ನಂದಿನಿ ಮನುಪ್ರಸಾದ್ ನಾಯಕ್
ಪ್ರಿಯ ಕಾಂಗ್ರೆಸ್ಸಿಗರೇ,
ನಮಗೆ ಬೇಕಿರುವುದು
ಬಾಬಾ ಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಬರೆದ ಸಂವಿಧಾನ ಪ್ರಸ್ತಾವನೆಯೇ
ಹೊರತು, ಇಂದಿರಾ ಗಾಂಧಿ ತಿರುಚಿದ
ಸಂವಿಧಾನ ಪ್ರಸ್ತಾವನೆ ಅಲ್ಲ.
ಕಾಂಬುಜೀ, ಎಬುಜೀ,
ಮತ್ತದರ ತಳಿಗಳೇ,
ಮೊದಲು ಬಾಬಾ ಸಾಹೇಬರ ಪ್ರಸ್ತಾವನೆ ಒಪ್ಪಿಕೊಳ್ಳಿ
ಅದರ ಬಗ್ಗೆ ನಿಮಗೆ ತಕರಾರು ಏಕೆ ?
ಸಮಾಜವಾದ, ಜಾತ್ಯತೀತ ವಾದ- ಎರಡೂ
ಸಂವಿಧಾನ ಶಿಲ್ಪಿ
ಬಾಬಾ ಸಾಹೇಬರು
ಸೇರಿಸಿದ್ದಲ್ಲ
ಎಮರ್ಜೆನ್ಸಿ ಶಿಲ್ಪಿ
ಇಂದಿರಾ ಗಾಂಧಿ ತುರುಕಿದ
ಚಿಂತನೆಗಳು.
ಅದರ ಬಗ್ಗೆ ವಿಪರೀತ
ಪ್ರೀತಿ ಏಕೆ ?
ಪ್ರಿಯ ನೆಹರೂವಾದಿಗಳೇ,
ನಿಮ್ಮ
ರಾಹುಲ್ ಗಾಂಧಿಗೆ
ನಮ್ಮ
ಬಾಬಾ ಸಾಹೇಬರು ಬರೆದ ಮೂಲ ಸಂವಿಧಾನದ ಪ್ರತಿ ಇದ್ದರೆ ಕೊಡಿ,
ಓದಿ ಅರಿತುಕೊಳ್ಳಲಿ…
1976ರಲ್ಲಿ ಕಾಂಗ್ರೆಸ್ ತಿರುಚಿದ ಪ್ರಸ್ತಾವನೆಯ ಸಾಲುಗಳನ್ನು ಓದಿದರೆ, ಅಜ್ಜಿಯ ಸರ್ವಾಧಿಕಾರದ ಕೆಟ್ಟಗುಣವೇ ಬಂದೀತು….
ನಿಮ್ಮ, ನಿಮ್ಮ ನಾಯಕನ ಒಳಿತಿಗಾದರೂ
ಅಂಬೇಡ್ಕರ್ ಅವರಿಗೆ ಶರಣಾಗಿ..
ಪ್ರಿಯ ಜನರೇ,
ಜಾತ್ಯತೀತವಾದ ಹಿಂದೂಗಳ ಹಾಗೂ ಭಾರತೀಯರ ರಕ್ತದ ಕಣಕಣದಲ್ಲಿ ಬೆರೆತಿದೆ
ಸಮಾಜವಾದದ ಬಗ್ಗೆ ಆಕ್ಷೇಪವಿಲ್ಲ
ಆದರೆ, ನೆನಪಿರಲಿ
ಈ ಎರಡೂ ಕೂಡ ವಾದಗಳಷ್ಟೆ
ಸ್ವಾತಂತ್ರ್ಯ, ಸಮಾನತೆ, ಸೋದರತ್ವ, ಸಾಮಾಜಿಕ ನ್ಯಾಯದಂತೆ ಶಾಶ್ವತ ಮೌಲ್ಯಗಳಲ್ಲ…
ಅಂಬೇಡ್ಕರ್ ಎಂದರೆ ಮೌಲ್ಯ!
ಡಾ.ಈ.ಸಿ.ನಿಂಗರಾಜ್ ಗೌಡ,
ಸಿಂಡಿಕೇಟ್ ಮಾಜಿ ಸದಸ್ಯರು,
ಮೈಸೂರು ವಿಶ್ವವಿದ್ಯಾನಿಲಯ.