ರಾಕೇಶ್ ಸಿದ್ದರಾಮಯ್ಯ ಹುಟ್ಟು ಹಬ್ಬ ಶ್ರೀನಿವಾಸ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಿಂದ ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರ

ನಂದಿನಿ ಮೈಸೂರು

ಶ್ರೀನಿವಾಸ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಪುತ್ರ
ದಿ| ರಾಕೇಶ್ ಸಿದ್ದರಾಮಯ್ಯ ಜನ್ಮದಿನದ ಹಿನ್ನೆಲೆ ಶ್ರೀನಿವಾಸ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಮೈಸೂರಿನ ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ಮೈಸೂರಿನ ಪುರಭವನದ ರಾಕೇಶ್ ಸಿದ್ದರಾಮಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಕೇಕ್ ಕತ್ತರಿಸಿ ಸಿಹಿ ಹಂಚಿ, ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿ, ಔಷಧಿಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಹುಟ್ಟು ಹಬ್ಬ ಆಚರಿಸಲಾಯಿತು.

ಕರ್ನಾಟಕ ಪ್ರದೇಶ ಕುರುಬ ಸಂಘದ ನಿಕಟ ಪೂರ್ವ ರಾಜ್ಯಾಧ್ಯಕ್ಷ ಬಿ ಸುಬ್ರಮಣ್ಯ ಮಾತನಾಡಿ ರಾಕೇಶ್ ಸಿದ್ದರಾಮಯ್ಯ ಅವರ ಅಗಲಿಕೆ ನೋವನ್ನು ಉಂಟುಮಾಡುತ್ತಾ ಬಂದಿದೆ.ಜೀವಂತವಾಗಿದ್ದರೇ ಇಂದಿಗೆ 47 ವರ್ಷ ತುಂಬಿರುತ್ತಿತ್ತು.
ನಮ್ಮೆಲ್ಲರ ಅಚ್ಚು ಮೆಚ್ಚಿನ ನಾಯಕರಾಗಿದ್ದರು.ಹತ್ತಿರದ ಒಡನಾಡಿಯಾಗಿದ್ದವರು.ಅವರು ಬದುಕಿದ್ದಿದ್ದರೇ ಇಂದು 2018,2023 ರಲ್ಲ ಮೈಸೂರಿನಲ್ಲಿ 2 ಬಾರಿ ಶಾಸಕರಾಗಿ ನಮ್ಮ ಜೊತೆ ಇರಬೇಕಾಗಿತ್ತು.ಈ ಕ್ಯಾಬಿನೆಟ್ ನಲ್ಲಿ ಸಚಿವರಾಗಿಯೂ ಇರುತ್ತಿದ್ದರು ಎಂಬ ಭಾವನೆ ಆಗಿತ್ತು ಅದರಲ್ಲಿ ಎರಡು ಮಾತಿಲ್ಲ.ಭಗವಂತ ಅವರನ್ನ ಬಹಳ ಬೇಗ ಕರೆದುಕೊಂಡುಬಿಟ್ಟ.
ಇಂದು ಅವರ ಹುಟ್ಟು ಹಬ್ಬ ಹಿನ್ನೆಲೆ
ಗಂದನಳ್ಳಿ ವೆಂಕಟೇಶ್ ಅವರ ಮಾಲೀಕತ್ವದ
ಶ್ರೀನಿವಾಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಡೆಂಗ್ಯೂ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮೂಲಕ ಅವರನ್ನ ಕಾಣ ಬಯಸುತ್ತಿದ್ದೇವೆ.ಹೆಚ್ಚಿನ ಚಿಕಿತ್ಸೆಗೂ ಕೂಡ ವೆಂಕಟೇಶ್ ಅವರು ಅನುಕೂಲ ಮಾಡಿಕೊಡುತ್ತಿರುವುದು ಸಂತಸದ ವಿಷಯ ಅವರಿಗೆ ಧನ್ಯವಾದ ತಿಳಿಸಲು ಬಯಸುತ್ತೇನೆ ಎಂದರು.

ಶ್ರೀನಿವಾಸ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಗಂಧನಹಳ್ಳಿ ವೆಂಕಟೇಶ್ ಮಾತನಾಡಿ ರಾಕೇಶ್ ಸಿದ್ದರಾಮಯ್ಯ ಜನ್ಮದಿನದ ಅಂಗವಾಗಿ ಶ್ರೀನಿವಾಸ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಿಂದ ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿದ್ದೇವೆ.ದೇಹದ ಯಾವುದೇ ಸಮಸ್ಯೆ ಇದ್ದಲ್ಲಿ ಪರೀಕ್ಷೇ ಮಾಡಿ ಔಷಧಿ ಕೂಡ ನೀಡುತ್ತಿದ್ದೇವೆ.ಪೌರಕಾರ್ಮಿಕರೆಲ್ಲಾ ಶಿಬಿರಕ್ಕೆ ಆಗಮಿಸಿ ಪ್ರಯೋಜನ ಪಡೆದುಕೊಂಡಿದ್ದಾರೆ. ಬದುಕಿದ್ದಾಗ ನಾವೆಲ್ಲ ಅವರ ನೆರಳಲ್ಲೇ ಬೆಳೆದವರು ಅವರು ಬಡವರಿಗೆ ಸಹಾಯ ಮಾಡುತ್ತಿದ್ದಿದ್ದು ನಮಗೆಲ್ಲ ಸ್ಪೂರ್ತಿ , ಹೀಗಾಗಿ ಅವರ ಹೆಸರಿನಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಮುಂದಿನ ದಿನಗಳಲ್ಲಿಯೂ ಸಮಾಜಪರ ಕೆಲಸಗಳನ್ನು ಮಾಡುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಬೀರಿಹುಂಡಿ ಬಸವಣ್ಣ, ನಜರಬಾದ್ ನಟರಾಜ್, ಸುರೇಶ್, ಹರೀಶ್ ಮೊಗಣ್ಣ, ಪೈಲ್ವಾನ್ ಬೀರೇಶ್, ಕಾಂಜಿಗೌಡ, ಜೆಟ್ಟಿ ಹುಂಡಿ ಬಸವರಾಜು, ಮಾದೇಶ್, ಆರಿಫ್ ಪಾಷಾ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು,ರಾಕೇಶ್ ಸಿದ್ದರಾಮಯ್ಯ ಅವರ ಅಭಿಕಾನಿಗಳು,ಸ್ನೇಹಿತರು ಭಾಗಿಯಾಗಿದ್ದರು.

ಕಾಂಗ್ರೆಸ್ ಮುಖಂಡ ಗಂಧನಹಳ್ಳಿ ವೆಂಕಟೇಶ್ ಮಾಲೀಕತ್ವದ ಶ್ರೀನಿವಾಸ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಈ ಕೆಳಗಿನ ವಿಳಾಸದಲ್ಲಿದೆ. ನಂ-4646, 1ನೇ ಕ್ರಾಸ್, ಶಿವಾಜಿ ರಸ್ತೆ, ಎನ್.ಆರ್.ಮೊಹಲ್ಲಾ ಮೈಸೂರು

Leave a Reply

Your email address will not be published. Required fields are marked *