ಧಾನ್ ಫ಼ೌಂಡೇಷನ್ ಸಂಸ್ಥೆಯ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ನಂದಿನಿ ಮೈಸೂರು

*”ಧಾನ್ ಫ಼ೌಂಡೇಷನ್ ಸಂಸ್ಥೆಯ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ”*

ಸುಮಾರು ಎರಡು ದಶಕಗಳಿಂದ, ಧಾನ್ ಫ಼ೌಂಡೇಷನ್ ಸಂಸ್ಥೆಯು ಮೈಸೂರು ಜಿಲ್ಲೆಯಲ್ಲಿ ಮಹಿಳಾ ಸಬಲಿಕರಣಕ್ಕೆ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಪ್ರಗತಿಯನ್ನು ಸಾಧಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶ್ರಮಿಸುತ್ತಿದೆ. ಪ್ರಸ್ತುತ ಫೌಂಡೇಷನ್ ಮೈಸೂರು, ನಂಜನಗೂಡು, ಟಿ. ನರಸೀಪುರ, ಮಳವಳ್ಳಿ, ಕೊಳ್ಳೇಗಾಲ, ಪಿರಿಯಾಪಟ್ಟಣ, ಎಚ್.ಡಿ. ಕೋಟೆ, ಸರ್ಗೂರು ಮತ್ತು ಹುಣಸೂರು ಸೇರಿದಂತೆ ಮೈಸೂರು ಪ್ರದೇಶಿಕ ಕ್ಷೆತ್ರದಲ್ಲಿ ಒಂಬತ್ತು ತಾಲ್ಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಒಂಬತ್ತು ತಾಲ್ಲೂಕುಗಳಲ್ಲಿ ಒಟ್ಟು ಏಳು ಕಳಂಜಿಯಂ SHG ಫೆಡರೇಷನ್‌ಗಳನ್ನು ರಚಿಸಲಾಗಿದಿ, ಒಕ್ಕೂಟಗಳ ಅಡಿಯಲ್ಲಿ ಸುಮಾರು 2200 ಕಳಂಜಿಯಂ SHG ಗಳನ್ನು ರಚಿಸಿದ್ದು, ಸುಮಾರು 30000 ಸದಸ್ಯರನ್ನು ಒಳಗೊಂಡಿದೆ. ಇದರೊಟ್ಟಿಗೆ ಸಮಾಜಮುಖಿ ಸೇವೆಗಳನ್ನೂ ಒದಗಿಸುತ್ತಿದೆ, ವಿವಿಧ ಸರ್ಕಾರಿ ಹಾಗು ಸರ್ಕಾರೇತರ ಸಂಸ್ಥೆಗಳ ಸಹಯೋಗಿಗಳೊಂದಿಗೆ ಇತರ ಯೋಜನೆಗಳನ್ನು ಕೂಡಾ ಜಾರಿಗೊಳಿಸಲಾಗುತ್ತಿದೆ.

ಈ ನೀಟ್ಟಿನಲ್ಲಿ ದಿನಾಂಕ 8 ಮಾರ್ಚ್ 2025 ರಂದು ಅಂತರಾಷ್ಟ್ರೀಯ ಮಹಿಳಾ ದಿನ ವನ್ನು “ಎಲ್ಲಾ ಮಹಿಳೆಯರು ಮತ್ತು ಬಾಲಕಿಯರಿಗಾಗಿ: ಹಕ್ಕುಗಳು. ಸಮಾನತೆ. ಸಬಲೀಕರಣ.” ಎಂಬ ಶಿರ್ಷಿಕೆಯೊಂದಿಗೆ ಕಾರ್ಯಕ್ರಮವನ್ನು ಅಮಿಗೊ ಪರ್ಟಿಹಾಲ್, ನೆತಾಜಿ ಸರ್ಕಲ್, ದಟ್ಟಗಹಳ್ಳಿಯಲ್ಲಿ ಹಮ್ಮಿಕೊಳ್ಳಲಾಯಿತು.

ಶ್ರೀ ಶಂಕರ್ ಪ್ರಸಾದ್ ಪ್ರಾದೇಶಿಕ ಸಂಯೋಜಕರು ಮಾತನಾಡಿ, ಇಂದು, ಅಂತರಾಷ್ಟ್ರೀಯ ಮಹಿಳಾ ದಿನದ ಈ ಪವಿತ್ರ ಕ್ಷಣದಲ್ಲಿ, ಇಲ್ಲಿ ನೆರೆದಿರುವ ಎಲ್ಲ ಮಹಿಳೆಯರನ್ನು ಹಾರ್ದಿಕ ಅಭಿನಂದಿಸಿದರು!
ಈ ದಿನವು ಕೇವಲ ಸಂಭ್ರಮದ ದಿನವಲ್ಲ, ಇದು ಸ್ತ್ರೀಯರ ಶಕ್ತಿ, ಪರಿಶ್ರಮ, ತಾಳ್ಮೆ ಮತ್ತು ಸಾಧನೆಗಳನ್ನು ಸ್ಮರಿಸುವ ದಿನವೂ ಆಗಿದೆ. ಮಹಿಳಾ ದಿನಾಚರಣೆಯ ಪ್ರಮುಖ್ಯತೆ ಹಾಗೂ ೨೦೨೫ ನೇ ಸಾಲಿನ ಶೀರ್ಷಿಕೆ ಬಗ್ಗೆ ಹಾಗೂ ಅದರ ಕುರಿತಾಗಿ ಸಂಸ್ಥೆಯು ತೆಗೆದುಕೋಂಡಿರುವ ಕೃಷಿ, ಉದ್ಯಮಶೀಲತೆ, ನಾಯಕತ್ವ ಯೊಜನೆಗಳ ಬಗ್ಗೆ ವಿಸ್ಥಾರವಾಗಿ ಮಾತನಡಿದರು. ಕುಟುಂಬದಲ್ಲಿ ಮಹಿಳೆಯ ಪಾತ್ರ ಹಾಗೂ ನಿಭಯಿಸುವ ವಿಚರವನ್ನು ಪ್ರಸ್ಥಾಪಿಸಿದರು.

ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಅಗಮಿಸಿದ ಶ್ರೀಮತಿ ಮಿಲನ ಭರತ್, ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಕೊಡಗು ಇವರು ಸಭೆಯನ್ನುದ್ದೇಶಿಸಿ ಮಾತನಡಿ ನಮ್ಮ ಸಮಾಜವನ್ನು, ನಮ್ಮ ಕುಟುಂಬವನ್ನು, ನಮ್ಮ ಸಂಸ್ಕೃತಿಯನ್ನು ರೂಪಿಸುವಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಹಾಗೆ ಅವರ ಜೀವನದ ಅನುಭವಗಳ ಉದಾಹರಣೆಗಳೊಂದಿಗೆ ನೆರೆದಿದ್ದ ಮಹಿಳೆಯರ ಗಮನಸೆಳೇದರು.

ಶ್ರೀಮತಿ ಸರಿತ, ನಿರ್ದೆಶಕರು, RUDSET ಸಂಸ್ಥೆ, ಮೈಸೂರು ಮಾತನಾಡಿ, RUDSET ಸಂಸ್ಥೆಯ ವತಿಯಿಂದ ಸಿಗುವ ತರಬೇತಿಗಳು ಹಾಗು ಸೌಲಭ್ಯಗಳನ್ನು ಸದುಪಯೋಗಿಸಿಕೊಂಡು ಜೀವನೋಪಯ ಸುಧಾರಣೆಯಾತ್ತ ಒತ್ತು ಕೊಡಬೇಕೆಂದು ಮಾಹಿತಿ ನೀಡಿದರು.

ಶ್ರೀಮತಿ ಹಾಗೂ ವಸಂತ ಕುಮಾರಿ, ಅಧ್ಯಕ್ಷರು, WISE, ಮೈಸೂರು, ಇವರು ಸಹ ಸಭೆಯನ್ನುದ್ದೇಶಿಸಿ ಕೆಲವು ಜೀವನದ ಅನುಭವಗಳನ್ನು ಹಾಗು ಮಹಿಳೆಯಾಗಿ ಸಿಗುವ ಅವಕಾಶಗಳನ್ನ ಬಳಸಿಕೋಂಡಾಗ ಮಹತ್ವವಾದ ಸ್ತಾನವನ್ನು ಸಮಜದಲ್ಲಿ ಗಳಿಸಿಕೊಳ್ಳಬಹುದೆಂಬ ಸಂದೇಶವನ್ನು ನೀಡಿದರು.

ಸಂಸ್ಥೆಯ ರಾಜ್ಯ ಮಟ್ಟದ ನಾಯಕಿ ಶ್ರೀಮತಿ ಪ್ರಮಿಳ ಹಾಗೂ ಸದಸ್ಯರುಗಳು ಅವರ ಜೀವನದಲ್ಲಿ ಕಂಡ ಬದಲಾವಣೆಗಳ ಅನುಭವಗಳನ್ನು ಹಂಚಿಕೊಂಡರು.

ಈ ಕಾರ್ಯಕ್ರದಲ್ಲಿ

*ನಮ್ಮ ಕಳಂಜಿಯಂ ನಮ್ಮ ಹೆಮ್ಮೆ-*
*”ಕಳಂಜಿಯಂನೊಂದಿಗೆ ಕೈ ಜೋಡಿಸೋಣ, ಬಡತನವನ್ನು ಜಯಿಸೋಣ”* ಎಂಬ ಘೋಷಣಯ ವಾಕ್ಯವನ್ನು ಬಿಡುಗಡೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಶ್ರೀಮತಿ ಜಯಲಕ್ಷ್ಮಿ ಸ್ವಾಗತವನ್ನು, ಶ್ರೀಮತಿ ಭಾಗ್ಯ ವಂದನಾರ್ಪಣೆಯನ್ನು, ಶ್ರೀ ಪ್ರಭು ಶಂಕರ್ ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿಕೊಟ್ಟರು. ಕುಮಾರಿ ಸುನೀತಾ, ಕುಮಾರಿ ಕೃತಿಕಾ ಹಾಗೂ ಧಾನ್ ಸಂಸ್ಥೆಯ ಹಾಗೂ CFL ಸಿಬ್ಬಂದಿ ವರ್ಗ ಹಾಗೂ ಸುಮಾರು 200 ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *