ನಂದಿನಿ ಮೈಸೂರು
ದಿ-ಮೈಸೂರು ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ ಮಂಡಳಿ ಚುನಾವಣೆ ಫಲಿತಾಂಶ.
7 ಹಾಲಿ, 6 ಮಂದಿ ಹೊಸಬರ ಆಯ್ಕೆ.
ಹಾಲಿ ಅಧ್ಯಕ್ಷೆ ಪಿ ರಾಜೇಶ್ವರಿ ನಾಲ್ಕನೇ ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಮೈಸೂರು: ನಗರದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕ್‌ನ ಐದು ವರ್ಷಗಳ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕೆ.ಉಮಾಶಂಕರ್ ಬಣ ಮೇಲುಗೈ ಸಾಧಿಸಿದ್ದರೆ, ಎಸ್‌ಬಿಎಂ ಮಂಜು ಮುಖಭಂಗವಾಗಿದೆ.
ಹಲವು ವರ್ಷ ಗಳಿಗಿಂತ ಈ ಬಾರಿ ತೀವ್ರ ಪೈಪೋಟಿ, ಜಿದ್ದಾಜಿದ್ದಿಯಿಂದ ನಡೆದಿದ್ದ ಚುನಾವಣೆಯಲ್ಲಿ ತನ್ನ ತಂಡದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿ ಕೊಳ್ಳುವಲ್ಲಿ ಸಫಲವಾದ ಕೆ.ಉಮಾಶಂಕರ್ ಸೋಲು ಅನುಭವಿಸಿದ್ದಾರೆ.
ಎಸ್‌ಬಿಎಂ ಮಂಜು ಅವರು ಗೆಲುವಿನ ನಗೆ ಬೀರಿದರೂ ತಮ್ಮ ತಂಡವನ್ನು ಗೆಲ್ಲಿಸಿಕೊಳ್ಳಲು ಸಫಲವಾಗಿಲ್ಲ. ಹಾಲಿ ಅಧ್ಯಕ್ಷೆ ಪಿ.ರಾಜೇಶ್ವರಿ, ಮಾಜಿ ಅಧ್ಯಕ್ಷ ಎಸ್.ಬಿ.ಎಂ ಮಂಜು, ಮಾಜಿ ಉಪಾಧ್ಯಕ್ಷ ಪಡುವಾರಹಳ್ಳಿ ಎಂ.ರಾಮಕೃಷ್ಣ – ಜೆ. ಯೋಗೇಶ್, ಎನ್.ಯೋಗಾನಂದ, ಜಿ.ನಿ. ರಂಜನ್, ಎಚ್.ಹರೀಶ್ ಕುಮಾರ್, ಆರ್. ರವಿ ಕುಮಾರ್, ಆರ್.ಸೋಮಣ್ಣ, ಕೆ.ಗಿರೀಶ್, ಸಿ.ಚಂದ್ರಶೇಖರ, ಎಂ.ಪ್ರಮೀಳ ಗೆಲುವು ಸಾಧಿ ಸಿ ದ್ದಾರೆ. ಹಿಂದುಳಿದ ವರ್ಗ (ಬಿ) ವರ್ಗದಿಂದ ಟಿ.ರವಿ ಅವಿರೋಧವಾಗಿ ಆಯ್ಕೆಯಾಗಿದ್ದರು.
ನಗರದ ಗಾಂಧಿವೃತ್ತದಲ್ಲಿರುವ ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕ್‌ನ 2025-2030ರ ಐದು ವರ್ಷಗಳ ಅವಧಿಗೆ ಜ.19ರಂದು ಚುನಾವಣೆ ನಡೆದಿತ್ತು. 13 ಮಂದಿ ನಿರ್ದೇಶಕರ ಸ್ಥಾನಗಳಲ್ಲಿ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದರಿಂದ ಉಳಿದ 12 ಸ್ಥಾನಗಳಿಗೆ ಮತದಾನ ನಡೆಯಿತು.
ನ್ಯಾಯಾಲಯದಲ್ಲಿ ಹಕ್ಕು ಚಲಾವಣೆಗೆ ಅವಕಾಶ ತಂದಿದ್ದ ಸದಸ್ಯರ ಮತಗಳನ್ನು ಪರಿಗಣಿಸುವ ತೀರ್ಪು ಕಾಯ್ದಿರಿಸಿ ನ್ಯಾಯಾಲಯ ಮತದಾನಕ್ಕೆ ಅವಕಾಶ ನೀಡಿತ್ತು. ನಂತರ, ಎಣಿಕೆ ಪ್ರಕ್ರಿಯೆಗೆ ಹಸಿರು ನಿಶಾನೆ ತೋರಿದ್ದರಿಂದ ಶನಿವಾರ ಮತ ಎಣಿಕೆ ನಡೆಯಿತು. ಪ್ರಾರಂಭದಿಂದಲೂ ಕೆ. ಉಮಾಶಂಕರ್ ಮತ್ತು ಎಸ್ ಬಿಎಂ ಬಣದ
ನಡುವೆ ತೀವ್ರ ಪೈಪೋಟಿ ಉಂಟಾಗಿತ್ತು. ಅಂತಿಮ ಸುತ್ತಿನ ಎಣಿಕೆ ಮುಗಿದಾಗ ಕೆ. ಉಮಾಶಂಕರ್ ಬಣದ ಅಭ್ಯರ್ಥಿಗಳು ಮೇಲುಗೈ ಸಾಧಿಸಿದರೆ, ಎಸ್‌ಬಿಎಂ ಮಂಜು, ಬಣ ಕಡಿಮೆ ಸ್ಥಾನ ಗಳಿಸಿತು. ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಗಳಲ್ಲಿ ಐವರು ಗೆಲುವು ಸಾಧಿಸಿ ಎರಡೂ ಬಣದವರಿಗೂ ಠಕ್ಕರ್ ಕೊಟ್ಟಿದ್ದಾರೆ.