ಮಹಿಳೆಯರು ದೇಶದ ಪ್ರಗತಿಯ ಅಡಿಪಾಯ- ಎನ್.ಶ್ರೀನಿವಾಸನ್

ನಂದಿನಿ ಮನುಪ್ರಸಾದ್ ನಾಯಕ್

ಮಹಿಳೆಯರು ದೇಶದ ಪ್ರಗತಿಯ ಅಡಿಪಾಯ- ಎನ್.ಶ್ರೀನಿವಾಸನ್

ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ಮಹಿಳಾ ದಿನಾಚರಣೆ

ಮೈಸೂರು: ಮಹಿಳಾ ದಿನವು ಕೇವಲ ಒಂದು ದಿನದ ಆಚರಣೆಯಲ್ಲ, ಇದು ಮಹಿಳೆಯರ ಸಮಾನತೆ ಮತ್ತು ಗೌರವಕ್ಕಾಗಿ ಸಮಾಜ ಒಟ್ಟಾಗಿ ಕೆಲಸ ಮಾಡುವ ಸಂಕಲ್ಪದ ದಿನವಾಗಿದೆ ಎಂದು ವಿಜಯನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಬಣ್ಣಿಸಿದರು.

ಸ್ವಾತಿ ನಕ್ಷತ್ರ ದಿನವಾದ ಭಾನುವಾರದಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮೈಸೂರು ಮಹಿಳಾ ಸಂಘದ ಭಜನಾ ಮಂಡಳಿಯವರ ಆಶ್ರಯದಲ್ಲಿ ನಡೆದ ಸರಳ‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರು ದೇಶದ ಪ್ರಗತಿಯ ಅಡಿಪಾಯ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದ್ದಾರೆ ಎಂದ ಅವರು, ಲಿಂಗ ತಾರತಮ್ಯ ನಿರ್ಮೂಲನೆ, ಮಹಿಳಾ ದೌರ್ಜನ್ಯದ ವಿರುದ್ಧ ಹೋರಾಟ ಮತ್ತು ಸಮಾನ ಅವಕಾಶಗಳಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ‌ ಎಂದರು.
ಇಂತಹ ಕಾರ್ಯಕ್ರಮಗಳು ಮಹಿಳೆಯರಲ್ಲಿ ಆತವಿಶ್ವಾಸವನ್ನು ಹೆಚ್ಚಿಸಿ, ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ.ಭಾರತದ ನಾರಿ ಶಕ್ತಿಯ ಸಾಧನೆಗಳು ಹೆಮ್ಮೆಯ ಮೂಲವಾಗಿದೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಪರಿವರ್ತನಾಶೀಲ ಪಾತ್ರದ ಪ್ರಬಲ ಜ್ಞಾಪನೆಯಾಗಿದೆ ಎಂದು ಅವರು ಇದೇ ವೇಳೆ ವ್ಯಾಖ್ಯಾನಿಸಿದರು.
ಮಹಿಳೆಯರು ಸಶಕ್ತರಾದರೆ ಮಾತ್ರ ದೇಶ ಸಶಕ್ತವಾಗಲು ಸಾಧ್ಯ.ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುವ ಮಹಿಳೆಯರಿಗೆ ಧನ್ಯವಾದ ಹೇಳಲು ಇದು ಒಂದು ಉತ್ತಮ ಸಮಯ. ತಾಯಂದಿರು, ಸಹೋದರಿಯರು, ಪತ್ನಿಯರು, ಸಹೋದ್ಯೋಗಿಗಳು ಮತ್ತು ಸ್ನೇಹಿತರಾಗಿ, ಮಹಿಳೆಯರು ನಮ್ಮ ಜೀವನದಲ್ಲಿ ಬದಲಾವಣೆಯನ್ನು ತರುತ್ತಾರೆ. ಹೀಗಾಗಿ ಅಂತರರಾಷ್ಟ್ರೀಯ ಮಹಿಳಾ ದಿನವು ಅವರಿಗೆ ಧನ್ಯವಾದ ಹೇಳಲು ಉತ್ತಮ ಅವಕಾಶವಾಗಿದೆ ಎಂದು ಸಂತಸ ವ್ಯಕ್ತಡಿಸಿದರು.
ಇದೇ ವೇಳೆ ದೇವಾಯಲಕ್ಕೆ ಆಗಮಿಸಿದ್ದ ಎಲ್ಲಾ ಭಕ್ತಾದಿಗಳಿಗೂ ಸಂಸ್ಥಾಪಕರಾದ ನಾಡೋಜ ಪ್ರೊ.ಡಾ.ಭಾಷ್ಯಂ ಸ್ವಾಮೀಜಿಯವರ ನೇತೃತ್ವದಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್ ಸೇರಿದಂತೆ ನೂರಾರು ಭಕ್ತರು ಹಾಗೂ ಮಹಿಳೆಯರು ಶ್ರೀ ಸ್ವಾಮಿಯ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಿದರು. ಮಹಿಳೆಯರು ದೇಶದ ಪ್ರಗತಿಯ ಅಡಿಪಾಯ- ಎನ್.ಶ್ರೀನಿವಾಸನ್

ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ಮಹಿಳಾ ದಿನಾಚರಣೆ

ಮೈಸೂರು: ಮಹಿಳಾ ದಿನವು ಕೇವಲ ಒಂದು ದಿನದ ಆಚರಣೆಯಲ್ಲ, ಇದು ಮಹಿಳೆಯರ ಸಮಾನತೆ ಮತ್ತು ಗೌರವಕ್ಕಾಗಿ ಸಮಾಜ ಒಟ್ಟಾಗಿ ಕೆಲಸ ಮಾಡುವ ಸಂಕಲ್ಪದ ದಿನವಾಗಿದೆ ಎಂದು ವಿಜಯನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಬಣ್ಣಿಸಿದರು.

ಸ್ವಾತಿ ನಕ್ಷತ್ರ ದಿನವಾದ ಭಾನುವಾರದಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮೈಸೂರು ಮಹಿಳಾ ಸಂಘದ ಭಜನಾ ಮಂಡಳಿಯವರ ಆಶ್ರಯದಲ್ಲಿ ನಡೆದ ಸರಳ‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

  1. ಮಹಿಳೆಯರು ದೇಶದ ಪ್ರಗತಿಯ ಅಡಿಪಾಯ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದ್ದಾರೆ ಎಂದ ಅವರು, ಲಿಂಗ ತಾರತಮ್ಯ ನಿರ್ಮೂಲನೆ, ಮಹಿಳಾ ದೌರ್ಜನ್ಯದ ವಿರುದ್ಧ ಹೋರಾಟ ಮತ್ತು ಸಮಾನ ಅವಕಾಶಗಳಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ‌ ಎಂದರು.

ಇಂತಹ ಕಾರ್ಯಕ್ರಮಗಳು ಮಹಿಳೆಯರಲ್ಲಿ ಆತವಿಶ್ವಾಸವನ್ನು ಹೆಚ್ಚಿಸಿ, ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ.ಭಾರತದ ನಾರಿ ಶಕ್ತಿಯ ಸಾಧನೆಗಳು ಹೆಮ್ಮೆಯ ಮೂಲವಾಗಿದೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಪರಿವರ್ತನಾಶೀಲ ಪಾತ್ರದ ಪ್ರಬಲ ಜ್ಞಾಪನೆಯಾಗಿದೆ ಎಂದು ಅವರು ಇದೇ ವೇಳೆ ವ್ಯಾಖ್ಯಾನಿಸಿದರು.
ಮಹಿಳೆಯರು ಸಶಕ್ತರಾದರೆ ಮಾತ್ರ ದೇಶ ಸಶಕ್ತವಾಗಲು ಸಾಧ್ಯ.ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುವ ಮಹಿಳೆಯರಿಗೆ ಧನ್ಯವಾದ ಹೇಳಲು ಇದು ಒಂದು ಉತ್ತಮ ಸಮಯ. ತಾಯಂದಿರು, ಸಹೋದರಿಯರು, ಪತ್ನಿಯರು, ಸಹೋದ್ಯೋಗಿಗಳು ಮತ್ತು ಸ್ನೇಹಿತರಾಗಿ, ಮಹಿಳೆಯರು ನಮ್ಮ ಜೀವನದಲ್ಲಿ ಬದಲಾವಣೆಯನ್ನು ತರುತ್ತಾರೆ. ಹೀಗಾಗಿ ಅಂತರರಾಷ್ಟ್ರೀಯ ಮಹಿಳಾ ದಿನವು ಅವರಿಗೆ ಧನ್ಯವಾದ ಹೇಳಲು ಉತ್ತಮ ಅವಕಾಶವಾಗಿದೆ ಎಂದು ಸಂತಸ ವ್ಯಕ್ತಡಿಸಿದರು.

ಇದೇ ವೇಳೆ ದೇವಾಯಲಕ್ಕೆ ಆಗಮಿಸಿದ್ದ ಎಲ್ಲಾ ಭಕ್ತಾದಿಗಳಿಗೂ ಸಂಸ್ಥಾಪಕರಾದ ನಾಡೋಜ ಪ್ರೊ.ಡಾ.ಭಾಷ್ಯಂ ಸ್ವಾಮೀಜಿಯವರ ನೇತೃತ್ವದಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್ ಸೇರಿದಂತೆ ನೂರಾರು ಭಕ್ತರು ಹಾಗೂ ಮಹಿಳೆಯರು ಶ್ರೀ ಸ್ವಾಮಿಯ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಿದರು.

Leave a Reply

Your email address will not be published. Required fields are marked *