ನಂದಿನಿ ಮೈಸೂರು
ಕಡೇ ಕಾರ್ತಿಕ ಸೋಮವಾರದಂದು ಹಿನಕಲ್ ಕಲ್ಯಾಣಿ ಕೊಳದಲ್ಲಿ 9ನೇ ವರ್ಷದ ದೀಪೋತ್ಸವ ಕಾರ್ಯಕ್ರಮ ಕಣ್ಮನ ಸೆಳೆಯಿತು.
ಶ್ರೀ ನನ್ನೇಶ್ವರ ಸ್ವಾಮಿ ದೇವರ ಕಲ್ಯಾಣಿ (ಕೊಳ)ಯ ಮತ್ತು ಹಿನಕಲ್ ಗ್ರಾಮದ ಅಭಿವೃದ್ಧಿ ಸಮಿತಿ ವತಿಯಿಂದ
ಮೈಸೂರಿನ ಹಿನಕಲ್ ಕೊಳದಲ್ಲಿ ಹಮ್ಮಿಕೊಂಡಿದ್ದ ದೀಪೋತ್ಸವ ಕಾರ್ಯಕ್ರಮಕ್ಕೆ ಹೂಟಗಳ್ಳಿ ನಗರಸಭೆ ಪೌರಾಯುಕ್ತ ಬಿ.ಎನ್.ಚಂದ್ರಶೇಖರ್ ಕಲ್ಯಾಣಿ ಹಾಗೂ ಶಿವಲಿಂಗಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಸಾವಿರಾರು ಜನರು ಭಕ್ತಿ ಶ್ರದ್ದೆಯಿಂದ ಕೊಳದ ಸುತ್ತಲೂ ಮಣ್ಣಿನ ದೀಪ ಇಟ್ಟು ದೀಪ ಹಚ್ಚುವ ಮೂಲಕ ಇಷ್ಟಾರ್ಥ ಸಿದ್ಧಿಗಾಗಿ ದೇವರಲ್ಲಿ ಪ್ರಾರ್ಥಿಸಿದರು.ಭಾರತದ ಪ್ರಸಿದ್ದವಾದ 12 ಜ್ಯೋತಿರ್ಲಿಂಗ ಪವಿತ್ರ ಸ್ಥಳಗಳ ಚಿತ್ರಗಳನ್ನ ಕೊಳದ ಸುತ್ತಾ ಹಾಕಲಾಗಿತ್ತು.ನನ್ನೇಶ್ವರ ಸ್ವಾಮಿ ಉತ್ಸವ ಮೆರವಣಿಗೆ ನಡೆಸಲಾಯಿತು.
ಬಂದಂತಹ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಕಲಾವಿದರಾದ ಮಲ್ಲೇಶ್,ನಾಗೇಶ್ವರ,ಅಂಜಲಿ ಮತ್ತು ತಂಡದಿಂದ ಭಕ್ತಿಗೀತೆ ಕಾರ್ಯಕ್ರಮ, ಭರತನಾಟ್ಯ ಪ್ರದರ್ಶನ ಎಲ್ಲರ ಕಣ್ಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಸಮಿತಿಯ
ಗೌರವಾಧ್ಯಕ್ಷ ಲೋಹಿತ್ ಅರಸ್,ಅಧ್ಯಕ್ಷರಾದ ಹೆಚ್.ಸಿ ರಾಜು,ಹಿರಿಯ ಮುಖಂಡ ಎ.ಪಾಪಣ್ಣ,ಜಿ.ಪಂ.ಮಾಜಿ ಸದಸ್ಯ ರಾಕೇಶ್ ಪಾಪಣ್ಣ,ಸಮಿತಿ ಕಾರ್ಯಧ್ಯಕ್ಷ ಹೊನ್ನಪ್ಪ,ಕೆಂಪನಾಯಕ,ಉಪಾಧ್ಯಕ್ಷ ಈಶ್ವರಪ್ಪ,ವೆಂಕಟೇಶ್, ಜವರೇಗೌಡ,ಹಿನಕಲ್ ಪ್ರಕಾಶ್,ಪ್ರಧಾನ ಕಾರ್ಯದರ್ಶಿ ಕೇಬಲ್ ಪಾಪಣ್ಣ,ಖಜಾಂಚಿ ಹಿನಕಲ್ ಗಣೇಶ್,ಕೆ.ಜಿ.ನಾಗರಾಜ್,ಶ್ರೀನಿವಾಸ್,ಜೆ.ರಮೇಶ್,ಶಿವಕುಮಾರ್,ನಾಗನಹಳ್ಳಿ ರೇವಣ್ಣ,ನೇಹಾ, ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.