ನಂದಿನಿ ಮೈಸೂರು
ಷಷ್ಠಿ ಹಬ್ಬ ಹಾಗೂ ಸಿದ್ದಲಿಂಗಪುರ ಬಸವನ 1ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಯುವಶಕ್ತಿ ಪಡೆ ವತಿಯಿಂದ ಒಂದು ಹಳ್ಳಿ ಕಾರ್ ಒಂದು ಗೂಳಿ ಜೋಡಿ ಗಾಡಿ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು.
ಮೈಸೂರಿನ ಹೊರ ಹೊಲಯದಲ್ಲಿರುವ
ಸಿದ್ದಲಿಂಗಪುರದಲ್ಲಿ ಆಯೋಜಿಸಿದ ಸ್ಪರ್ಧೆಗೆ
ಗ್ರಾಮ ಪಂಚಾಯತಿ ಅಧ್ಯಕ್ಷ ಮಹದೇಶ್,
ಸದಸ್ಯ ಮಂಜುನಾಥ್ ಹಸಿರು ನಿಶಾನೆ ಮೂಲಕ ಚಾಲನೆ ನೀಡಿದರು.
ಕಳೆದ 5 ವರ್ಷಗಳಿಂದ ಸ್ಪರ್ದೇ ಆಯೋಜಿಸುತ್ತಾ ಬಂದಿದೆ.ಇಂದಿನಿಂದ ಮೂರು ದಿನಗಳ ಕಾಲ ಸ್ಪರ್ಧೆ ನಡೆಯಲಿದೆ.
ಒಂದು ಹಳ್ಳಿ ಕಾರ್ ಒಂದು ಗೂಳಿ ಜೋಡಿ ಗಾಡಿ ಓಟದ ಸ್ಪರ್ಧೆ,ಹಾಲು ಹಲ್ಲು ಮತ್ತು 2 ಹಲ್ಲು ಕರು ಜೋಡಿ ,ಚಕ್ಕಡಿ ಗಾಡಿ ಓಟದ ಸ್ಪರ್ಧೆ ಜರುಗಲಿದೆ.ಸ್ಪರ್ಧೆಯಲ್ಲಿ ಮೈಸೂರು, ಮಂಡ್ಯ,ರಾಮನಗರ ಸೇರಿದಂತೆ ಜಿಲ್ಲೆಯಿಂದ ಸುಮಾರು 50 ಜೋಡಿ ಭಾಗಿಯಾಗಿವೆ.ಸ್ಪರ್ಥೆಯಲ್ಲಿ ಜಯಗಳಿಸಿದ ಜೋಡಿಗಳಿಗೆ
ಪ್ರಥಮ ಬಹುಮಾನ – 50,000/-, ಎರಡನೇ ಬಹುಮಾನ – 30,000/-,
ಮೂರನೇ ಬಹುಮಾನ – 20,000/-,
ನಾಲ್ಕನೇ ಬಹುಮಾನ 10,000/- ಬಹುಮಾನದ ಜೊತೆಗೆ ಆಕರ್ಷಕ ಟ್ರೋಫಿ ಅತ್ಯುತ್ತಮ ಜಾಕಿ : ಆಕರ್ಷಕ ಟ್ರೋಪಿ ನೀಡಲಾಗುವುದು.
ಸ್ಪರ್ಥೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪಶು ಚಿಕಿತ್ಸೆ ಹಾಗೂ ಬಿಗಿ ಪೋಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಯುವಶಕ್ತಿ ಪಡೆ ಅಧ್ಯಕ್ಷ ಕಾರ್ತೀಕ್,
ಗ್ರಾಮ ಪಂಚಾಯತಿ ಸದಸ್ಯರಾದ ಶಿವು,
ಬಿಜೆಪಿ ಮುಖಂಡ ವಿವೇಕ್ ,
ಉಪಾಧ್ಯಕ್ಷ ಮಧು,ಅಭಿಲಾಶ್,ಕಿರಣ್,ಸುನೀಲ್,ವರುಣ್,ದರ್ಶನ್,ಗಗನ್ ಸೇರಿದಂತೆ ಅಕ್ಕ ಪಕ್ಕದ ಗ್ರಾಮದ ರೈತರು,ಯುವಕರು ನೂರಾರು ಜನ ಭಾಗಿಯಾಗಿದ್ದರು