ನಂದಿನಿ ಮೈಸೂರು
ಉಚಿತ ಸ್ತನ ಕ್ಯಾನ್ಸರ್ ಹಾಗೂ ಸರ್ವೈವಲ್ ಕ್ಯಾನ್ಸರ್ ತಪಾಸಣೆ
ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ( ರಿ ) ತಾಲೂಕು ಘಟಕ ಮೈಸೂರು ವತಿಯಿಂದ ಮಹಿಳೆಯರಿಗೆ ಉಚಿತವಾಗಿ ಆರೋಗ್ಯ ತಪಾಸಣೆಯನ್ನು ನಾರಾಯಣ ಕ್ಲಿನಿಕ್ ಸೆಂಟರ್ ವಿಜಯನಗರ ಎರಡನೇ ಹಂತ ಇಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿ ಸ್ಕ್ರೀನಿಂಗ್ ಮಾಡಿಸಿ ವೈದ್ಯರ ಸಮಾಲೋಚನೆ ಮಾಡಿಕೊಟ್ಟರು ಡಾಕ್ಟರ್ ವಿದ್ಯಾ ರೇಡಿಯೇಷನ್ ಅಂಕಾಲಜಿಸ್ಟ್ ಡಾಕ್ಟರ್ ಅದ್ನನ್ ಸರ್ಜಿಕಲ್ ಅಂಕಾಲಜಿಸ್ಟ್ ಡಾಕ್ಟರ್ ನಿಶ್ಚಯ್ ಮೆಡಿಕಲ್ ಅಂಕಾಲಜಿಸ್ಟ್ ಇವರುಗಳ ಸಹಕಾರದಿಂದ ಇಂದು ನಾರಾಯಣ ಕ್ಲಿನಿಕ್ ನಲ್ಲಿ ಉಚಿತವಾಗಿ ಶಾಲಾ ಶಿಕ್ಷಕಿಯರಿಗೆ ಸ್ತನ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿ ಟೆಸ್ಟ್ ಹಾಗೂ ಸ್ಕ್ರೀನಿಂಗ್ ಮಾಡಿಸಿ ವೈದ್ಯರ ಸಮಾಲೋಚನೆಯನ್ನು ಮಾಡಿಕೊಟ್ಟರು ಇದೆಲ್ಲದರ ವ್ಯವಸ್ಥೆಯನ್ನು ನಾರಾಯಣ ಕ್ಲಿನಿಕ್ ಸೆಂಟರ್ನ ಮಿಥುನ್ ರವರು ಮಾಡಿಕೊಟ್ಟರು ಇದರ ಉಪಯೋಗವನ್ನು ಐವತ್ತು ಮಹಿಳಾ ಶಿಕ್ಷಕಿಯರು ಪಡೆದುಕೊಂಡರು.