ನಂದಿನಿ ಮೈಸೂರು
ಮೇ.15 ರಂದು ಭಾರತೀಯ ಜನತಾ ಪಾರ್ಟಿ ಮತ್ತು ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷದ ದಕ್ಷಿಣ ಶಿಕ್ಷಕರ ಕ್ಷೇತ್ರದ ಎನ್ ಡಿಎ ಅಭ್ಯರ್ಥಿಯಾಗಿ ಡಾ ಈ ಸಿ ನಿಂಗರಾಜ್ ಗೌಡ ರವರು ನಾಮಪತ್ರ ಸಲ್ಲಿಸಿದರು.ಬಿ ಫಾರಂ ಸಿಗದ ಹಿನ್ನಲೆ ನಿಂಗರಾಜೇಗೌಡರವರು ತಮ್ಮ ಸ್ಪರ್ಧೆಯಿಂದ ಹಿಂದೆ ಸೆರೆದಿದ್ದಾರೆ.
ಮೇ.18 ರಂದು ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಸ್ಪರ್ಥೆಯಿಂದ ಉಮೇದಾರಿಕೆಯನ್ನು ಹಿಂಪಡೆದಿರುವುದಾಗಿ ಡಾ.ಇ.ಸಿ.ನಿಂಗರಾಜೇಗೌಡರಾವರು ಮಾಹಿತಿ ನೀಡಿದ್ದಾರೆ.
ಮೇ.11 ರಂದು ಬಿಜೆಪಿ ಪಕ್ಷದಿಂದ ಎನ್ ಡಿ ಎ ಅಭ್ಯರ್ಥಿಯಾಗಿ ಡಾ.ಇ.ಸಿ.ನಿಂಗರಾಜೇಗೌಡರಿಗೆ ಅಧಿಕೃತವಾಗಿ ಪಟ್ಟಿ ಬಿಡುಗಡೆಯಾಗಿತ್ತು.ಹೆಸರು ಅಂತಿಮವಾಗಿ ಹೊರಬಿದ್ದ ನಂತರ ಕಾರ್ಯ ಪ್ರವೃತ್ತಿಯಾಗಿದ್ದ ಡಾ.ಇ.ಸಿ.ನಿಂಗರಾಜೇಗೌಡರವರು ಮೇ.15 ರಂದು ಬಿಜೆಪಿ ಪಕ್ಷದಿಂದ ಬಿ ಫಾರಂ ಇಲ್ಲದೇ ಒಳ್ಳೇಯ ಘಳಿಗೆ ಎಂದು ಒಂದು ಸೆಟ್ ಕಾಪಿಯನ್ನು ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ್ದರು.
ಅಂದು ಸಂಜೆಯೇ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ಪಕ್ಷದಿಂದ ವಿವೇಕಾನಂದ ಅವರಿಗೆ ಟಿಕೇಟ್ ಘೋಷಣೆ ಮಾಡಿತ್ತು.ನಂತರ ಬಿಜೆಪಿ ವರಿಷ್ಠರು ಡಾ.ಇ.ಸಿ.ನಿಂಗರಾಜೇಗೌಡರವರ ಮನ ಒಲಿಸಿ ಮೈತ್ರಿ ಅಭ್ಯರ್ಥಿ ವಿವೇಕಾನಂದ ಅವರಿಗೆ ಬೆಂಬಲಿಸುವುದಾಗಿ ಸೂಚಿಸಿದ್ದಾರೆ.ತದ ನಂತರ ಡಾ.ಇ.ಸಿ.ನಿಂಗರಾಜೇಗೌಡರವರು ಅಂತಿಮವಾಗಿ ಮೋದಿ ರವರ ಕೈ ಬಲ ಪಡಿಸಲು ಮೈತ್ರಿ ಅಭ್ಯರ್ಥಿಯಾಗಿರುವ ವಿವೇಕಾನಂದ ಅವರಿಗೆ ಬೆಂಬಲಿಸುವುದಾಗಿ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಮಾಹಿತಿ ನೀಡಿದರು. ವಿವೇಕಾನಂದ ಅವರು ಡಾ.ಇ.ಸಿ.ನಿಂಗರಾಜೇಗೌಡರವರಿಗೆ ಕೈ ಮುಗಿದು ನನಗೆ ನಿಮ್ಮ ಬೆಂಬಲ ಅವಶ್ಯಕತೆ ಇದೆ ನೀವು ಸಹಕರಿಸುವಂತೆ ಮನವಿ ಮಾಡಿದರು.