ಗಣಪತಿಗಳನ್ನು ಕೂರಿಸಲು ಸಿಂಗಲ್ ವಿಂಡೋ ಅನುಮತಿಗೆ ಅವಕಾಶ ಕಲ್ಪಿಸುವಂತೆ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಮಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಚ್‍ ಜಿ ಗಿರಿಧರ್

ನಂದಿನಿ ಮೈಸೂರು

ಸಾರ್ವಜನಿಕವಾಗಿ
ಗಣಪತಿ ಕೂರಿಸಲು ಅನುಮತಿಗಾಗಿ ಏಕ ಗವಕ್ಷ ತೆರೆಯುವ ಬಗ್ಗೆ.

ಗಣಪತಿಗಳನ್ನು ಕೂರಿಸಲು ಸಿಂಗಲ್ ವಿಂಡೋ ಅನುಮತಿಗೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಮಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಚ್‍ ಜಿ ಗಿರಿಧರ್

ಮೈಸೂರು: ಸಿದ್ದಾರ್ಥ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಅಪರಾ ಜಿಲ್ಲಾಧಿಕಾರಿ ಪಿ ಶಿವರಾಜು ರವರಿಗೆ
ಗಣಪತಿಗಳನ್ನು ಕೂರಿಸಲು ಸಿಂಗಲ್ ವಿಂಡೋ ಪರ್ಮಿಷನ್ ಗೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಎಚ್‌ಜಿ ಗಿರಿಧರ್ ನೇತೃತ್ವದಲ್ಲಿ ಮನವಿ ಸಲ್ಲಿಸಿದರು
ಮನವಿ ಪತ್ರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕವಾಗಿ ಅನೇಕ ಸಂಘ ಸಂಸ್ಥೆಗಳು ಮತ್ತು ಯುವಕರು ರಸ್ತೆ ಬದಿಯಲ್ಲಿ ಹಾಗೂ ಪಾರ್ಕ್ ಗಳಲ್ಲಿ ಮತ್ತು ಅವರ ಏರಿಯಾಗಳಲ್ಲಿ ಸಾಮೂಹಿಕವಾಗಿ ಕೂರಿಸುವ ಗಣಪತಿಗಳನ್ನು ಸಲೀಸಾಗಿ ಕೂರಿಸುವ ರೀತಿಯಲ್ಲಿ ಎಲ್ಲಾ ಅನುಮತಿ ಗಳನ್ನು ಒಂದೇ ಕಡೆ ನೀಡಬೇಕು, ಕಾರ್ಪೊರೇಷನ್, ಕೆಇಬಿ, ಕೆಎಸ್ಆರ್ಟಿಸಿ ಮತ್ತು ಪೊಲೀಸ್ ಹಾಗೂ ಅಗ್ನಿಶಾಮಕ ದಳ ಈ ಎಲ್ಲವೂ ಒಂದೇ ಕಡೆ ಅರ್ಜಿಗಳನ್ನು ತೆಗೆದುಕೊಂಡು 24 ಗಂಟೆಗಳಲ್ಲಿ ಪರಿಶೀಲಿಸಿ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಿ ಸರಳವಾಗಿ ಅನುಮತಿ ಸಿಗುವ ರೀತಿಯಲ್ಲಿ ಮಾಡಿಕೊಡಿ ಮತ್ತು ಸಣ್ಣ ಸಣ್ಣ ಮಕ್ಕಳು ತೋರಿಸುವ ಗಣಪತಿ ಗಳಿಗೆ ಅನುಮತಿ ಅಗತ್ಯವಿಲ್ಲವೆಂದು ಘೋಷಿಸಬೇಕಾಗಿ ವಿನಂತಿ ಮತ್ತು ಈಗಿನ ಮಕ್ಕಳೇ ಮುಂದಿನ ಪ್ರಜೆಗಳು ಈ ಸಾಮೂಹಿಕವಾಗಿ ಕೂರಿಸುವ ಗಣಪತಿಗಳನ್ನ ಮುಂದಿನ ಪೀಳಿಗೆಗೆ ಕೊಂಡುಯುವುದಕ್ಕೆ ಸಹಕರಿಸಬೇಕೆಂದು ಮನವಿ ಪತ್ರಯಲ್ಲಿ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ

ಇದೇ ಸಂದರ್ಭದಲ್ಲಿ ಬಿಜೆಪಿ ನಗರ ಉಪಾಧ್ಯಕ್ಷರಾದ ಎಸ್ ಕೆ ದಿನೇಶ್, ಜೋಗಿ ಮಂಜು, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ರಾಕೇಶ್ ಗೌಡ, ಎನ್ ಆರ್ ಕ್ಷೇತ್ರದ ಅಧ್ಯಕ್ಷರಾದ ಸ್ಮಾರ್ಟ್ ಮಂಜು, ಎನ್ ಆರ್ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ನವೀನ್ ರಾಜ್, ಹಾಗೂ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *