ಮೈಸೂರು:18 ಮೇ 2022
ನಂದಿನಿ ಮೈಸೂರು
ಹಳ್ಳಿ ಹಕ್ಕಿ ಹೆಚ್.ವಿಶ್ವನಾಥ್ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಅಂಚೆ ಪತ್ರ ಚಳುವಳಿ ನಡೆಯಿತು.
ಮೈಸೂರು ಮಹಾ ನಗರ ಪಾಲಿಕೆ ಮುಂಭಾಗ ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾನ ಸಮಿತಿಯ ಅಧ್ಯಕ್ಷ ಜಾಕೀರ್ ಹುಸೇನ್ ಮುಖ್ಯಮಂತ್ರಿಗಳಿಗೆ ಅಂಚೆ ಪತ್ರದ ಮೂಲಕ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ
ನಂತರ ಮಾತನಾಡಿದ ಅವರು ಅಡಗೂರು ಎಚ್ ವಿಶ್ವನಾಥ್ ರವರು ರಾಜಕೀಯದಲ್ಲಿ ಹಿರಿಯರಾಗಿದ್ದಾರೆ.ತಮ್ಮ ಅಧಿಕಾರದ ಅವಧಿಯಲ್ಲಿ ಹಲವಾರು ಶಾಶ್ವತ ಜನಪರ ಯೋಜನೆಗಳನ್ನು ನೀಡಿದ್ದಾರೆ.ಸದಾ ಸಮಾಜದ ಒಳಿತಿಗಾಗಿ ಚಿಂತಿಸುವ ಮುತ್ಸದ್ದಿ ವಿಶ್ವನಾಥ್ ರವರಿಗೆ ಈ ಬಾರಿ ಸಚಿವ ಸಂಪುಟದಲ್ಲಿ ಮುಂತ್ರಿ ಸ್ಥಾನ ನೀಡುವ ರಾಜ್ಯ ಬಿಜೆಪಿ ಸರ್ಕಾರ ವಿಶ್ವನಾಥ್ ಗೆ ಕೃತಜ್ಞತೆ ಸಲ್ಲಿಸಿದಂತಾಗುತ್ತದೆ ಎಂದರು.
ಕರ್ನಾಟಕ ನಾಯಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ದ್ಯಾವಪ್ಪನಾಯಕ,ದಮಾಜ ಜಾಗೃತ ವೇದಿಕೆ ಅಧ್ಯಕ್ಷ ಬೀರಪ್ಪ,ಶಿವಪ್ಪ,ಪ್ರಶಾಂತ್ ಆರ್ಯ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.