ಕಳೆದ ಮಂಗಳವಾರ ದಿನಾಂಕಃ – 12-07-2022 ರಂದು ಮಧ್ಯಾಹ್ನ 2-00 ಗಂಟೆ ಸುಮಾರಿಗೆ ಹಿಂದಿನ ದಿನ ಕೊಲೆ ಮಾಡಲು ಒಳಸಂಚು ರೂಪಿಸಿದ್ದ ತನ್ನ ಸ್ನೇಹಿತ ಕಲ್ಕುಣಿಕೆ ಹೌಸಿಂಗ್ ಬೋರ್ಡ್ ವಾಸಿ ಮನೋಜ್ ಕುಮಾರ @ ಮೋಟು ಇಬ್ಬರು , ಇನ್ನೊಬ್ಬ ಸ್ನೇಹಿತ ಪೋತರಾಜ್ ಎಂಬುವನ ಹೋಂಡಾ ಆಕ್ಟಿವಾ ಮೋಟಾರ್ ಬೈಕಿನಲ್ಲಿ ಮಾತನಾಡಿಸುವ ನೆಪದಲ್ಲಿ ಬೀರೇಶನನ್ನು ದ್ವಿಚಕ್ರ ವಾಹನದ ಮಧ್ಯ ಕೂರಿಸಿಕೊಂಡು ಪಟ್ಟಣದ ಬಿ.ಎಂ ಬೈಪಾಸ್ ರಸ್ತೆಯಲ್ಲಿ ಹೋಗುವಾಗ ನಿತಿನ್ @ ವಠಾರ ಎಂಬುವನು ಬೀರೇಶನನ್ನು ಕೊಲೆ ಮಾಡುವ ಉದ್ದೇಶದಿಂದ ಹಾಡುಹಗಲೇ ಚಾಕುವಿನಿಂದ ಬೀರೇಶನ ಭುಜ , ಕುತ್ತಿಗೆಗೆ ಬಲವಾಗಿ ಚುಚ್ಚಿ ಗಾಯಗೊಳಿಸಿದ್ದು , ಈ ಸಂಬಂಧ ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನ ಪ್ರಕರಣ ದಾಖಲಾಗಿತ್ತು . ಚಾಕು ಇರಿತದಿಂದ ಗಾಯಗೊಂಡಿದ್ದ ಬೀರೇಶನನ್ನು ಹುಣಸೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ , ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಿದ್ದು , ಬೀರೇಶನು ಚಿಕಿತ್ಸೆ ಫಲಕಾರಿಯಾಗದೇ ಮರುದಿನ ಬೆಳಗಿನ ಜಾವ 03-00 ಗಂಟೆ ಸಮಯದಲ್ಲಿ ಅಸುನೀಗಿರುತ್ತಾನೆ . ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡ ಹುಣಸೂರು ಪಟ್ಟಣ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು . ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹುಣಸೂರು ಉಪ – ವಿಭಾಗದ ಡಿವೈಎಸ್ಪಿ ಶ್ರೀ ರವಿಪ್ರಸಾದ್ ರವರು ಹುಣಸೂರು ಪಟ್ಟಣ ಠಾಣೆಯ ಇನ್ಸೆಕ್ಟರ್ ಎಲ್.ಶ್ರೀನಿವಾಸ್ ರವರ ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ಪ್ರಭಾಕರ , ಇರ್ಫಾನ್ , ಎಎಸ್ಐ ಪುಟ್ಟನಾಯಕ , ರಾಜೇಗೌಡ ಮತ್ತು ಎಸ್.ಬಿ ಕರ್ತವ್ಯದ ಸಿಬ್ಬಂದಿ ಪ್ರಸಾದ್ ಧರ್ಮಾಪುರ ರವರುಗಳನ್ನೊಳಗೊಂಡ ಒಂದು ಅಪರಾಧ ಪತ್ತೆ ತಂಡವನ್ನು ನೇಮಿಸಿ , ಸೂಕ್ತ ಮಾರ್ಗದರ್ಶನ ಮಾಡಿ ಕಳುಹಿಸಿದ್ದು , ಈ ತಂಡವು ಆರೋಪಿಗಳಾದ 01 ) ನಿತಿನ್ @ ವಠಾರ ( 23 ವರ್ಷ ) , 02 ) ಮನೋಜ್ ಕುಮಾರ @ ಮೋಟು 24 ವರ್ಷ ) ಹಾಗೂ 03 ) ಪೋತರಾಜ್ ( 25 ವರ್ಷ ) – ಮೂವರು ಹುಣಸೂರು ಪಟ್ಟಣವಾಸಿಗಳು – ಇವರುಗಳನ್ನು ಬಂಧಿಸುವಲ್ಲಿ ಸಫಲವಾಗಿದೆ . ಅಪರಾಧ ತಂಡದ ಈ ಪತ್ತೆ ಕಾರ್ಯವನ್ನು ಶ್ರೀ ಚೇತನ್ , ಆರ್ , ಐಪಿಎಸ್ , ಮಾನ್ಯ ಪೊಲೀಸ್ ಅಧೀಕ್ಷಕರು , ಮೈಸೂರು ಜಿಲ್ಲೆ , ಮೈಸೂರು ಶ್ರೀಮತಿ ನಂದಿನಿ ಮೇಡಂ , ಮಾನ್ಯ ಅಪರ ಪೊಲೀಸ್ ಅಧೀಕ್ಷಕರು , ಮೈಸೂರು ಜಿಲ್ಲೆ , ಮೈಸೂರು ಮತ್ತು ಹುಣಸೂರಿನ ಜನತೆ ಶ್ಲಾಘಿಸಿರುತ್ತಾರೆ .