ಮಲ್ಕುಂಡಿ:- ಖಾಸಾಗಿ ಪೈನಾನ್ಸ್ ಸಾಲಕ್ಕಾಗಿ ವ್ಯಕ್ತಿಯೊಬ್ಬರು ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲ್ಲೂಕಿನ ಮಲ್ಕುಂಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕೃಷ್ಣಮೂರ್ತಿ (32) ಎಂಬಾತನ್ನೇ ಪೈನಾನ್ಸ್ ಸಾಲಕ್ಕೆ ಹೆದರಿ ಮೃತಪಟ್ಟ ದುರ್ದೈವಿ.
ಈತ ಧರ್ಮಸ್ಥಳ ಶ್ರೀ ಶಕ್ತಿ ಸಂಘ, ಗ್ರಾಮೀಣ ಸಂಘ, ಬಿ ಎಸ್ ಎಸ್, ಐ ಡಿ ಎಫ್ ಸಿ, ಉಜ್ಜಿವನ್ ಸಂಘ ಗಳಲ್ಲಿ ಸಾಲ ಪಡೆದಿದ್ದು ಸಾಲವನ್ನು ವಾರಕ್ಕೊಮ್ಮೆ 15 ದಿನಕ್ಕೊಮ್ಮೆ ತಿಂಗಳಿಗೊಮ್ಮೆ ಹಣ ಕಟ್ಟುತ್ತಿದ್ದು ಸೋಮವಾರ ಬೆಳ್ಳಗೆ ಧರ್ಮಸ್ಥಳ ಶ್ರೀ ಶಕ್ತಿ ಸಂಘಕ್ಕೆ ಹಣ ಕಟ್ಟಬೇಕಿದ್ದು ಅದರೆ ಹಣ ಸಂಘದವರು ದಿನನಿತ್ಯ ಹಣ ಕಟ್ಟಲು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ ದಿನನಿತ್ಯ ಸೆಂರ್ಟಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು ಕೊಲಿ ಮಾಡಿ ತಂದ ಹಣ ಜೀವನಕ್ಕೆ ಹೋಗುತ್ತಿದ್ದು ಪೈನಾನ್ಸ್ ಅವರ ಕಿರುಕುಳ ತಳಲಾರದೆ ಮನೆಯಲ್ಲಿದ ಓಡವೆ ಹಾಗೂ ಬೈಕ್ ನ್ನು ಗಿರವಿಟ್ಟು ಹಣ ಕಟ್ಟಲಾಗಿತ್ತು ಅದರೆ ಸೋಮವಾರ ಬೆಳ್ಳಗೆ 8 ಗಂಟೆ ಸಮಯದಲ್ಲಿ ಹಣ ಕಟ್ಟಲು ಹಣ ಎಲ್ಲೂ ಸಿಗದೆ ಮನನೊಂದು ತನ್ನ ಮನೆಯಲ್ಲಿ ನೆಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಈ ಪ್ರಕರಣ ಹುಲ್ಲಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಶವವನ್ನು ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣ್ಣೋತರ ಪರೀಕ್ಷೆ ನಡೆಸಿ ರವಾನಿಸಲಾಯಿತ್ತು.
ತಕ್ಷಣ ವಿಷಯ ತಿಳಿದ ತಾಲ್ಲೂಕು ದಸಂಸ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಸಾರ್ವಜನಿಕ ಆಸ್ಪತ್ರೆ ಮುಂಭಾಗ ಮೃತದೇಹವನ್ನಿಟ್ಟು ಖಾಸಾಗಿ ಪೈನಾನ್ಸ್ ಗಳ ವಿರುದ್ಧ ಪ್ರತಿಭಟನೆ ಮಾಡಿದರು.ತಕ್ಷಣದಲ್ಲೇ ಖಾಸಾಗಿ ಪೈನಾನ್ಸ್ ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಸ್ಥಳಕ್ಕೆ ಶಾಸಕ ದರ್ಶನ್ ಧ್ರುವನಾರಾಯಣ್ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.