ರಾಜೇಶ್ ಬೈಲುಕುಪ್ಪೆ
ಬೈಲಕುಪ್ಪೆ : ವೈದ್ಯಕೀಯ ಸೇವೆಯು ಕೂಡ ಒಂದು ಸಾಮಾಜಿಕ ಜವಾಬ್ದಾರಿಯುತ ಸೇವೆಯಾಗಿದೆ ಎಂದು ಮೈಸೂರು ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಂಜುನಾಥ್ ತಿಳಿಸಿದರು.
ತಾಲೂಕಿನ ಬೈಲುಕುಪ್ಪೆ ಗ್ರಾಮದ ಎಸ್ ಎಲ್ ವಿ ಕಲ್ಯಾಣ ಮಂಟಪದಲ್ಲಿ ನಂದಿ ಮೆಡಿಕಲ್ ರವರು ಉತ್ಪಾದನೆ ಮಾಡಿರುವ ಜೀರೋ ಪೇಯಿನ್ ಜೆಲ್ ನೋವು ನಿವಾರಕ ಔಷಧಿ ಉತ್ಪನ್ನವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ಪ್ರತಿನಿತ್ಯ ಜನಸಾಮಾನ್ಯರು ತಮ್ಮ ಕೆಲಸದ ಒತ್ತಡದಿಂದ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಸಣ್ಣಪುಟ್ಟ ರೋಗಗಳಿಗೂ ಕೂಡ ಔಷಧಿಗಳನ್ನು ತೆಗೆದುಕೊಳ್ಳುವ ಅನಿವಾರ್ಯತೆ ಬಂದೊದಾಗಿದೆ.ಈ ಕಾರಣದಿಂದ ರೋಗಿಗಳಿಗೆ ಉತ್ಪಾದನೆ ಮಾಡುವ ಉತ್ಪಾದನೆಗಳು ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಆಗ ಮಾತ್ರ ರೋಗಿಯ ಆರೋಗ್ಯ ಸುಧಾರಿಸಲು ಸಾಧ್ಯ.ಈ ಹಿನ್ನೆಲೆಯಲ್ಲಿ ನಂದಿ ಮೆಡಿಕಲ್ ಮಾಲೀಕರಾದ ಹೇಮೇಶ್ ಮೋನಿಕಾ ರವರು ಅವಿರತ ಶ್ರಮದಿಂದ ಜೀರೋ ಪೇನ್ ಜೆಲ್ ನೋವು ನಿವಾರಕ ಉತ್ಪನ್ನವನ್ನು ಕಂಡುಹಿಡಿದಿರುವುದು ಶ್ಲಾಘನೀಯವಾದದ್ದು. ಕಿರಿಯ ವಯಸ್ಸಿನಲ್ಲಿಯೇ ಇಂತಹ ಸಾಧನೆ ಮಾಡಿರುವ ಇವರ ಸೇವೆ ಮತ್ತಷ್ಟು ಯಶಸ್ಸು ಸಾಧಿಸಿ ಸಮಾಜಕ್ಕೆ ಕೊಡುಗೆ ನೀಡಲಿ ಎಂದು ಆಶಿಸಿದರು.
ಕಿರುತೆರೆ ನಟಿ ತನಿಷಾ ಕುಪ್ಪಂಡ ಮಾತನಾಡಿ ಮಾನವನಿಗೆ ಆರೋಗ್ಯ ಅತೀ ಮುಖ್ಯವಾದ ಅಂಶವಾಗಿದೆ. ಇದಕ್ಕಾಗಿ ಲಕ್ಷಾಂತರ ರೂಗಳನ್ನು ಜನರು ವ್ಯಯ ಮಾಡಬೇಕಾದ ಪರಿಸ್ಥಿತಿ ಇದೆ. ಪ್ರಾರಂಭದಲ್ಲಿ ಆರೋಗ್ಯವನ್ನು ಸುಧಾರಿಸುವಲ್ಲಿ ಜನರು ಜಾಗೃತರಾಗಬೇಕು. ನಂದಿ ಮೆಡಿಕಲ್ ಮಾಲೀಕರಾದ ಹೇಮೇಶ್ ರವರ ಆರೋಗ್ಯ ಕ್ಷೇತ್ರದ ಸೇವೆಯು ಅನನ್ಯವಾದದ್ದು, ಇವರ ಸೇವೆ ಹೀಗೆಯೆ ಮುಂದುವರೆಯಲಿ ಎಂದರು.
ಕಾರ್ಯಕ್ರಮದಲ್ಲಿ ಅಂಗವಿಕಲ ಮಕ್ಕಳಿಗೆ ನಂದಿ ಮೆಡಿಕಲ್ ವತಿಯಿಂದ ವೀಲ್ ಚೇರ್ ಗಳನ್ನು ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ,ಮೈಸೂರು ಜಿಲ್ಲಾ ಕಾಂಗ್ರೆಸ್ ಹಿರಿಯ ಕಾರ್ಯದರ್ಶಿ ಸಮಿವುಲ್ಲಾ ಖಾನ್,ಕರುಣಾ ಹೋಂ ವೃದ್ದಾಶ್ರಮದ ಅಧ್ಯಕ್ಷ ಕುಭೆ ರಿಂನ್ಸೋಚೆ,ಉದ್ಯಮಿ ಡಿ ಆರ್ ಎಸ್ ಗ್ರೂಪ್ ಮಾಲೀಕ ಸುಬ್ರಹ್ಮಣ್ಯ. ಡಿ,ಶಿಕ್ಷಕರ ಸಂಘದ ಅಧ್ಯಕ್ಷ ರಾಮಚಂದ್ರ,ಡಾ. ವಿರುಪಾಕ್ಷಯ್ಯ,ನಂದಿ ಮೆಡಿಕಲ್ಸ್ ಮಾಲೀಕ ಹೇಮೇಶ್ ಮೋನಿಕಾ, ನೇಚರ್ ಸಿಟಿ ರಾಜೇಗೌಡ,ಕೇಬಲ್ ದಿನೇಶ್,ಗ್ರಾಮಸ್ಥರಾದ ಪೋಸ್ಟ್ ಮಾಸ್ಟರ್ ರಮೇಶ್,ಗಣೇಶ್,ರಘು, ನಿರ್ಮಲ್ ವಾಟರ್ ರಾಜೇಶ್, ಹೋಟೆಲ್ ರವಿ,ಸಂತೋಷ್, ಪ್ರವೀಣ್,ಸಿಬ್ಬಂದಿಗಳಾದ ದಿನೇಶ್, ಕಾವ್ಯ, ನಂದಿನಿ, ರಂಜಿತ, ಸೇರಿದಂತೆ ಮತ್ತಿತರರು ಇದ್ದರು.