ರೋಟರಿ ಮೈಸೂರು ಸೌತ್ ಈಸ್ಟ್ ಸಂಸ್ಥೆವತಿಯಿಂದ ಇಂಜಿನಿಯರ್ಸ್ ದಿನ ಆಚರಣೆ

ನಂದಿನಿ ಮನುಪ್ರಸಾದ್ ನಾಯಕ್

 

ರೋಟರಿ ಮೈಸೂರು ಸೌತ್ ಈಸ್ಟ್ ಸಂಸ್ಥೆವತಿಯಿಂದ ಇಂಜಿನಿಯರ್ಸ್ ದಿನವನ್ನೂ ಆಚರಿಸಲಾಯೀತು.

ಈ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯರಾದ ಡಾ.ಈ.ಸಿ.ನಿಂಗರಾಜ್ ಗೌಡ ರವರು ಮಾತನಾಡಿ ಪ್ರತಿ ವರ್ಷ ಸೆಪ್ಟೆಂಬರ್ 15ರಂದು ಭಾರತದಲ್ಲಿ “ಇಂಜಿನಿಯರ್ಸ್ ದಿನ” (Engineers’ Day)ವನ್ನು ಆಚರಿಸಲಾಗುತ್ತೀದೆ. ಈ ದಿನವನ್ನು ಭಾರತದ ಪ್ರಮುಖ ಇಂಜಿನಿಯರ್ ಹಾಗೂ ದಕ್ಷಿಣ ಭಾರತದ ಮಹಾನ್ ತಂತ್ರಜ್ಞ, ರಾಷ್ಟ್ರ ನಿರ್ಮಾತೃ, ಭಾರತ ರತ್ನ ಪುರಸ್ಕೃತ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನು ಸ್ಮರಿಸಿಕೊಂಡು ಆಚರಿಸಲಾಗುತ್ತೀದೆ. 1861ರ ಸೆಪ್ಟೆಂಬರ್ 15ರಂದು ಜನಿಸಿದ ವಿಶ್ವೇಶ್ವರಯ್ಯರವರು ತಮ್ಮ ತಾಂತ್ರಿಕ ಸಾಮರ್ಥ್ಯ, ದೂರದೃಷ್ಟಿ, ಮತ್ತು ರಾಷ್ಟ್ರ ಸೇವೆಯಿಂದ “ಭಾರತದ ಇಂಜಿನಿಯರಿಂಗ್ ಕ್ಷೇತ್ರದ ದಿಗ್ಗಜ”ರೆಂದು ಖ್ಯಾತಿ ಪಡೆದಿದ್ದರು.

ವಿಶ್ವೇಶ್ವರಯ್ಯ ಅವರು ಮೈಸೂರು ರಾಜ್ಯದಲ್ಲಿ ಆಧುನಿಕ ನೀರಾವರಿ ವ್ಯವಸ್ಥೆಗಳನ್ನು ಪರಿಚಯಿಸಿ ಕೃಷಿ ಕ್ಷೇತ್ರದಲ್ಲಿ ಕ್ರಾಂತಿ ತಂದರು. ಕೃಷ್ಣರಾಜ ಸಾಗರ (KRS) ಅಣೆಕಟ್ಟು ಅವರ ಯೋಜನೆಯ ಮೇರು ಸಾಧನೆಗಳಲ್ಲಿ ಒಂದಾಗಿದೆ. ಇದು ಆ ಕಾಲದಲ್ಲಿ ಏಷ್ಯಾದ ಅತಿದೊಡ್ಡ ಜಲಾಶಯವಾಗಿತ್ತು. ಹೈದರಾಬಾದ್ ಪ್ರವಾಹ ನಿಯಂತ್ರಣ ಯೋಜನೆ ಮೂಲಕ ಸಾವಿರಾರು ಜನರ ಪ್ರಾಣಗಳನ್ನು ರಕ್ಷಿಸಿಸಲೂ ನೆರವಾಗಿದ್ದರು.

 

ಮೈಸೂರು ಮಹಾರಾಜರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಓಡೆಯರ್ ಆಡಳಿತದ ಅವಧಿಯಲ್ಲಿ ದಿವಾನರಾಗಿದ್ದ ವಿಶ್ವೇಶ್ವರಯ್ಯ ಅವರು ಮೈಸೂರು ರಾಜ್ಯವನ್ನು “ಆಧುನಿಕ ಮೈಸೂರು” ಎಂದು ಕೊಂಡಾಡುವಂತಾಗಲು ಅವರು ಕೈಗೊಂಡ ಕೈಗಾರಿಕಾ, ಶಿಕ್ಷಣ ಮತ್ತು ಇಂಜಿನಿಯರಿಂಗ್ ಸುಧಾರಣೆಗಳು ಕಾರಣವಾಗಿದ್ದವು. ಅವರಿಗೆ 1955ರಲ್ಲಿ ಭಾರತದ ಅತಿ ದೊಡ್ಡ ನಾಗರೀಕ ಗೌರವ “ಭಾರತ ರತ್ನ” ನೀಡಲಾಯಿತು.

ಇಂಜಿನಿಯರ್ಸ್ ದಿನವು ತಂತ್ರಜ್ಞಾನ, ವಿಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ನೀಡಿದ ಮಹತ್ವದ ಕೊಡುಗೆಗಳನ್ನು ನೆನಪಿಸುವ ದಿನವಾಗಿದೆ. ಸಮಾಜದ ಪ್ರಗತಿ, ಕೈಗಾರಿಕಾ ಅಭಿವೃದ್ಧಿ, ಸಾರಿಗೆ, ಸಂಪರ್ಕ, ಮಾಹಿತಿ ತಂತ್ರಜ್ಞಾನ, ಹಾಗೂ ವೈದ್ಯಕೀಯ ಕ್ಷೇತ್ರದ ಬೆಳವಣಿಗೆಯಲ್ಲಿ ಇಂಜಿನಿಯರಿಂಗ್ ಅಸಾಧ್ಯ ಸಾಧನೆಗಳನ್ನು ಸಾಧ್ಯಮಾಡಿದೆ. ಇಂಜಿನಿಯರ್‌ಗಳು ತಮ್ಮ ಜ್ಞಾನ ಮತ್ತು ಪ್ರತಿಭೆಯಿಂದ ರಾಷ್ಟ್ರದ ಅಭಿವೃದ್ಧಿ ಮತ್ತು ಜನಜೀವನ ಸುಧಾರಣೆಗೆ ಅನಿವಾರ್ಯರಾಗಿದ್ದಾರೆ. ಯುವ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಕ್ಷೇತ್ರದ ಮಹತ್ವವನ್ನು ಪರಿಚಯಿಸಿ, ರಾಷ್ಟ್ರ ಸೇವೆಗೆ ಅವರ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲಾಗುತ್ತದೆ.

ಇಂಜಿನಿಯರ್ಸ್ ದಿನವು ಕೇವಲ ಸರ್ ಎಂ. ವಿಶ್ವೇಶ್ವರಯ್ಯರನ್ನು ಸ್ಮರಿಸುವುದಲ್ಲ, ಪ್ರತಿಯೊಬ್ಬ ಇಂಜಿನಿಯರ್ ತಮ್ಮ ಜ್ಞಾನ, ಶ್ರಮ, ಮತ್ತು ಹೊಸ ಆವಿಷ್ಕಾರಗಳ ಮೂಲಕ “ಆಧುನಿಕ ಭಾರತದ ನಿರ್ಮಾಣದಲ್ಲಿ” ವಹಿಸಿರುವ ಪಾತ್ರವನ್ನು ಗುರುತಿಸುವ ದಿನವಾಗಿದೆ. ಇದು ಯುವಜನತೆಯನ್ನು ತಾಂತ್ರಿಕ ಕ್ಷೇತ್ರದಲ್ಲಿ ಸೃಜನಾತ್ಮಕ ಚಿಂತನೆ ಹಾಗೂ ರಾಷ್ಟ್ರಾಭಿವೃದ್ಧಿಗೆ ಪ್ರೇರೇಪಿಸುತ್ತದೆ ಎಂದು ಡಾ.ಈ.ಸಿ.ನಿಂಗರಾಜ್ ಗೌಡ ಮಾತನಾಡುತ್ತಾ ತಿಳಿಸಿದರು.

ಈ ಸಂಧರ್ಭದಲ್ಲಿ ಕ್ಲಬ್ ನ ಸದಸ್ಯರಾಗಿರುವ ಹಾಗೂ ವೃತ್ತಿಯಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ರೋಟರಿ ಸದಸ್ಯರನ್ನೂ ಗೌರವಿಸಲಾಯಿತು.

ಕ್ಲಬ್ ನ ಅಧ್ಯಕ್ಷರಾದ ರೋ.ಮುರಳೀಧರ್ ವೈ. ವಿ, ಇವರು ಕಾರ್ಯಕ್ರಮದ ಕುರಿತು ಮಾತನಾಡಿ , ಸಮಾಜಕ್ಕೆ ಇಂಜಿನಿಯರುಗಳ ಕೊಡುಗೆ ಹಾಗೂ ದೇಶವನ್ನು ಭದ್ರವಾಗಿ ಕಟ್ಟುವಲ್ಲಿ ಅವರ ಮಹತ್ವದ ಪಾತ್ರವನ್ನು ಸ್ಮರಿಸಿದರು.

ಇಂಜಿನಿಯರ್ಸ್ ದಿನದ ಅಂಗವಾಗಿ ಸನ್ಮಾನ ಸ್ವೀಕರಸಿ ಮಾತನಾಡಿದ ವಿದ್ಯಾವರ್ಧಕ ಇಂಜನೀಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥರಾದ ಪ್ರೊ.ಎಸ್.ಕೆ.ಪ್ರಸಾದ್ ರವರು “ವಿಕಸಿತ ಭಾರತ-2047” ಇದು ಸಾಕಾರಗೊಳ್ಳಲೂ ಇಂಜನೀಯರ್ ಗಳ ಸೇವೆಯ ಕುರಿತು ಪ್ರಾತ್ಯಕ್ಷತೆ ಮೂಲಕ ಉಪನ್ಯಾಸ ನೀಡಿ,
ಸರ್ ಎಂ. ವಿಶ್ವೇಶ್ವರಯ್ಯ ಅವರನ್ನು “ಭಾರತದ ಆಧುನಿಕ ಇಂಜಿನಿಯರಿಂಗ್ ಕ್ಷೇತ್ರದ ಶಿಲ್ಪಿ” ಎಂದು ಕರೆಯಲಾಗುತ್ತೀದೆ. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಪದವಿ ಪಡೆದ ನಂತರ ಪುಣೆಯ ಎಂಜಿನಿಯರಿಂಗ್ ಕಾಲೇಜಿನಲ್ಲಿ (College of Engineering, Pune) ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ಕೃಷ್ಣರಾಜ ಸಾಗರ (KRS) ಅಣೆಕಟ್ಟು ನಿರ್ಮಾಣಕ್ಕೆ ಕಾರಣಭೂತರಾದರು.

ಮೈಸೂರನ್ನು “ಮಾಡರ್ನ್ ಮೈಸೂರು” ಎಂದು ಕರೆಯುವಂತಾಗಲು ಅವರು ಆಧುನಿಕ ಕೈಗಾರಿಕಾ ಸಂಸ್ಥೆಗಳು, ಬ್ಯಾಂಕುಗಳು, ವಿದ್ಯುತ್ ಘಟಕಗಳು ಸ್ಥಾಪಿಸಿದರು. ಮೈಸೂರು ಸಿಲ್ಕ್ ಇಂಡಸ್ಟ್ರಿ, ಮೈಸೂರು ಐರನ್ ಅಂಡ್ ಸ್ಟೀಲ್ ಪ್ಲಾಂಟ್ (ಈಗ ಭದ್ರಾವತಿ ಐರನ್ ಅಂಡ್ ಸ್ಟೀಲ್), ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮುಂತಾದವುಗಳಿಗೆ ಅವರ ಪ್ರೇರಣೆ ಕಾರಣವಾಗಿದೆ. ಮೈಸೂರು
ದಿವಾನರಾಗಿದ್ದ ಸಮಯದಲ್ಲಿ ವಿದ್ಯುತ್, ಸಾರಿಗೆ, ಶಿಕ್ಷಣ, ಕೈಗಾರಿಕೆ, ಕೃಷಿ ಇವೆಲ್ಲ ಕ್ಷೇತ್ರಗಳಲ್ಲಿ ಮಹತ್ವದ ಸುಧಾರಣೆಗಳನ್ನು ತಂದರು ಎಂದರು.

1915ರಲ್ಲಿ “ಸರ್” ಬಿರುದು ದೊರೆತಿತ್ತು. (Knight Commander of the Order of the Indian Empire – KCIE). ಜಗತ್ತಿನ ಹಲವು ದೇಶಗಳಿಂದ ಗೌರವ ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದರು. ಶಿಸ್ತು, ಸಮಯಪಾಲನೆ, ನೈತಿಕತೆ, ಪರಿಶ್ರಮ ಇವರ ಜೀವನದ ಮೂಲ ಮಂತ್ರವಾಗಿತ್ತು. ದೇಶ ಸೇವೆಗಾಗಿ ಜೀವನವಿಡೀ ದುಡಿದ ಕಾರಣ ಜನರು ಅವರನ್ನು “ಮೇಕರ್ ಆಫ್ ಮೋಡರ್ನ್ ಮೈಸೂರು” ಎಂದೂ ಕರೆದರು.

ಸರ್ ಎಂ. ವಿಶ್ವೇಶ್ವರಯ್ಯ ಅವರ
“ಸ್ವಾವಲಂಬನೆ ಮತ್ತು ಪರಿಶ್ರಮವೇ ಯಶಸ್ಸಿನ ಮೂಲ” ಸಂದೇಶವಾಗಿದೆ.

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ ವಿಕಸಿತ ಭಾರತ -2047 ಆಗಲೂ ದೇಶದ ಎಲ್ಲಾ ಇಂಜನೀಯರ್ ಗಳು ವಿಶ್ವೇಶ್ವರಯ್ಯರವರಂತೆ ಶ್ರಮಿಸಬೇಕು. ಮೈಸೂರು ಮತ್ತೊಮ್ಮೆ ಸ್ವಚ್ಪನಗರಿಯಾಗಲೂ ಎಲ್ಲಾ ಇಂಜನೀಯರ್ಸ್ ಕೊಡುಗೆ ನೀಡಬೇಕೇಂದರು. ಭಾರತವೂ ಇತ್ತೀಚಿನ ವರ್ಷಗಳಲ್ಲಿ ವಿಶ್ವದಲ್ಲಿಯೇ ಎಲ್ಲಾ ಕ್ಷೇತ್ರದಲ್ಲೂ ಪ್ರಗತಿ ಕಾಣುತ್ತೀದೆ.. ಹಾಗಾಗಿ ಎಲ್ಲಾ ಇಂಜನೀಯರ್ ಗಳು ಅದಕ್ಕೆ ತಮ್ಮ ಕೊಡುಗೆಯನ್ನೂ ನೀಡಿದಾಗ ಮಾತ್ರ ಇಂಜನೀಯರ್ಸ್ ದಿನದ ಆಚರಣೆಯೂ ಸಾರ್ಥಕವಾಗುತ್ತದೆ ಎಂದು ಪ್ರೊ.ಎಸ್.ಕೆ.ಪ್ರಸಾದ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಕ್ಲಬ್ ನ ಅಧ್ಯಕ್ಷರಾದ ರೋ ಮುರಳೀಧರ ವೈ ವಿ. ಕಾರ್ಯದರ್ಶಿ ರೋ ಸುರೇಶ್, ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯರಾದ ಡಾ.ಈ.ಸಿ. ನಿಂಗರಾಜ್ ಗೌಡ , ರೋ ವೆಂಕಟೇಶ ಬಿ. ಆರ್ ರವರು ವೇದಿಕೆಯಲ್ಲಿದ್ದರು.

ಸಮಾರಂಭದಲ್ಲಿ ಕ್ಲಬ್ ಮಾಜಿ ಅದ್ಯಕ್ಷರಾದ ಎಂ.ರಾಜೀವ್, ಎಂ.ಮೋಹನ್, ಮುರಳಿ, ವಾಸುದೇವನ್, ರವೀಂದ್ರ, ರಮೇಶ್ ರಾವ್, ಇಂಜನೀಯರುಗಳಾದ ಸಿ.ರಾಘವೇಂದ್ರ, ಮಂಜುನಾಥ್, ಜೆ.ಎ.ಕುಮಾರ್, ನಂದೀಶ್, ಗಿರೀಶ್, ಜಯಪ್ರಕಾಶ್, ನಾಗರಾಜು, ಡಾ.ಸಂತೋಷ್ ವಿ.ಆರ್, ಜಿ.ವಿ. ಪಿಂಟೋ, ಎಮ್.ಆರ್. ಸಾಲಿಯಾನ್, ಎಮ್.ಆರ್. ರಮೇಶ್ ಬಾಬು, ಎಮ್.ವಿ.ನಂದಕುಮಾರ್ ಮತ್ತು ಕ್ಲಬಿನ ಸದಸ್ಯರೆಲ್ಲರೂ ಭಾಗವಹಿಸಿದ್ದರು.

Leave a Reply

Your email address will not be published. Required fields are marked *