ನಂದಿನಿ ಮೈಸೂರು.
ಡಿ.ಸಿ.ಎಕ್ಸ್ ಸಿಸ್ಟಮ್ಸ್ ಲಿಮಿಟೆಡ್
ಉದ್ಯಮಿ ಡಾ. ಹೆಚ್ ಎಸ್
ರಾಘವೇಂದ್ರರಾವ್ ಅವರು ನಂಜನಗೂಡು ತಾಲೂಕು ಹೊಸಕೋಟೆ ಗ್ರಾಮದಲ್ಲಿ
ಪರಮಪೂಜ್ಯ ಜಗದ್ಗುರುಗಳಿಗೆ ಪಾದ ಪೂಜೆ ಗುರುವಂದನಾ ಕಾರ್ಯಕ್ರಮ ಆಯೋಜಿಸಿದ್ದರು.
ಮಂತ್ರಾಲಯದ ಪೀಠಾಧಿಕಾರಿ ಸುಬುಧೇಂದ್ರ ತೀರ್ಥರು ಹಾಗೂ ಸುತ್ತೂರು ಶ್ರೀಗಳಿಗೆ
ಪಾದ ಪೂಜೆ , ಕನಕಾಭಿಷೇಕ ,ಪುಷ್ಪಾಭಿಷೇಕ ನೆರವೇರಿಸಿದರು. ಸುಬುಧೇಂದ್ರ ತೀರ್ಥರ ಅಮೃತ ಹಸ್ತದಿಂದ ಶ್ರೀ ಮೂಲ ರಾಮ ದೇವರ ಪೂಜೆ ಮಾಡಿದರು. ಖಾಸಗೀ ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತರಿಗೆ ಇಬ್ಬರು ಸ್ವಾಮೀಜಿಗಳು ಆಶಿರ್ವಚನ ನೀಡಿದರು.ನೆರದಿದ್ದ ಭಕ್ತರಿಗೆ ತೀರ್ಥ ಪ್ರಸಾದ,ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು
ಮಂತ್ರಾಲಯಕ್ಕೂ ನಂಜನಗೂಡಿಗೂ ಒಂದು ಅವಿನಾಭಾವ ಸಂಬಂಧವಿದ್ದು
ಮಂತ್ರಾಲಯದ ಶ್ರೀಗಳ ಕುರಿತಂತೆ ಮೆಚ್ಚುಗೆಯ ಮಾತುಗಳನ್ನಾಡಿದರು,ರಾಘವೇಂದ್ರ ರಾವ್ ಅವರ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಕಾರ್ಯಕ್ರಮ ಕುರಿತಂತೆ ಹಿತ ನುಡಿಗಳನ್ನು ಹೇಳಿದರು.
ಸತ್ಯ ಧರ್ಮಗಳಿಗೆ ನಾವು ಹೆಚ್ಚಿನ ಮಹತ್ವವನ್ನು ನೀಡಬೇಕು ಸತ್ಯ ಧರ್ಮಗಳೆ ವ್ಯಕ್ತಿಯನ್ನು ಅತ್ಯಂತ ಎತ್ತರಕ್ಕೆ
ಕೊಂಡೊಯುತ್ತದೆ ಧರ್ಮವನ್ನು ಗಟ್ಟಿಗೊಳಿಸಬೇಕು. ದೇಶ ಭಕ್ತಿಯನ್ನು ಬೆಳೆಸಬೇಕು
ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದವರಿಗೆ
ಹಾಗೂ ಎಲ್ಲರನ್ನೂ ಪೋಷಿಸಿ
ಮೇಲೆ ತರುವ ಪ್ರಯತ್ನ ಮಾಡಬೇಕಾಗಿದೆ.ದೇವಸ್ಥಾನದ ಲಡ್ಡು ಪ್ರಸಾದ ವಿಚಾರವಾಗಿವೂ ಮಾತನಾಡಿ ನಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಇಂದು ಶ್ಯಾಮರಾಯರ ಕುಟುಂಬ ರಾಘವೇಂದ್ರ ಅವರು ಗುರುವಂದನಾ ಕಾರ್ಯಕ್ರಮ ಕ್ಕೆ ಆಹ್ವಾನಿಸಿದ್ದರು ನಾವು ಸಂತೋಷದಿಂದ ಭಾಗವಹಿಸಿದ್ದೇವೆ.ರಾಯರ ಜನ್ಮದಿನ ಹಾಗೂ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಸುತ್ತೂರು ಶ್ರೀಗಳನ್ನು ಆಹ್ವಾನಿಸಿದ್ದೇವೆ.7 ದಿನ ಕಾರ್ಯ ನಡೆಯಲಿದ್ದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಪೂಜಾರಾಧನೆ,ವೇದಿಕೆ ಕಾರ್ಯಕ್ರಮ, ಸಮಾಜಕ್ಕಾಗಿ ಜೀವನ ಮುಡಿಪಿಟ್ಟಿರುವ ದೇಶ ವಿದೇಶದ ಸಾಧಕರಿಗೆ ಸನ್ಮಾನ ಜರುಗಲಿದೆ ಎಂದು ಮಾಹಿತಿ ನೀಡಿದರು.
ಉದ್ಯಮಿ ಡಾಕ್ಟರ್ ಹೆಚ್ ಎಸ್
ರಾಘವೇಂದ್ರರಾವ್ ಅವರು ಮಾತನಾಡಿ ಪಂಚಮಿ ಶುಭ ದಿನದಂದು ಉಭಯ ಜಗದ್ಗುರುಗಳಾದ ಪರಮಪೂಜ್ಯ ಜಗದ್ಗುರು ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳವರ ಪೀಠಾಧಿಪತಿಗಳಾದ ಶ್ರೀ ಸುಬುಧೇoದ್ರ ತೀರ್ಥ ಶ್ರೀ ಪಾದಂಗಳವರು ಹಾಗೂ ಸುತ್ತೂರು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿ ರವರುಗಳಿಗೆ ಗುರುವಂದನಾ ಕಾರ್ಯಕ್ರಮ ಆಯೋಜಿಸಿದ್ದೇವು.ಇದು ನಮ್ಮ ತಂದೆಯವರ ಕನಸಾಗಿತ್ತು.
ಮಂತ್ರಾಲಯದ ಸ್ವಾಮಿಗಳು ಹಾಗೂ ಸುತ್ತೂರು ಶ್ರೀಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಧನ್ಯವಾದ ತಿಳಿಸುತ್ತೇನೆ.ಸಮಾಜಕ್ಕೆ ಹಾಗೂ ಹೊಸಕೋಟೆ ಗ್ರಾಮಕ್ಕೆ ಒಳ್ಳೇಯದಾಗಲಿ ದೇಶ ಅಭಿವೃದ್ಧಿ ಆಗಲಿ ಎಂದು ಈ ಪೂಜೆ ಆಯೋಜಿಸಿದ್ದೇವು ಎಂದು ಹರ್ಷ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ವಿಶ್ವವಾಣಿ ದಿನಪತ್ರಿಕೆ
ಪತ್ರಿಕಾ ಸಂಪಾದಕರಾದ ವಿಶ್ವೇಶ್ವರ ಭಟ್. ಸೇರಿದಂತೆ
ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.