ನಂದಿನಿ ಮೈಸೂರು
ರಸ್ತೆ ಅಪಘಾತ,ಅಂಗಾಂಗ ದಾನ ಕುರಿತು ಅಪೋಲೋ ಬಿಜಿಎಸ್ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ಅಪೋಲೋ ಬಿಜಿಎಸ್ ಆಸ್ಪತ್ರೆಯಲ್ಲಿ ಕೆ.ಆರ್ .ಸಂಚಾರ ಪೋಲಿಸ್ ಠಾಣೆ ಇನ್ಸ್ಪೆಕ್ಟರ್ ಹೆಚ್.ಪಿ.ಶರತ್ ಕುಮಾರ್ ಅವರು ಯುವಕರಿಗೆ ಹೆಲ್ಮೇಟ್ ವಿತರಿಸುವ ಮೂಲಕ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರಿಗೆ ಹಾಗೂ ಅಂಗಾಂಗ ದಾನ ಮಾಡಿದವರಿಗೆ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.
ಅಪಘಾತವಾದ ವ್ಯಕ್ತಿ ಹೇಗೆಲ್ಲ ಅಂಗಾಂಗ ದಾನ ಮಾಡಬಹುದು ಎಂಬುದನ್ನ ವೈದ್ಯರು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ದ್ವಿಚಕ್ರ ವಾಹನ ಸವಾರರು ಸಂಚಾರಿ ನಿಯಮವನ್ನು ಪಾಲನೆ ಮಾಡಬೇಕು.ಕಡ್ಡಾಯವಾಗಿ ಐ ಎಸ್ ಐ ಮಾರ್ಕ್ ಉಳ್ಳ ಹೆಲ್ಮೇಟ್ ಧರಿಸಬೇಕು.ವೇಗವಾಗಿ ದ್ವಿಚಕ್ರ ವಾಹನ ಸವಾರಿ ಮಾಡಬಾರದು.ಆಫ್ ಹೆಲ್ಮೇಟ್ ಧರಿಸುವುದರಿಂದ ಅಪಘಾತವಾದಾಗ ಸಾವುನೋವು ಸಂಭವಿಸುತ್ತದೆ.ಆದ್ದರಿಂದ ಫುಲ್ ಹೆಲ್ಮೇಟ್ ಧರಿಸುವುದರಿಂದ ಜೀವ ಉಳಿಯಲಿದೆ. ಆಫ್ ಹೆಲ್ಮೇಟ್ ಮಾರಾಟ ಮಾಡುವುದು ಕಂಡು ಬಂದಲ್ಲಿ ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು.ಹೆಲ್ಮೇಟ್ ಮರೆತರೇ ಜೀವಕ್ಕೆ ಕುತ್ತು ವಾಹನ ಚಲಾಯಿಸುವಾಗ ಮರೆಯದೇ ಹೆಲ್ಮೇಟ್ ಧರಿಸಿ ಎಂದು ಶರತ್ ಕುಮಾರ್ ಯುವಕರಿಗೆ ಕಿವಿಮಾತು ಹೇಳಿದರು.
ಜಾಗೃತಿ ಕಾರ್ಯಕ್ರಮದಲ್ಲಿ ಕೆ.ಆರ್.ಸಂಚಾರಿ ಠಾಣೆ ಸಬ್ ಇನ್ಸ್ಪೆಕ್ಟರ್ ಮಹಾವೀರ್ ಬಿಳಗಿ ,ಅಪೋಲೋ ಬಿಜಿಎಸ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಅಮನ್ ನಾಯಕ್,ಡಾ.ರಾಜ್ ಕುಮಾರ್ ವಾದ್ವಾ,ಡಾ.ಅರುಣ್ ಶ್ರೀನಿವಾಸ್,ಡಾ.ಶ್ರೀನಿವಾಸ್ ನಲ್ಲೂರು,ಡಾ.ಜಯಂತ್ ರೆಡ್ಡಿ,ಡಾ.ಸಾಗರ್ ನಾರಾಯಣ್,ಡಾ.ಶಿವಕುಮಾರ್ ಬಿ ಬಸವರಡ್ಡರ್,ಎನ್.ಜಿ.ಭರತೀಶ ರೆಡ್ಡಿ ಹಾಗೂ ಆಸ್ಪತ್ರೆ ವೈದ್ಯರು,ಸಿಬ್ಬಂದಿಗಳು ಭಾಗಿಯಾಗಿದ್ದರು.