ನಂದಿನಿ ಮೈಸೂರು
*ನಟ ಡಾ.ಶಿವರಾಜ್ ಕುಮಾರ್ ರವರು ಬೇಗ ಗುಣಮುಖರಾಗಲೆಂದು ವಿಶೇಷ ಪೂಜೆ ಮತ್ತು ಪ್ರಾರ್ಥನೆ ದಲ್ಲಿಸಿದ ಕನ್ನಡಾಂಬೆ ರಕ್ಷಣಾ ವೇದಿಕೆ*
ಕನ್ನಡ ಚಿತ್ರರಂಗದ ಜನಪ್ರಿಯ ನಟ ಶಿವರಾಜ್ ಕುಮಾರ್ ಅವರು ಅನಾರೋಗ್ಯದ ಕಾರಣದಿಂದ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದಾರೆ. ಅವರು ಬೇಗ ಗುಣಮುಖರಾಗಲೆಂದು ಮೈಸೂರಿನ ಆಗ್ರಹಾರದ ಗಣಪತಿ ದೇವಸ್ಥಾನದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆಯು ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿತು
ಇದೆ ಸಂಧರ್ಭದಲ್ಲಿ ಮಾತನಾಡಿದ ಕನ್ನಡಾಂಬೆ ರಕ್ಷಣಾವೇದಿಕೆ ರಾಜ್ಯಾಧ್ಯಕ್ಷ ರಾಜಶೇಖರ್ ಮಾತನಾಡಿ ಶಿವಣ್ಣ ಬೇಗ ಗುಣಮುಖರಾಗಿ ಬಂದು ಕನ್ನಡ ಚಿತ್ರರಂಗದ ಸಿನಿಪ್ರಿಯರಿಗೆ ಸಾಕಷ್ಟು ಇನ್ನು ಹೆಚ್ಚಿನ ಸಿನಿಮಾಗಳನ್ನು ಮಾಡಿ, ಅಭಿಮಾನಿಗಳ ಆರಾಧ್ಯದೈವವಾಗಿ ಕನ್ನಡ ಚಿತ್ರರಂಗದ ಕಲಾವಿದರಿಗೆ ಬೆನ್ನೆಲುಬಾಗಿ ನಿಲ್ಲಬೇಕೆಂದು ಆರೈಸಿದರು
ಇದೆ ಸಂಧರ್ಭದಲ್ಲಿ ಮಂಜುಳ, ಹೊನ್ನೆಗೌಡ, ಹರೀಶ್ , ಸಂತೋಷ್ , ರವಿ ಕೆ.ಆರ್.ಎಸ್, ಮೋಹನ್ , ಅನುರಾಜ್ , ರಮೇಶ್ , ರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.